ಮಂಗಳೂರಿಗರು ನನ್ನನ್ನು ಮಗಳಂತೆ ನೋಡಿದ್ದಾರೆ ; ರಮ್ಯಾ

Spread the love

ಮಂಗಳೂರಿಗರು ನನ್ನನ್ನು ಮಗಳಂತೆ ನೋಡಿದ್ದಾರೆ ; ರಮ್ಯಾ

ಮಂಗಳೂರು: ಕದ್ರಿ ಮೈದಾನದಲ್ಲಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಮಾಜಿ ಸಂಸದೆ ಹಾಗೂ ಕನ್ನಡ ಚಿತ್ರನಟಿ ರಮ್ಯಾ ವೇದಿಕೆಯಲ್ಲಿ ಆಸೀನರಾದ ಸಂದರ್ಭದಲ್ಲಿ ಬಿಜೆಪಿ ಹಾಗೂ ಸಂಘಪರಿವಾರದ ಕಾರ್ಯಕರ್ತರು ಶೂ ಮತ್ತು ಕಲ್ಲು ಎಸೆದ ಘಟನೆ ನಡೆದಿದೆ.

“ಮಂಗಳೂರನ್ನು ನರಕ’ ಎಂದು ಹೇಳಿಕೆ ನೀಡಿದ್ದರೆನ್ನಲಾದ ರಮ್ಯಾ ಉಪಸ್ಥಿತರಿದ್ದ ವೇದಿಕೆಯ ಮೇಲೆ ಕಲ್ಲು, ಶೂ ಮತ್ತು ಟೊಮ್ಯಾಟೊಗಳನ್ನು ಎಸೆದು ಕಾರ್ಯಕ್ರಮಕ್ಕೆ ಅಡ್ಡಿಪಡಿಸಿದರು. ಆದರೆ, ಪರಿಸ್ಥಿತಿಯ ಸೂಕ್ಷ್ಮತೆಯನ್ನು ಅರಿತ ಆಯೋಜಕರು ಕಾರ್ಯಕ್ರಮವನ್ನು ಅರ್ಧದಲ್ಲೇ ಮೊಟಕುಗೊಳಿಸಿ ರಮ್ಯಾರನ್ನು ಬೀಳ್ಕೊಟ್ಟರು.

image003janmasthami-ramya-20160826-003 image006janmasthami-ramya-20160826-006 image007janmasthami-ramya-20160826-007 image008janmasthami-ramya-20160826-008 image009janmasthami-ramya-20160826-009 image010janmasthami-ramya-20160826-010 image011janmasthami-ramya-20160826-011 image012janmasthami-ramya-20160826-012 image015janmasthami-ramya-20160826-015 image014janmasthami-ramya-20160826-014 image013janmasthami-ramya-20160826-013 image023janmasthami-ramya-20160826-023 image025janmasthami-ramya-20160826-025

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ರಮ್ಯಾ ಅವರು ಎಲ್ಲರಿಗೂ ಜನ್ಮಾಷ್ಟಮಿಯ ಶುಭಾಶಯವನ್ನು ಕೋರಿ ಮಾತು ಮುಂದುವರಿಸಿದ ಅವರು ಹಲವು ದಿನಗಳೀಂದ ಮಂಗಳೂರಿಗೆ ಬರಬೇಕು ಎನ್ನುವ ಅಪೇಕ್ಷೆಯಲ್ಲಿದ್ದೆ ಅದಕ್ಕೆ ಶ್ರೀ ಕೃಷ್ಣ ಜನ್ಮಾಷ್ಟಮಿ ಒಂದು ಅವಕಾಶವಾಯಿತು. ನಾನು ಮಂಗಳೂರಿಗೆ ಕಾಲಿಟ್ಟಾಗ ನನಗೆ ಸ್ವರ್ಗದ ದರ್ಶನವಾಯಿತು. ಮಂಗಳೂರಿನ ಜನ ನನ್ನನ್ನು ತಮ್ಮ ಮನೆ ಮಗಳಾಗಿ ಪ್ರೀತಿಸಿದ್ದಾರೆ. ಇದಕ್ಕೆ ನಾನು ಸದಾ ಅಭಾರಿ. ವಸುದೈವ ಕುಟುಂಬಕಂ ಎಂಬಂತೆ ಇಡೀ ಜಗತ್ತು ಒಂದು ಕುಟುಂಬ ಎನ್ನುವುದನ್ನು ಎಂದಿಗೂ ಮರೆಯಬಾರದು. ಮೊಸರುಕುಡಿಕೆ ಸಂಭ್ರಮದಲ್ಲಿ ಇನ್ನೂ ಹೆಚ್ಚುಹೊತ್ತು ಭಾಗವಹಿಸಬೇಕು ಎಂಬ ಹಂಬಲವಿದ್ದರೂ ಸಂಘಟಕರ ವಿನಂತಿಯ ಮೇರೆಗೆ ಅರ್ಧಕ್ಕೆ ಮೊಟಕುಗೊಳಿಸುತ್ತೇನೆ. ಇನ್ನೋಮೆ ಖಂಡಿತ ಭಾಗವಹಿಸುತ್ತೇನೆ ಎಂದರು.

ಸಚಿವರಾದ ಯು ಟಿ ಖಾದರ್, ರಮಾನಾಥ್ ರೈ, ಮುಖ್ಯ ಸಚೇತಕ ಐವನ್ ಡಿಸೋಜಾ, ಯೂತ್ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ, ಶಶಿಧರ್ ಹೆಗ್ಡೆ ಹಾಗೂ ಇತರರು ಭಾಗವಹಿಸಿದ್ದರು.


Spread the love