ಭೂಕಂಪ ಪೀಡಿತರಿಗೆ ನೆರವಾಗಿರಿ; ನೇಪಾಳಕ್ಕೆ ಧಾವಿಸಿದ ಜಮಾಅತೆ ಇಸ್ಲಾವಿೂ ಹಿಂದ್

Spread the love

ಮಂಗಳೂರು: ನೇಪಾಳದಲ್ಲಿ ನಡೆದಿರುವ ಭೀಕರ ಭೂಕಂಪದಿಂದಾಗಿ ಉಂಟಾದ ಸಾವು-ನೋವು ಮತ್ತು ಹಾನಿಯ ಬಗ್ಗೆ ಜಮಾಅತೆ ಇಸ್ಲಾವಿೂ ಹಿಂದ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದು, ಮಾತ್ರವಲ್ಲ ಬಿಹಾರ ಮತ್ತು ಉತ್ತರ ಪ್ರದೇಶ ದೇಶದ ವಿವಿಧ ರಾಜ್ಯಗಳಲ್ಲಿ ಇದರ ದುಷ್ಪರಿಣಾಮ ಗೋಚರಿಸಿದ್ದು ಅಪಾರ ಸಾವು ನೋವು ಹಾಗೂ ನಾಶ-ನಷ್ಟಗಳು ಸಂಭವಿಸಿದೆ. ಇಂತಹ ಸಂದರ್ಭದಲ್ಲಿ ಸರ್ವ ಧರ್ಮೀಯರು ಜನರ ನೆರವಿಗಾಗಿ ಸ್ಪಂದಿಸಬೇಕು. ಇಂತಹ ಪ್ರಾಕೃತಿ ವಿಕೋಪ ಸಂದರ್ಭದಲ್ಲಿ ಜಮಾಅತ್ ಕೂಡ ತನ್ನದೇ ಪರಿಹಾರ ನಿಧಿಯನ್ನು ಸ್ಥಾಪಿಸಿರುವುದಾಗಿಯೂ ಜನರು ಈ ನಿಧಿಗೆ ನೆರವನ್ನು ಕಳುಹಿಸಿಕೊಡಬೇಕೆಂದೂ ಜಮಾಅತ್ ರಾಷ್ಟ್ರೀಯ ಅಧ್ಯಕ್ಷ  ಜಲಾಲುದ್ದೀನ್ ಉಮರಿಯವರು ಮನವಿಯನ್ನು ಮಾಡಿಕೊಂಡಿದ್ದಾರೆ . ಇಂತಹ ಪ್ರಾಕೃತಿಕ ವಿಕೋಪಗಳು ದೇವಭಯ ಮತ್ತು ಸಹೋದರತ್ವದ ಸಂದೇಶವನ್ನು ನಮ್ಮೆಲ್ಲರಿಗೆ ತಿಳಿಸಿಕೊಡುತ್ತದೆ. ಈ ನಿಟ್ಟಿನಲ್ಲಿ ದೇವ ಸಂಪ್ರೀತಿಯನ್ನು ಬಯಸಿ ಎಲ್ಲರೂ ಸಂತ್ರಸರಿಗೆ ತನು-ಮನ-ಧನದೊಂದಿಗೆ ನೆರವು ನೀಡಬೇಕು ಎಂದಿದ್ದಾರೆ. ಮಾತ್ರವಲ್ಲ, ಭೂಕಂಪ ಪೀಡಿತ ನೇಪಾಳದ ದುರಂತ ಭೂಮಿಗೆ ಜಮಾಅತೆ ಇಸ್ಲಾವಿೂ ಹಿಂದ್ ಕೇರಳ ಘಟಕದ ಪರಿಹಾರ ತಂಡವು ಹೊರಟಿದ್ದು ನಾಳೆ (ಎಪ್ರಿಲ್. 28) ಕಾಠ್ಮಂಡುವಿಗೆ ತಲುಪಲಿದ್ದಾರೆ. ಈ ತಂಡದಲ್ಲಿ ಶಂಶುದ್ದೀನ್.ಪಿ.ಎ, ಸ್ವಾಲಿಹ್ ತ್ರಿಶೂರ್, ಬಶೀರ್ ಶರ್ಕಿ, ಮಿಸ್‍ಅಬ್ ಇರಿಕ್ಕೂರ್, ರಿಝ್ವಾನ್ ಮುಂತಾದವರಿದ್ದಾರೆ. ಐಡಿಯಲ್ ರಿಲೀಫ್ ವಿಂಗ್ (IಖW) ಪರಿಹಾರ ತಂಡದ  ವೈದ್ಯಕೀಯ ವಿಭಾಗವು ಶೀಘ್ರವೇ ನೇಪಾಳಕ್ಕೆ ಹೊರಡಲಿದೆ.

ನೆರವು ಕಳುಹಿಸಬೇಕಾದ ವಿಳಾಸ,

Nepal Earthquake Relief Fund, MARKAZ RELIEF FUND, Bank A/c No. 1447308475, CENTRAL BANK OF INDIA, IFC Code: CBIN0282953, Br. Code 02953, Sukhdev Vihar, Br. New Delhi,

Contact: Shafi Madani: 91-9818996951, Markaz JIH: 91-8826732590

ಮಂಗಳೂರಿನ ಹಿದಾಯತ್ ಸೆಂಟರ್‍ನಲ್ಲೂ ಪರಿಹಾರ ಧನ ಸ್ವೀಕರಿಸಲಾಗುವುದು.

ಸಂಪರ್ಕಿಸಿರಿ: 0824-2422786, 2424758


Spread the love