ಮಂಗಳೂರು: ಅಸಂಘಟಿತ ಕಾರ್ಮಿಕ ರಿಕ್ಷಾ ಚಾಲಕರಿಂದ ನೋಂದಣಿ
ಮಂಗಳೂರು: ಅಸಂಘಟಿತ ಕಾರ್ಮಿಕ ರಿಕ್ಷಾ ಚಾಲಕರಿಗೆ ಕರ್ನಾಟಕ ರಾಜ್ಯ ಮೋಟಾರು ಸಾರಿಗೆ ಸಾಮಾಜಿಕ ಭಧ್ರತೆ ಮತ್ತು ಕ್ಷೇಮಾಭಿವೃದ್ಧಿ ವತಿಯಿಂದ ಶಾಸಕ ಐವನ್ ಡಿಸೋಜರ ಮಂಗಳೂರು ಮನಪಾ ಕಚೇರಿಯಲ್ಲಿ ನೋಂದಣಿ ಕಾರ್ಯಕ್ರಮ ನಡೆಯಿತು.
ರಾಜ್ಯ ಕಾರ್ಮಿಕ ಇಲಾಖೆಯ ಸಹಯೋಗದೊಂದಿಗೆ ರಾಜ್ಯ ಮೋಟಾರು ಸಾರಿಗೆ ಸಾಮಾಜಿಕ ಭದ್ರತೆ ಕ್ಷೇಮಾಭಿವೃದ್ದಿ ಮಂಡಳಿಯಿಂದ ರಿಕ್ಷಾ ಚಾಲಕರಿಗೆ ವೀಲ್ ಬ್ಯಾಲೆನ್ಸಿಂಗ್ ಅಲೈನ್ಮೆಂಟ್ ಘಟಕಗಳಲ್ಲಿ, ನೀರಿನಿಂದ ಸ್ವಚ್ಛಗೊಳಿಸುವ ಘಟಕಗಳಲ್ಲಿ ಕೆಲಸ ಮಾಡುವವರು, ಮೋಟಾರ್ ಗ್ಯಾರೇಜ್ಗಳಲ್ಲಿ, ಟಯರ್ ಜೋಡಿಸುವವರು, ಬುಕ್ಕಿಂಗ್ ಗುಮಾಸ್ತರರು, ನಿಲ್ದಾಣ ಸಿಬಂದಿ, ಮಾರ್ಗ ಪರಿಶೀಲನಾ ಸಿಬಂದಿ, ಚಾಲಕ ನಿರ್ವಾಹಕ ಸಹಿತ ಸುಮಾರು 500 ಮಂದಿ ನೋಂದಣಿ ಮಾಡಿಸಿದರು.
ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ, ಮಾಜಿ ಎಂಎಲ್ಸಿ ಹರೀಶ್ ಕುಮಾರ್ ಕಾರ್ಯಕ್ರಮ ಉದ್ಘಾಟಿಸಿದರು. ಈ ಸಂದರ್ಭ ಕಟ್ಟಡ ಕಾರ್ಮಿಕರಿಗೆ ಇಲೆಕ್ಟ್ರಿಷಿಯನ್, ವೆಲ್ಡರ್ರಿಗೆ ಸರಕಾರದಿಂದ ಸಿಗುವ ಕಿಟ್ಗಳನ್ನು ಸಹಾಯಕ ಲೇಬರ್ ಕಮಿಷನರ್ ನಾಜಿಯಾ ಸುಲ್ತಾನ ವಿತರಿಸಿದರು.
ಕಾರ್ಮಿಕ ಇಲಾಖೆಯ ಅಧಿಕಾರಿಗಳಾದ ವಿಲ್ಮಾ ಎಲಿಜಬೆತ್, ಕುಮಾರ್, ಬಿ.ಆರ್. ರಾಜಶೇಖರ್ ಶೆಟ್ಟಿ, ವಿರೇಂದ್ರ ಕುಮಾರ್, ಮೇರಿ ಡಯಾಸ್ ಮಾಹಿತಿ ನೀಡಿದರು. ಈ ಸಂದರ್ಭ ಕಾಂಗ್ರೆಸ್ ಅಸಂಘಟಿತ ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷ ಅಬ್ಬಾಸ್ ಆಲಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್, ಮಂಗಳೂರು ನಗರ ಬ್ಲಾಕ್ ಅಧ್ಯಕ್ಷ ಪ್ರಕಾಶ್ ಸಾಲ್ಯಾನ್, ವಿರೋಧ ಪಕ್ಷದ ನಾಯಕ ಅನಿಲ್ ಕುಮಾರ್ ಶಶಿಧರ್ ಹೆಗ್ಡೆ, ಕೊಂಕಣಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಸ್ಟ್ಯಾನಿ ಅಲ್ವಾರಿಸ್, ಚೇತನ್ ಕುಮಾರ್, ಸತೀಶ್ ಪೆಂಗಲ್, ಮಾಜಿ ಮೇಯರ್ ಅಬ್ದುಲ್ ಅಝೀಝ್, ವಕೀಲರಾದ ಮನೋರಾಜ್, ರಾಜೀವ, ಎನ್.ಪಿ. ಮನುರಾಜ್, ಮನೀಶ್ ಬೋಳಾರ್ ರಘುರಾಜ್ ಕದ್ರಿ, ಮೀನಾ ಟೆಲ್ಲಿಸ್, ಅಶ್ರಫ್, ಅಪ್ಪುಉಪಸ್ಥಿತರಿದ್ದರು.
ಅಸಂಘಟಿತ ಕಾರ್ಮಿಕ ಘಟಕದ ಬ್ಲಾಕ್ ಅಧ್ಯಕ್ಷ ವಸಂತಶೆಟ್ಟಿ ವೀರನಗರ ಕಾರ್ಯಕ್ರಮ ನಿರೂಪಿಸಿದರು. ರಾಜೇಶ್ ವೀರನಗರ ಸ್ವಾಗತಿಸಿದರು. ಸತೀಶ್ ಪೆಂಗಲ್ ವಂದಿಸಿದರು.