ಭ್ರಷ್ಟ ಲೋಕಾ: ಅಶ್ವಿನ್ ಮತ್ತು ಸಹಚರನಿಂದ 10.91 ಲಕ್ಷ ವಂಚನೆ: ಹೊಸ ಎಫ್ಐಆರ್

Spread the love

ಬೆಂಗಳೂರು: ಲೋಕಯುಕ್ತ ಭಾಸ್ಕರ್ ರಾವ್ ಅವರ ಪುತ್ರ ಯೆರಭಾಟಿ ಅಶ್ವಿನ್ ವಿರುದ್ಧ ವಿಶೇಷ ತನಿಖಾ ದಳ ನೂತನ ಎಫ್ ಐ ಆರ್ ದಾಖಲು ಮಾಡಿದೆ.

ಅಮಾನತುಗೊಂಡಿರುವ ಲೋಕಾಯುಕ್ತದ ಸಾರ್ವಜನಿಕ ಸಂಪರ್ಕಾಧಿಕಾರಿ ಸಯ್ಯದ್ ರಿಯಾಜ್, ದಲ್ಲಾಳಿ ಭಾಸ್ಕರ್, ಅಶ್ವಿನ್ ಮತ್ತು ಅವನ ಸಹಚರ ನರಸಿಂಹ ರಾವ್ ಅವರನ್ನು ಪ್ರಮುಖ ಆರೋಪಿಗಳೆಂದು ಹೆಸರಿಸಲಾಗಿದೆ. ಇದು ಅಶ್ವಿನ್ ವಿರುದ್ಧ ಮೂರನೆ ಎಫ್ ಐ ಆರ್ ಆಗಿದ್ದು, ಭಾಸ್ಕರ್ ಮತ್ತು ರಿಯಾಜ್ ವಿರುದ್ಧ ಎರಡನೆ ಎಫ್ ಐ ಆರ್ ಮತ್ತು ಈ ಮೂವರೂ ಸದ್ಯಕ್ಕೆ ಪೊಲೀಸರ ಬಂಧನದಲ್ಲಿದ್ದಾರೆ.

ಮಾಜಿ ಜಿಲ್ಲ ಪಂಚಾಯಿತಿ ಸದಸ್ಯ, ಉದ್ಯಮಿ ಪಿ ಎನ್ ಕೃಷ್ಣಮೂರ್ತಿ ಅವರ ದೂರಿನ ಮೇಲೆ ಈ ಎಫ್ ಐ ಆರ್ ದಾಖಲಿಸಲಾಗಿದೆ. ಈ ದೂರಿನ ಪ್ರಕಾರ ನರಸಿಂಹ ರಾವ್ ಎನ್ನುವವರು ಕೃಷ್ಣ ಮೂರ್ತಿ ಅವರನ್ನು ಅಶ್ವಿನ್ ಗೆ ಪರಿಚಯ ಮಾಡಿಕೊಟ್ಟಿದ್ದಾರೆ. ಇದು ರಾಜರಾಜೇಶ್ವರಿ ನಗರದ ಶಾಸಕ ಮುನಿರತ್ನ ಅವರೊಂದಿಗಿನ ಹಣಕಾಸು ವಿವಾವದವನ್ನು ಬಗೆಹರಿಸಿಕೊಡುವುದಾಗಿ ಅಶ್ವಿನ್ ತಿಳಿಸಿದ್ದು, ಯು ಬಿ ಸಿಟಿ ಹೋಟೆಲ್ ಒಂದರಲ್ಲಿ ಭೇಟಿಯಾಗಿದ್ದಾರೆ. ನಂತರ ಕೋರಮಮಂಗಲದ ಆಸ್ತಿಯ ಖಾತೆಯನ್ನು ಮಾಡಿಸಿಕೊಡುವುದಾಗಿ ಕೃಷ್ಣಮೂರ್ತಿಯವರಿಗೆ ಅಶ್ವಿನ್ ತಿಳಿಸಿದ್ದಾನೆ.

ಇದಕ್ಕಾಗಿ 20 ಲಕ್ಷ ಹಣವನ್ನು ಅಶ್ವಿನ್ ಬೇಡಿಕೆಯಿಟ್ಟಿದ್ದು ಅದರಲಿ 10.91 ಲಕ್ಷ ದುಡ್ಡನ್ನು ಹಲವು ಕಂತುಗಳಲ್ಲಿ ಅಶ್ವಿನ್ ಮತ್ತು ನರಸಿಂಹ ರಾವ್ ಅವರಿಗೆ ಕೃಷ್ಣಮೂರ್ತಿ ಪಾವತಿಸಿದ್ದಾರೆ. ಈ ಹಣ ಪಾವತಿಸಿದ ಮೇಲು ಖಾತೆಯನನ್ನು ಮಾಡಲಾಗಿಲ್ಲ ಎಂದು ಕೃಷ್ಣಮೂರ್ತಿ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಇದರ ನಂತರ ಅಶ್ವಿನ್ ಅವರನ್ನು ಮತ್ತೆ ಭೇಟಿ ಮಾಡಿದ ಮೇಲೆ, ಲೋಕಾಯುಕ್ತ ಕಚೇರಿಗೆ ಕೃಷ್ಣಮೂರ್ತಿ ಅವರಿಗೆ ಬರುವಂತೆ ಹೇಳಿ ಕೆಲಸ ಮಾಡಿಕೊಡುವುದಾಗಿ ಭರವಸೆ ನೀಡಿದ್ದರು, ಕೆಲಸ ಮಾತ್ರ ಆಗಲಿಲ್ಲ ಎಂದು ದೂರಿನಲ್ಲಿ ಅವರು ತಿಳಿಸಿದ್ದಾರೆ.


Spread the love