ಭ್ರಷ್ಟಾಚಾರದ ಆರೋಪ; ಮಂಗಳೂರು ತಾಪಂ. ಇಒ ಹುದ್ದೆಯಿಂದ ಮುಕ್ತಿ ನೀಡಿದ ಜಿಪಂ ಸಿಇಒ
ಮಂಗಳೂರು: ತಾಲೂಕು ಪಂಚಾಯತ್ ಮಂಗಳೂರು ಇದರ ಪ್ರಭಾರ ಕಾರ್ಯನಿರ್ವಹಣಾಧಿಕಾರಿ ಜಿ. ಸದಾನಂದ ಅವರನ್ನು ಹುದ್ದೆಯಿಂದ ಮುಕ್ತಿಗೊಳಿಸಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಯವರು ಆದೇಶ ಹೊರಡಿಸಿದ್ದಾರೆ.
ಜಿ ಸದಾನಂದ ಅವರ ಮೇಲೆ ಹಲವಾರು ಆರೋಪಗಳಿದ್ದು, ಈಗಾಗಲೇ ಅವರಿಗೆ ನೋಟಿಸು ನೀಡಿದ್ದರೂ ಕೂಡ ಸೂಕ್ತ ಉತ್ತರ ನೀಡಿರಲಿಲ್ಲ. ಅದಲ್ಲದೆ ಶಾಸಕ ಭರತ್ ಶೆಟ್ಟಿ ಹಾಗೂ ಸಂಸದ ನಳಿನ್ ಕುಮಾರ್ ಅವರು ಕೂಡ ಸೇವೆಯಿಂದ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಹುದ್ದೆಯಿಂದ ತೆರವುಗೊಳಿಸುವಂತೆ ಗಡವು ನೀಡಿದ್ದರು.
ಆದ್ದರಿಂದ ಜಿಪಂ ಸಿಇಒ ಅವರು ಕ್ರಮ ಕೈಗೊಂಡಿದ್ದು, ಸದ್ರಿ ಹುದ್ದೆಯನ್ನು ಎ. ಸುಜನ್ ಚಂದ್ರ ರಾವ್, ಸಹಾಯಕ ಕಾರ್ಯಕಾರಿ ಅಭಯಂತರರು, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗ ಮಂಗಳೂರು ತಮ್ಮ ಹುದ್ದೆಯ ಜೊತೆ ಮಂಗಳೂರು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಯವರ ಹೆಚ್ಚುವರಿ ಪ್ರಭಾರವನ್ನು ಮುಂದಿನ ಆದೇಶದವರೆಗೆ ನಿರ್ವಹಿಸುವಂತೆ ಸೂಚನೆ ನೀಡಿದ್ದಾರೆ.
ಸದಾನಂದ ಅವರು ಮಂಗಳೂರು ತಾ.ಪಂ. ನ ಪ್ರಭಾರ ಇ ಓ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಅವರ ಮೂಲಹುದ್ದೆ ತಾ.ಪಂ. ಸಹಾಯಕ ನಿರ್ದೇಶಕ (AD) ಆಗಿರುತ್ತದೆ. ಇದೀಗ ಇ.ಓ ಹುದ್ದೆಯ ಪ್ರಭಾರದಿಂದ ಅವರನ್ನು ಬಿಡುಗಡೆ ಮಾಡಲಾಗಿದ್ದು, ತಾ.ಪಂ. AD ಆಗಿ ಸದಾನಂದ ಮುಂದುವರಿಯಲಿದ್ದಾರೆ. ತಾ.ಪಂ. ನಲ್ಲಿ E.O. ನಂತರದ ಹುದ್ದೆ A.D ಆಗಿರುತ್ತದೆ.