ಮಂಗಳೂರಿನಲ್ಲಿ ಬಿಜೆಪಿ ಬೈಕ್ ರ್ಯಾಲಿಗೆ ಪೋಲಿಸರ ಹ್ಯಾಂಡ್ ಬ್ರೇಕ್, ಕಾರ್ಯಕರ್ತರ ಬಂಧನ

Spread the love

ಮಂಗಳೂರಿನಲ್ಲಿ ಬಿಜೆಪಿ ಬೈಕ್ ರ್ಯಾಲಿಗೆ ಪೋಲಿಸರ ಹ್ಯಾಂಡ್ ಬ್ರೇಕ್, ಕಾರ್ಯಕರ್ತರ ಬಂಧನ

ಜ್ಯೋತಿ ಸರ್ಕಲ್ ಬಳಿಯಲ್ಲಿ ಸಾರ್ವಜನಿಕ ಸಭೆ ನಡೆಸಿ ಜಿಲ್ಲಾಧಿಕಾರಿಗಳ ಕಚೇರಿಗೆ ಬೈಕ್ ಜಾಥಾದ ಮೂಲಕ ಬಿಜೆಪಿ ಕಾರ್ಯಕರು ತೆರಳು ಪ್ರಯತ್ನಿಸಿದ್ದು ಬಿಜೆಪಿ ರಾಜ್ಯಾಧ್ಯಕ್ಷ ಯಡ್ಯೂರಪ್ಪ ಸೇರಿದಂತೆ ಇತರ ನಾಯಕರನ್ನು ಪೋಲಿಸರು ಬಂಧಸಿದ್ದಾರೆ. ಈ ನಡುವೆ ಕೆಲವೊಂದು ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಕಚೇರಿಗೆ ಪಾದಾಯಾತ್ರೆಯ ಮೂಲಕ ತೆರಳಿದರು.

ಮಂಗಳೂರು ಚಲೋ: ನಿಷೇಧದ ನಡುವೆ ಜ್ಯೋತಿ ಸರ್ಕಲ್ ಬಳಿ ಜಮಾಯಿಸಿದ ಸಾವಿರಾರು ಕಾರ್ಯಕರ್ತರು

ಮಂಗಳೂರು: ನಿಷೇಧದ ನಡುವೆಯೂ ಬಿಜೆಪಿ ಯುವ ಮೋರ್ಚಾ ಕೈಗೊಂಡಿರುವ ಮಂಗಳೂರು ಚಲೋ ರ್ಯಾಲಿ ರಾಜ್ಯದ ವಿವಿಧ ಭಾಗದಿಂದ ಸಾವಿರಾರು ಸಂಖ್ಯೆ ಬಿಜೆಪಿ ಕಾರ್ಯಕರ್ತರು ನಗರದ ಜ್ಯೋತಿ ಸರ್ಕಲ್ ಬಳಿ ಗುರುವಾರ ಜಮಾಯಿಸಿದ್ದಾರೆ.

ಪೋಲಿಸರು ಭದ್ರತೆಯನ್ನು ಬಿಗುಗೊಳಿಸಿದ್ದು, ಬಿಜೆಪಿ ಕಾರ್ಯಕರ್ತರು ರಾಜ್ಯ ಸರಕಾರದ ವಿರುದ್ದ ಘೋಷಣೆಗಳನ್ನು ಕೂಗುತ್ತಿದ್ದಾರೆ.

ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಯಡ್ಯೂರಪ್ಪ, ಜಗದೀಶ್ ಶೆಟ್ಟರ್, ಸಂಸದರಾದ ನಳಿನ್ ಕುಮಾರ್ ಕಟೀಲ್, ಪ್ರಹ್ಲಾದ್ ಜೋಶಿ, ಪ್ರತಾಪ್ ಸಿಂಹ, ಮಾಜಿ ಉಪಮುಖ್ಯಮಂತ್ರಿ ಆರ್ ಅಶೋಕ್ ಈಶ್ವರಪ್ಪ, ಶಾಸಕರಾದ ಅರವಿಂದ ಲಿಂಬಾವಳಿ  ಇತರರು ಉಪಸ್ಥಿತರಿದ್ದಾರೆ.

ಸಂಸದ ನಳೀನ್ ಕುಮಾರ್ ಕಟೀಲ್ ಮಾತನಾಡಿ, ಸಿದ್ದರಾಮಯ್ಯ ಭಯೋತ್ಪಾದಕರನ್ನು ಬಂಧಿಸುವ ಬದಲು ರಾಷ್ಟ್ರಭಕ್ತರನ್ನು ಬಂಧಿಸುವ ಕೆಲಸವನ್ನು ಪೋಲಿಸ್ ಇಲಾಖೆಯ ಮೂಲಕ ಮಾಡಲು ಸಿದ್ದರಾಮಯ್ಯ ಸರಕಾರ ಮಾಡುತ್ತಿದೆ. ರಾಜ್ಯದ ಪೋಲಿಸ್ ಇಲಾಖೆ ರಾಜ್ಯದ ಸರಕಾರದ ಕೈಗೊಂಬೆಯಂತೆ ವರ್ತಿಸುತ್ತಿದೆ. ಯಾವ ಸಮಾಜವಾದದ ಚಿಂತನೆ ಹಿಡಿದುಕೊಂಡು ರಾಜ್ಯದ ಉದ್ದಾರ ಮಾಡುವ ಬದಲು ಹಂತಕರಿಗೆ ಬೆಂಬಲ ನೀಡುತ್ತಿದ್ದಾರೆ. ನಮಗೆ ರ್ಯಾಲಿ ಸರಕಾರ ರಕ್ಷಣೆ ನೀಡಬೇಕಾಗಿದ್ದು, ಅನುಮತಿ ಅಗತ್ಯ ಇಲ್ಲ. ರಾಜ್ಯ ಸರಕಾರಕ್ಕೆ ಭಟ್ಕಳ್ ಸಹೋದರರಿಗೆ ರಶೀದ್ ಮಲಬಾರಿ ಜೈಲಿಂದ ಒಡಿ ಹೋದವರನ್ನು ಹಿಡಿಯಲು ಸಾಧ್ಯವಾಗದ ಸರಕಾರ ರಾಷ್ಟ್ರ ಭಕ್ತರನ್ನು ಬಂಧಿಸುವ ಕೆಲಸ ಮಾಡುತ್ತಿದೆ. ಜಿಲ್ಲೆಯ ಉಸ್ತುವಾರಿ ಸಚಿವ ರಮಾನಾಥ ರೈ ಅವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ ಸಿದ್ದರಾಮಯ್ಯ ಸರಕಾರ ಪಿಸ್ತೂಲ್ ಹಿಡಿಯುವ ಹಂತಕರನ್ನು ರಕ್ಷಣೆ ನೀಡುವ ಬದಲು ರಾಷ್ಟ್ರ ಭಕ್ತರನ್ನು ಬಂಧಿಸುವ ಕೆಲಸ ಮಾಡುತ್ತಿದ್ದು ಅದರ ಜೊತೆಗೆ ಸಿದ್ದರಾಮಯ್ಯ ಅವರನ್ನು ಬೆಂಬಲಿಸುವ ಗೌರಿ ಲಂಕೇಶ್ ಅವರ ಕೊಲೆಯಾಗಿದೆ ಅಂತಹವರ ಕೊಲೆಗಡುಕರನ್ನು ಬಂಧಿಸುವ ತಾಕತ್ತು ಸರ್ಕಾರ ತೋರಿಸುವ ಬದಲು ಬಿಜೆಪಿ ಕಾರ್ಯಕರ್ತರನ್ನು ಬಂಧಿಸುತ್ತಿದೆ. ಕರ್ನಾಟಕದಲ್ಲಿ ಅಘೋಷಿತವಾದ ತುರ್ತು ಪರಿಸ್ಥಿತಿ ಇದ್ದು, ವಿನಾ ಕಾರಣ ಬಿಜೆಪಿ ಕಾರ್ಯಕರ್ತರ ಬಂಧನವಾಗಿದೆ. ನಾವು ನ್ಯಾಯಯುತ ಬೇಡಿಕೆಯನ್ನು ಮುಂದಿಟ್ಟು ಹೋರಾಟ ನಡೆಸುತ್ತಿದ್ದೇವೆ. ರಾಜ್ಯದಲ್ಲಿ ಅಶಾಂತಿಗೆ ಕಾರಣವಾಗಿರುವ ಪಿಎಫ್ ಐ, ಕೆಎಫ್ ಡಿ ಸಂಘಟನೆಗಳನ್ನು ನಿಷೇಧಿಸುವುದರೊಂದಿಗೆ, ಹಿಂದೂ ಕಾರ್ಯಕರ್ತರ ಎಲ್ಲಾ ಕೊಲೆ ಪ್ರಕರಣಗಳನ್ನು ಸಿಬಿಐಗೆ ವಹಿಸಿ ಮತ್ತು ದಕ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅವರನ್ನು ಕೂಡಲೇ ವಜಾಗೊಳಿಸಬೇಕು ಎಂದು ಅವರು ಆಗ್ರಹಿಸಿದರು.


Spread the love