ಮಂಗಳೂರು : ಕಾರಿನ ಗ್ಲಾಸ್ ಒಡೆದು ಚಿನ್ನಾಭರಣ ಕಳವು ಮಾಡಿದ್ದ ಆರೋಪಿ ಬಂಧನ

Spread the love

ಮಂಗಳೂರು : ಕಾರಿನ ಗ್ಲಾಸ್ ಒಡೆದು ಚಿನ್ನಾಭರಣ ಕಳವು ಮಾಡಿದ್ದ ಆರೋಪಿ ಬಂಧನ

ಮಂಗಳೂರು: ಪಾರ್ಕ್ ಮಾಡಿದ್ದ ಕಾರಿನ ಗ್ಲಾಸ್ ಒಡೆದು ಅದರಲ್ಲಿದ್ದ ಚಿನ್ನಾಭರಣ ಹಾಗೂ ಇತರ ವಸ್ತುಗಳನ್ನು ದೋಚಿದ್ದ ಆರೋಪಿಯನ್ನು ಮಂಗಳೂರು ಪೂರ್ವ ಠಾಣೆಯ ಪೊಲೀಸರು ಕ್ಷಿಪ್ರ ಕಾರ್ಯಚರಣೆ ನಡೆಸಿ24 ಗಂಟೆಯಳೊಗೆ ಬಂಧಿಸಿ ಆತನಿಂದ ಕಳವು ಮಾಡಿದ ಚಿನ್ನಾಭರಣ ಮತ್ತು ಲ್ಯಾಪ್ ಟಾಪ್ ಸೇರಿದಂತೆ ಒಟ್ಟು 7,30,000/- ಮೌಲ್ಯದ ಬೆಲೆ ಬಾಳುವ ಸೊತ್ತುಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ.

ಬಂಧಿತ ಆರೋಪಿಯನ್ನು ಅಡ್ಯಾರ್ ಪದವು ನಿವಾಸಿ ಅಬ್ದುಲ್ ಅಕ್ರಮ್ (33) ಎಂದು ಗುರುತಿಸಲಾಗಿದೆ.

ಡಿಸೆಂಬರ್ 8 ರಂದು ರಾತ್ರಿ ಹೊತ್ತಿಗೆ ಕಂಕನಾಡಿ ಮಾರ್ಕೆಟ್ ಬಳಿ ಕ್ರೇಟಾ ಕಾರ್ ಅನ್ನು ಪಾರ್ಕ್ ಮಾಡಿ ಹೋಗಿದ್ದು ವಾಪಸ್ಸು ಕಾರು ಬಳಿ ಬಂದಾಗ ಸದ್ರಿ ಕಾರ್ ನ ಗ್ಲಾಸ್ ಒಡೆದು ಕಾರಿನ ಒಳಗಡೆ ಇದ್ದ 6,80,000/- ಮೌಲ್ಯದ ಚಿನ್ನಾಭರಣ ಮತ್ತು ಲ್ಯಾಪ್ ಟಾಪ್ ಇರುವ ವ್ಯಾನಿಟ್ ಬ್ಯಾಗ್ ಅನ್ನು ಯಾರೋ ಕಳ್ಳರು ಕಳವು ಮಾಡಿ ಹೋಗಿದ್ದು ಈ ಬಗ್ಗೆ ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ಅ.ಕ್ರ 204/2024 ಕಲಂ 303(2) ಬಿಎನ್ ಎಸ್ ಕಾಯಿದೆಯಂತೆ ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತದೆ.

ಪ್ರಕರಣಕ್ಕೆ ಸಂಭಂದಿಸಿದಂತೆ ಹಲವು ಆಯಾಮಗಳಲ್ಲಿ ತನಿಖೆ ನಡೆಸಿ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಪೂರ್ವ ಠಾಣೆಯ ಪೊಲೀಸರು ಕ್ಷಿಪ್ರ ಕಾರ್ಯಚರಣೆ ನಡೆಸಿ ಚಿನ್ನಾಭರಣ ಮತ್ತು ಲ್ಯಾಪ್ ಟಾಪ್ ಕಳವು ಮಾಡಿದ ಆರೊಪಿಯನ್ನು ಹಾಗೂ ಕೃತ್ಯಕ್ಕೆ ಉಪಯೋಗಿಸಿದ ಆಕ್ಸೆಸ್ ಸ್ಕೂಟರ್ ಅನ್ನು 24 ಗಂಟೆಯಳೊಗೆ ಬಂದಿಸಿ ಆತನಿಂದ ಕಳವು ಮಾಡಿದ ಚಿನ್ನಾಭರಣ ಮತ್ತು ಲ್ಯಾಪ್ ಟಾಪ್ ಸೇರಿದಂತೆ ಒಟ್ಟು 7,30,000/- ಮೌಲ್ಯದ ಬೆಲೆ ಬಾಳುವ ಸೊತ್ತುಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ.

ಮಂಗಳೂರು ನಗರದ ಪೊಲೀಸ್ ಆಯುಕ್ತರಾದ ಅನುಪಮ್ ಅಗರ್ ವಾಲ್ ರವರ ಮಾರ್ಗದರ್ಶನದಂತೆ ಸಿದ್ದಾರ್ಥ ಗೋಯೆಲ್ (ಕಾ&ಸು) ಮತ್ತು ಕೆ.ರವಿಶಂಕರ್ ಡಿಸಿಪಿ ಕ್ರೈಂ ರವರ ನಿರ್ದೇಶನದಂತೆ ಹಾಗೂ ಪ್ರತಾಪ್ ಸಿಂಗ್ ಥೋರಾಟ್, ಸಹಾಯಕ ಪೊಲೀಸ್ ಆಯುಕ್ತರು ಮಂಗಳೂರು ಕೇಂದ್ರ ವಿಭಾಗರವರ ನೇತೃತ್ವದಲ್ಲಿ ಮಂಗಳೂರು ಪೂರ್ವ ಪೊಲೀಸ್ ಠಾಣೆಯ ನಿರೀಕ್ಷಕರಾದ ಸೋಮಶೇಖರ್ ಜೆ.ಸಿ, ಪಿಎಸ್ಐ ಉಮೇಶ್ ಕುಮಾರ್ ಎಂ.ಎನ್ ಮತ್ತು ಅಪರಾಧ ಪತ್ತೆ ವಿಭಾಗದ ಸಿಬ್ಬಂದಿ ವರ್ಗ ಈ ಕಾರ್ಯಚರಣೆಯಲ್ಲಿ ಭಾಗವಹಿಸಿರುತ್ತಾರೆ.


Spread the love