ಮಂಗಳೂರು: ಉದ್ಯಮಿಗಳಿಗೆ ಟ್ರೆಡ್ಸ್ ಮತ್ತು ಇಎಸ್ಎಂ ಕಾರ್ಯಗಾರ

Spread the love

ಮಂಗಳೂರು: ಉದ್ಯಮಿಗಳಿಗೆ ಟ್ರೆಡ್ಸ್ ಮತ್ತು ಇಎಸ್ಎಂ ಕಾರ್ಯಗಾರ

ಮಂಗಳೂರು: ಬೆಂಗಳೂರು ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ, ಟೆಕ್ಸಾಕ್, ಮಂಗಳೂರು ಜಿಲ್ಲಾ ಕೈಗಾರಿಕಾ ಕೇಂದ್ರ, ಹಾಗೂ ಜಿಲ್ಲಾ ಸಣ್ಣ ಕೈಗಾರಿಕಾ ಸಂಘ ಇವರ ಸಹಯೋಗದೊಂದಿಗೆ ಸಣ್ಣ ಮತ್ತು ಮಧ್ಯಮ ವರ್ಗದ ಉದ್ಯಮಿಗಳಿಗೆ ಹಮ್ಮಿಕೊಂಡ ಟ್ರೆಡ್ಸ್ ಮತ್ತು ಇಎಸ್ಎಂ ಕಾರ್ಯಗಾರದ ಉದ್ಘಾಟನಾ ಸಮಾರಂಭ ಜನವರಿ 24 ರಂದು ಯೆಯ್ಯಾಡಿ ಜಿಲ್ಲಾ ಸಣ್ಣ ಕೈಗಾರಿಕಾ ಸಂಘದಲ್ಲಿ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದ ಜಿಲ್ಲಾ ಸಣ್ಣ ಕೈಗಾರಿಕಾ ಸಂಘದ ಅಧ್ಯಕ್ಷ ವಿಶಾಲ್ ಎಲ್ ಸಾಲ್ಯಾನ್ ಮಾತನಾಡಿ, ಉದ್ಯಮಿಗಳು ಸದಾ ಗ್ರಾಹಕರ ನಿರೀಕ್ಷೆಗಳನ್ನು ಪೂರೈಸುವ ನಿಟ್ಟಿನಲ್ಲಿ ಹೊಸ ತಂತ್ರಜ್ಞಾನಗಳನ್ನು ಅಳವಡಿಸುವುದು ಉತ್ತಮ ಎಂದು ತಿಳಿಸಿದರು. ಸಣ್ಣ ಹಾಗೂ ಮಧ್ಯಮ ಉದ್ಯಮಿಗಳಿಗೆ ಕಾರ್ಯಗಾರದಿಂದ ಉದ್ಯಮಿಗಳಿಗೆ ಆಗುವ ಪ್ರಯೋಜನಗಳ ಬಗ್ಗೆ ಅವರು ತಿಳಿಸಿದರು.

ಟ್ರೆಡ್ಸ್ ಒಂದು ನವೀನ ಮಾದರಿಯ ಆನ್ಲೈನ್ ಪ್ಲಾಟ್ಪಾರ್ಮ್ ಆಗಿದ್ದು, ಉದ್ಯಮಿಗಳು ತಮ್ಮ ವ್ಯಾಪಾರ ಕರಾರುಗಳ ವಿರುದ್ಧ ತ್ವರಿತ ಮತ್ತು ಸುಲಭವಾದ ಹಣಕಾಸು ಪಡೆಯಲು ಅನುವು ಮಾಡಿಕೊಡುತ್ತದೆ, ಭಾರತದಲ್ಲಿನ ಟ್ರೆಡ್ಸ್ ಪ್ಲಾಟ್ಪಾರ್ಮ್ಗಳಾದ , ಉದ್ಯಮಿಗಳಿಗೆ ತಮ್ಮ ಇನ್ವಾಯ್ಸ್ಗಳನ್ನು ಕಾರ್ಪೋರೇಟ್ಗಳು ಮತ್ತು ಬ್ಯಾಂಕ್ ಗಳಿಗೆ ರಿಯಾಯತಿ ದರದಲ್ಲಿ ಮಾರಾಟ ಮಾಡಲು ಡಿಜಿಟಲ್ ಮಾರುಕಟ್ಟೆಯನ್ನು ಒದಗಿಸುತ್ತದೆ ಎಂದು ಟೆಕ್ಸಾಕ್ ಬೆಂಗಳೂರಿನ ಸಿಇಒ ಸಿದ್ಧರಾಜು ಅವರು ತಿಳಿಸಿದರು.

ಮಂಗಳೂರು ಕೆಸಿಸಿಐ ಉಪಾಧ್ಯಕ್ಷ ಮುದ್ದಾಸ್ಸರ್ ಅಹಮದ್ ಅವರು ಮಾತನಾಡಿ, ಉದ್ಯಮಿಗಳಿಗೆ ಟ್ರೆಡ್ಸ್ನ ಪ್ರಯೋಜನಗಳನ್ನು ಯಾವ ರೀತಿ ತಮ್ಮ ಉದ್ಯಮದಲ್ಲಿ ಅಳವಡಿಸಿಕೊಳ್ಳಬಹುದು ಎಂದು ತಿಳಿಸಿದರು. ದೊಡ್ಡ ಸಂಸ್ಥೆಗಳಿಗೆ ಪೂರೈಕೆದಾರರ ಗುರುತು ಮುಖ್ಯ ಕಾಳಜಿಯಾಗಿದೆ. ಏಕೆಂದರೆ ದೊಡ್ಡ ಸಂಸ್ಥೆಗಳು ತಮ್ಮ ಪ್ರತಿಸ್ಪರ್ಧಿಗಳು ತಮ್ಮ ಪೂರೈಕೆದಾರರನ್ನು ಕಂಡುಕೊಳ್ಳುತ್ತಾರೆ ಎಂದು ಭಯ ಪಡುತ್ತಾರೆ. ಅಂತಹವರಿಗೆ ಇನ್ವಾಯ್ಸ್ಗಳನ್ನು ಅನುಮೋದಿಸುವ ವೇಗವು ಮತ್ತೊಂದು ಸಮಸ್ಯೆಯಾಗಿದೆ ಎಂದು ತಿಳಿಸಿದರು.

ಕಾರ್ಯಗಾರಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಕೃಷ್ಣಮೂರ್ತಿ ಹೆಚ್ ಎಸ್ , ಲೆಪ್ಟಿನೆಂಟ್. ಸಿಓಎಲ್. ಬಿ. ಪಿ, ಸಿಂಗ್ , ಡಾ. ಜಯ ಶೆಟ್ಟಿ, ಪ್ರತಾಪ್ ಅವರು ಟ್ರೆಡ್ಸ್ನ ಪ್ರಯೋಜನ, ಸ್ವಯಂಚಾಲಿತ ಪಾರದರ್ಶಕ ಪ್ಲಾಟ್ಪಾರ್ಮ್ , ಪೇಪರ್ ರಹಿತ ಹಾಗೂ ಜಗಳ ಮುಕ್ತ ಪ್ರಕ್ರಿಯೆ, ವೇಗದ ವಹಿವಾಟು , ಸ್ಪರ್ಧಾತ್ಮಕ ಬೆಲೆ ಅನ್ವೇಷಣೆ, ಸಮರ್ಥ ಕಾರ್ಯನಿರತ ಬಂಡವಾಳ, ಟ್ರೆಡ್ಸ್ ಇನ್ವಾಯ್ಸ್ ಮಾರ್ಟ್, ಗುಣಮಟ್ಟದೊಂದಿಗೆ ವ್ಯಾಪಾರ, ಡಿಜಿಟಲೀಕರಣದೊಂದಿಗೆ ವ್ಯವಹಾರ ಈ ಎಲ್ಲ ವಿಷಯದ ಬಗ್ಗೆ ಸಮಗ್ರ ಮಾಹಿತಿಯನ್ನು ನೀಡಿದರು. ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸುಮಾರು 150 ಮಂದಿ ಉದ್ಯಮಿಗಳು ಭಾಗವಹಿಸಿ ಪ್ರಯೋಜನವನ್ನು ಪಡೆದುಕೊಂಡರು.

ಸಿಡಾಕ್ ಮಂಗಳೂರು ಕಚೇರಿಯ ತರಬೇತುದಾರ ಪ್ರವಿಷ್ಯ ಕಾರ್ಯಕ್ರಮ ನಿರೂಪಿಸಿ, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಗೋಕುಲದಾಸ್ ನಾಯಕ್ ಸ್ವಾಗತಿಸಿದರು, ವಿದ್ಯಾ ವಂದಿಸಿದರು.


Spread the love