ಮಂಗಳೂರು: ಅಮ್ಯಾಕೊ ಎಂ.ಪಿ.ಎಲ್ -2015 ಟಿ20 ಕ್ರಿಕೆಟ್ ; ಯುನೈಟೆಡ್ ಉಲ್ಲಾಳ  ಕೋಟೆ ಬೇಧಿಸಿದ ಉಡುಪಿ ಟೈಗರ್ಸ್

Spread the love

ಮಂಗಳೂರು: ಇಲ್ಲಿನ ಕರ್ನಾಟಕ ರೀಜಿನಲ್ ಕ್ರಿಕೆಟ್ ಅಕಾಡಮಿಯು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಅಂಗೀಕಾರದೊಂದಿಗೆ ನಡೆಸುತ್ತಿರುವ ಅಮ್ಯಾಕೊ ಮಂಗಳೂರು ಪ್ರೀಮಿಯರ್ ಲೀಗ್ 2015 ಟ್ವೆಂಟಿ ಟ್ವೆಂಟಿ ಕ್ರಿಕೆಟ್ ಪಂದ್ಯಾಟದಲ್ಲಿ ಗುರುವಾರ ರಾತ್ರಿ ಹೊನಲು ಬೆಳಕಿನಡಿಯಲ್ಲಿ ಜರಗಿದ ಕ್ಷಣ ಕ್ಷಣವೂ ರೋಮಾಂಚ ವನ್ನು ನೀಡಿದ ಪಂದ್ಯದಲ್ಲಿ ಉಡುಪಿ ಟೈಗರ್ಸ್ ತಂಡವು ಅಂತಿಮವಾಗಿ ಒಂದು ವಿಕೇಟಿನ ಅಂತರದ ಜಯವನ್ನು ಸಾಧಿಸಿ ತಾನಾಡಿದ ಎರಡೂ ಪಂದ್ಯಗಳನ್ನು ಗೆದ್ದುಕೊಂಡಿತು.

Udupi_tigers_second match 15-12-2015 03-33-23 Udupi_tigers_second match 15-12-2015 03-35-44 Udupi_tigers_second match 15-12-2015 03-46-24 Udupi_tigers_second match 15-12-2015 05-48-52 Udupi_tigers_second match 15-12-2015 05-49-49 Udupi_tigers_second match 15-12-2015 05-50-52 Udupi_tigers_second match 15-12-2015 05-52-38 Udupi_tigers_second match 15-12-2015 05-53-51 Udupi_tigers_second match 15-12-2015 05-54-040 Udupi_tigers_second match 15-12-2015 05-56-12 Udupi_tigers_second match 15-12-2015 05-56-26

ಟಾಸ್ ಗೆದ್ದುಕೊಂಡ ಉಡುಪಿ ತಂಡವು ಕ್ಷೇತ್ರರಕ್ಷಣೆಯನ್ನು ಆಯ್ದುಕೊಂಡು ಉಲ್ಲಾಳ ತಂಡದ ಮೊದಲ ಆರು ವಿಕೇಟುಗಳನ್ನು ಕೇವಲ 49 ರನ್‍ಗಳ ಮೊತ್ತಕ್ಕೆ ಉರುಳಿಸಿದಾಗ, ಸುಲಭ ಜಯದ ಕನಸು ಟೈಗರ್‍ಗಳಲ್ಲಿ ಮೂಡಿತು. ಎಡಗೈ ಆಟಗಾರ ಸಚಿನ್ ಭಟ್ ಹೊಣೆಯರಿತ ಆಟವನ್ನಾಡಿ 52 ಚೆಂಡುಗಳಲ್ಲಿ ಎರಡು ಸಿಕ್ಸರ್‍ಗಳುಲ್ಲ 78 ಓಟಗಳನ್ನು ತಂಡದ ಮೊತ್ತಕ್ಕೆ ಕೊಡುಗೆಯಿತ್ತರು. ಏಳನೆಯ ವಿಕೇಟಿನಲ್ಲಿ ಸಚಿನ್ – ಅಂಕಿತ್ ಜೋಡಿಯು 54 ಚೆಂಡುಗಳಲ್ಲಿ 87 ರನ್‍ಗಳ ಜತೆಯಾಟ ನಡೆಸಿ ತಳ ಕಂಡಿದ್ದ À ತಂಡವು 20 ಓವರುಗಳಲ್ಲಿ 8 ವಿಕೇಟುಗಳ ನಷ್ಟಕ್ಕೆ 145 ರನ್‍ಗಳ ಹೋರಾಟ ಯೋಗ್ಯ ಮೊತ್ತವನ್ನು ದಾಖಲಿಸುವಲ್ಲಿ ಕಾರಣಕರ್ತರಾದರು. ಇದಕ್ಕೆ ಉಡುಪಿ ತಂಡವು ಉತ್ತರಾರ್ಧದಲ್ಲಿ ತೋರಿದ ಕಳಪೆ ಫಿಲ್ಡಿಂಗ್ ಮತ್ತು ಕೈ ಚೆಲ್ಲಿದ ಕ್ಯಾಚುಗಳು ಸಹ ತಮ್ಮ ಪಾಲನ್ನು ನೀಡದವು. ಅಂಕಿತ್ ಕರ್ಕೇರಾರವರು 28 ರನ್‍ಗಳನ್ನು ಗಳಿಸಿದರು.ಬೌಲಿಂಗ್ ನಲ್ಲಿ ದರ್ಶನ್ 15ಕ್ಕೆ 3, ಅನುತ್ 22ಕ್ಕೆ 2, ರಾಹುಲ್ 26ಕ್ಕೆ 2, ನಿತಿನ್ 14ಕ್ಕೆ 1 ವಿಕೇಟುಗಳನ್ನು ಪಡೆದರು.

ಉಡುಪಿ ತಂಡವು 8ನೆಯ ಓವರಿನಲ್ಲಿ 53 ರನ್‍ಗಳಿಗೆ ತನ್ನ ನಾಲ್ಕು ವಿಕೇಟುಗಳನ್ನು ಕಳೆದುಕೊಂಡು ಸೋಲಿನತ್ತ ಸಾಗಿತ್ತು. ಒಂದೆಡೆಯಲ್ಲಿ ಭದ್ರವಾಗಿ ತಳವೂರಿದ್ದ ಅನೀಸ್‍ರವರು ಆಫ್ವಾನ್ ರವರ ಜತೆಗೂಡಿ 5ನೆಯ ವಿಕೇಟಿನಲ್ಲಿ 61 ರನ್‍ಗಳನ್ನು ಪೇರಿಸಿ ವಿಜಯದ ಆಸೆಯನ್ನು ಜೀವಂತವಾಗಿರಿಸಿದರು. ಆದರೆ, ಮತ್ತೆ 7 ರನ್ ಪೇರಿಸುವಷ್ಟರಲ್ಲಿ ಉಡುಪಿ ತಂಡವು ಲಗುಬಗೆಯಲ್ಲಿ ನಾಲ್ಕು ವಿಕೇಟುಗಳನ್ನು ಕಳೆದುಕೊಂಡು 121ಕ್ಕೆ 8 ವಿಕೇಟುಗಳನ್ನು ಕಳೆದುಕೊಂಡಿತ್ತು. ಉಳಿದ 12 ಚೆಂಡುಗಳಲ್ಲಿ ವಿಜಯಕ್ಕೆ ಬೇಕಾದ 25 ಓಟಗಳನ್ನು 1 ಚೆಂಡು ಬಾಕಿ ಇರುವಂತೆ ದಾಖಲಿಸಿದ ಉಡುಪಿ ತಂಡವು 1 ವಿಕೇಟಿನ ಅಂತರದ ಜಯವನ್ನು ದಾಖಲಿಸಿತು. ಸಚಿನ್ ಭಟ್‍ರವರು ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.


Spread the love