ಮಂಗಳೂರು: ಅಥ್ಲೆಟಿಕ್ ಕ್ರೀಡಾಕೂಟ ವಾಸ್ತವ್ಯಕ್ಕೆ 300 ಕೊಠಡಿ

Spread the love

ಮಂಗಳೂರು :19 ನೇ ಫೆಡರೇಶನ್ ಕಪ್ ರಾಷ್ಟ್ರೀಯ ಕ್ರೀಡಾಕೂಟ ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ದಿನಾಂಕ. 30.04.2015 ರಿಂದ 04.05.2015 ರವರೆಗೆ ನಡೆಯಲಿದೆ. ಈ ಕ್ರೀಡಾಕೂಟಕ್ಕೆ ಬರುವ ಫೆಡರೇಶನ್ ಪದಾಧಿಕಾರಿಗಳು, ಅಧಿಕಾರಿಗಳು, ಕೋಚ್ಗಳು, ಕ್ಯಾಂಪರ್ಗಳು ಹಾಗೂ ಕ್ರೀಡಾಪಟುಗಳಿಗಾಗಿ ಮಂಗಳೂರು ನಗರದಲ್ಲಿ ವಸತಿ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಎ.ಎಫ್.ಐ, ಕೆ.ಎ.ಎ ಪದಾಧಿಕಾರಿಗಳು, ಅಧಿಕಾರಿಗಳು,ಕೋಚ್ಗಳು ಹಾಗೂ ನ್ಯಾಷನಲ್ ಕ್ಯಾಂಪಸರ್್ಗಳು ಒಟ್ಟು 250 ಜನರು ಆಗಮಿಸುತ್ತಿದ್ದು, ಇವರಿಗೆ 125 ಕೊಠಡಿಗಳನ್ನು ಕಾಯ್ದಿರಿಸಲಾಗಿದೆ. ಅದೇ ರೀತಿ ಸುಮಾರು 500 ಕ್ರೀಡಾಪಟುಗಳು 20 ರಾಜ್ಯಗಳಿಂದ ಆಗಮಿಸುತ್ತಿದ್ದು, ಅವರಿಗೆ 175 ಕೊಠಡಿಗಳನ್ನು ಕಾಯ್ದಿರಿಸಲಾಗಿದೆ. ಒಟ್ಟು ಈ ಕಾರ್ಯಕ್ರಮಕ್ಕಾಗಿ 20 ಹೋಟೆಲ್ಗಳಲ್ಲಿ ಒಟ್ಟು 300 ಕೊಠಡಿಗಳಲ್ಲಿ ವಸತಿ ಸೌಕರ್ಯ ಕಲ್ಪಿಸಲಾಗಿದೆ. ಇದಲ್ಲದೇ ವಿಶೇಷವಾಗಿ ಅತಿಥಿಗಳಿಗಾಗಿ ನಗರದ ಸಕರ್ಿಟ್ ಹೌಸ್, ಎನ್ಎಂಪಿಟಿ, ಎನ್ಐಟಿಕೆ, ಎಂಆರ್ಪಿಎಲ್ ಅತಿಥಿ ಗೃಹಗಳಲ್ಲಿ ಕೊಠಡಿಗಳನ್ನು ಕಾಯ್ದಿರಿಸಲಾಗಿದೆ. ಇದನ್ನು ಹೊರತುಪಡಿಸಿ ವಿವಿಧ ಸಂಸ್ಥೆಗಳ ಮೂಲಕ ಬರುವ ಕ್ರೀಡಾ ಪಟುಗಳಿಗೆ ಅವರ ಬೇಡಿಕೆಗನುಸಾರವಾಗಿ ನಗರದ ಹೋಟೆಲುಗಳಲ್ಲಿ ವಸತಿ ಸೌಕರ್ಯವನ್ನು ನೀಡಲಾಗುವುದು.
ರಾಷ್ಟ್ರೀಯ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಸುಗಮ ಸಂಚಾರ ವ್ಯವಸ್ಥೆಗಾಗಿ ವಾಹನಗಳಿಗೆ ಪಾಕರ್ಿಂಗ್ ಸ್ಥಳವನ್ನು ನಿಗಧಿಪಡಿಸಲಾಗಿದೆ.
ಕ್ರೀಡಾಕೂಟಕ್ಕೆ ಆಗಮಿಸುವ ಕ್ರೀಡಾಪಟುಗಳಿಗೆ ಹಾಗೂ ಅಧಿಕಾರಿಗಳಿಗೆ ಕೆನರಾ ಹೈಸ್ಕೂಲ್,ಉವರ್ಾ ಇಲ್ಲಿನ ಆವರಣದಲ್ಲಿ ಪಾಕರ್ಿಂಗ್ ನಿಗಧಿಯಾಗಿದೆ.ಸಾರ್ವಜನಿಕರ ವಾಹನಗಳಿಗೆ ಲೇಡಿಹಿಲ್ ಚಚರ್್ ಆವರಣ ಹಾಗೂ ಪೊಂಪೈ ಶಾಲಾ ಅವರಣದಲ್ಲಿ ಪಾಕರ್ಿಂಗ್ ಮಾಡಬಹುದಾಗಿದೆ.


Spread the love