ಮಂಗಳೂರು: ಕಾಂತಿ ಚರ್ಚಿನಲ್ಲಿ ಬಡ ಮಕ್ಕಳಿಗೆ ಪುಸ್ತಕ ವಿತರಣೆ

Spread the love

ಮಂಗಳೂರು: ದಕ್ಷಿಣ ವಲಯ ಕಾಂಗ್ರೆಸ್ ಸಮಿತಿ ಮಾಜಿ ಅಧ್ಯಕ್ಷ ದಿವಂಗತ ಬಿ.ಜಿ. ಸೋಮಪ್ಪ ಕುಂದರ್‍ರವರ ಸೇವಾಸಮರ್ಪಣೆಯ ನೆನಪಿಗಾಗಿ ಮಂಗಳಾದೇವಿ ದೇವಸ್ಥಾನದ ಬಳಿ ಇರುವ ಕಾಂತಿ ಚರ್ಚ್‍ನಲ್ಲಿ, ಅವರ ಕುಟಂಬಸ್ಥರ ವತಿಯಿಂದ, ಅರ್ಥಿಕವಾಗಿ ಹಿಂದುಳಿದ ಸುಮಾರು 150 ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ ಹಾಗು ಪ್ರೋತ್ಸಾಹ ಧನವನ್ನು ವಿತರಿಸಲಾಯಿತು.

book 1 book

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಜೆ. ಆರ್ ಲೋಬೊ, ಬಿ.ಜಿ. ಸೋಮಪ್ಪರವರ ಸಾಮಾಜಿಕ ಸೇವೆಯನ್ನು ನೆನಪಿಸಿದರು. “ಅವರ ಸಾಮಾಜಿಕ ಕಳಜಿ ನಮಗೆಲ್ಲರಿಗು ಸ್ರ್ಪರ್ತಿಯನ್ನು ನೀಡಲಿ. ಇಚಿದಯ ಅವರ ಹೆಜ್ಜೆಯಲ್ಲಿ ಅವರ ಮಕ್ಕಳು ವರ್ಷಂಪ್ರತಿ ಮಾಡುತ್ತಿರುವ ಈ ಸೇವಾ ಕಾರ್ಯ ನಿಜಕ್ಕೂ ಶ್ಲಾಘನಿಯ”, ಎಂದು ಹೇಳಿದರು.

ಈ ಸಂದರ್ಭದಲ್ಲಿ ಪಾಲಿಕೆಯ ಮಹಾಪೌರರು ಜೆಸಿಂತಾ ಆಲ್ಫ್ರೇಡ್, ಕಾರ್ಪೋರೇಟರ್ ರತಿಕಲಾ, ಕವಿತಾ ವಾಸು, ಪ್ರಭಾಕರ್ ಶ್ರೀಯಾನ್, ಪಧ್ಮನಾಬ್ ಅಮೀನ್, ಡೆನಿಸ್ ಡಿಸಿಲ್ವ, ರಾಮನಂದ್ ಪೂಜಾರಿ, ಟಿ.ಕೆ. ಸುಧೀರ್, ಹರೀಶ್ ಕುಂಬ್ಲೆ, ಸುನೀಲ್ ಶೆಟ್ಟಿ, ನಮೀತಾ ಡಿ ರಾವ್, ಕೀಶನ್ ಕಿಶೋರ್, ಸುರೇಶ್ ಶೆಟ್ಟಿ, ಸತೀಶ್ ಕುಂದರ್, ಜಯಕಾರ್ ಸಮರ್ಥ್ ಮುತಾಂದವರು ಉಪಸ್ಥಿತರಿದ್ದರು. ಉದಯ್ ಎಸ್. ಕುಂದರ್ ಕಾರ್ಯಕ್ರಮ ನೀರೂಪಿಸಿದರು.


Spread the love