ಮಂಗಳೂರು:  ಕೆಎಂಸಿ ಆಸ್ಪತ್ರೆಯಿಂದ “ಹ್ಯಾಪಿ ಟೀನ್‍ಕ್ಲಿನಿಕ್’’ಆರಂಭ

Spread the love

ಮಂಗಳೂರು  : ದಕ್ಷಿಣ ಭಾರತದ ಅತ್ಯಂತ ದೊಡ್ಡ ಆರೋಗ್ಯ ಶುಶ್ರೂಷೆ ಸಮೂಹವಾದ ಮಣಿಪಾಲ್ ಹೆಲ್ತ್‍ ಎಂಟರ್‍ಪ್ರೈಸಸ್‍ನ ಅಂಗವಾಗಿರುವ  ಕೆಎಂಸಿ ಆಸ್ಪತ್ರೆ, ಮಂಗಳೂರಿನಲ್ಲಿ  ಹದಿಹರೆಯದವರಿಗಾಗಿ ತನ್ನ ಮೊಟ್ಟ ಮೊದಲ ಕ್ಲಿನಿಕ್‍ ಅನ್ನು “ಹ್ಯಾಪಿ ಟೀನ್’ಎಂಬ ಹೆಸರಿನಲ್ಲಿ ಆರಂಭಿಸಿರುವುದನ್ನು ಪ್ರಕಟಿಸಿದೆ. ಹತ್ತರಿಂದ  ಹದಿನೆಂಟು ವರ್ಷ ವಯಸ್ಸಿನ ಮಕ್ಕಳು ಎದುರಿಸುವ ಹದಿಹರೆಯದ ಸಮಸ್ಯೆಗಳೆಲ್ಲವುಗಳಿಗೆ ಸಂಪೂರ್ಣ ಪರಿಹಾರವನ್ನು ಈ ಕ್ಲಿನಿಕ್ ನೀಡುತ್ತದೆ. ಮಕ್ಕಳು ಮತ್ತು ಈಗ ಹದಿಹರೆಯದವರಿಗೆ ಎಲ್ಲ ವಿಶೇಷ ವೈದ್ಯಕೀಯ ಸೇವೆಗಳಲ್ಲಿ ಸಮಗ್ರೀಕರಿಸುವ  ನಿಟ್ಟಿನಲ್ಲಿ ಈ ನೂತನ ಉಪಕ್ರಮ ಕೈಗೊಳ್ಳಲಾಗಿದೆ.

10ರಿಂದ 18 ವರ್ಷಅವಧಿಯ ಹದಿಹರೆಯಜೀವನದಲ್ಲಿಅತ್ಯಂತ ಹಚ್ಚರಿ ಮೂಡಿಸುವಂತಹ ಮತ್ತು ಸವಾಲಿನ ಅವಧಿಯಾಗಿದೆಎಂಬುದುಎಲ್ಲರಿಗೂ ತಿಳಿದ ವಿಷಯವಾಗಿದೆ.ಸಾಮಾನ್ಯವಾಗಿ ಹದಿಹರೆಯವನ್ನುಅಭಿವೃದ್ಧಿಗೆತಕ್ಕಂತೆಮೂರು ವಿಭಾಗಗಳಾಗಿ ವಿಂಗಡಿಸಬಹುದಾಗಿದೆ.ಆರಂಭದಅಂದರೆ 10ರಿಂದ 13 ವರ್ಷ, ಮಧ್ಯಮಅಂದರೆ 14ರಿಂದ 16 ಮತ್ತುಅಂತಿಮ ಹಂತದಅಂದರೆ 17ರಿಂದ 20 ವರ್ಷಎಂಬ ವಿಭಾಗಗಳು ಇವುಗಳಾಗಿವೆ. ಹದಿಹರೆಯದವರು ಹಲವಾರುಆರೋಗ್ಯ ತೊಂದರೆಗಳಿಗೆ ಗುರಿಯಾಗಬಹುದಾಗಿದ್ದುಅದಕ್ಕೆ ವಿಶೇಷ ಆರೈಕೆಯಅಗತ್ಯವಿರುತ್ತದೆ.ಬೆಳವಣಿಗೆಯ ತೊಂದರೆ, ಪ್ರೌಢಾವಸ್ಥೆ ಮತ್ತುಅದಕ್ಕೆ ಸಂಬಂದಿಸಿದ ತೊಂದರೆಗಳು, ಧ್ವನಿ ತೊಂದರೆಗಳು, ಆಹಾರ ಸೇವನೆ ಮತ್ತು ಬೊಜ್ಜು ಮೈ ತೊಂದರೆಗಳು, ಥೈರಾಯ್ಡ್ ಮತ್ತುಇತರೆ ಮಾನಸಿಕ ತೊಂದರೆಗಳು ಸೇರಿದಂತೆ ಹಲವಾರು ಸಮಸ್ಯೆಗಳು ಕಾಡಬಹುದಾಗಿದೆ.ಪ್ರತಿ ಹದಿಹರೆಯದವರಿಗೆ ಕೆಲವು ರೋಗಗಳ ವಿರುದ್ಧ ಲಸಿಕೆ ಪಡೆಯುವುದು ಮತ್ತುವಾರ್ಷಿಕಆರೋಗ್ಯತಪಾಸಣೆಯಅಗತ್ಯವಿರುತ್ತದೆ.

ಇತ್ತೀಚಿನ ವರ್ಷಗಳಲ್ಲಿ ಕೂಡು ಕುಟುಂಬಗಳು ನಶಿಸುತ್ತಿದ್ದು ಸೂಕ್ತ ರೀತಿಯಲ್ಲಿ ಪೋಷಕರ ಮಾರ್ಗದರ್ಶನಇಲ್ಲದಿರುವುದು, ನಿರ್ಬಂಧರಹಿತರೀತಿಯಲ್ಲಿ ಮಾಧ್ಯಮಕ್ಕೆ ತೆರೆದುಕೊಳ್ಳುವುದು, ಹೆಚ್ಚಿದ ಸ್ಪರ್ಧಾತ್ಮಕತೆ, ಐಹಿಕ ವಿಷಯಗಳಿಗೆ ಹೆಚ್ಚಿನ ಗಮನ ನೀಡುವುದು, ಕೊಳ್ಳುಬಾಕ ಸಂಸ್ಕøತಿ ಮತ್ತುಅಹಂಭಾವಗಳಿಂದಾಗಿ ಹದಿಹರೆಯದವರು ಮತ್ತುಅವರಪೋಷಕರು ನೂತನ ಅಪಾಯಗಳಿಗೆ ಮತ್ತು ಒತ್ತಡಗಳಿಗೆ ಗುರಿಯಾಗುತ್ತಿದ್ದಾರೆ.ಇವುಗಳಲ್ಲಿ ಮಾದಕದ್ರವ್ಯದಚಟ, ಜೀವನಶೈಲಿಯ ತೊಂದರೆಗಳು, ಸ್ವಚ್ಛಂದ ಲೈಂಗಿಕತೆ ಮತ್ತುಇಂಟರ್‍ನೆಟ್‍ಚಟ ಮುಂತಾದವುಗಳು ಇವುಗಳಲ್ಲಿ ಸೇರಿವೆ.

ಪರಿವರ್ತನೆಯ ಹಂತ, ಉನ್ನತ ಬುದ್ಧಿಮತ್ತೆ, ಉನ್ನತ ಶಕ್ತಿ, ವಿರೋಧಿಸುವ ಮನೋಭಾವ, ಸ್ವಾತಂತ್ರ್ಯವನ್ನುಅರಸುವುದು, ಗಮನ ಸೆಳೆಯುವ ನಡವಳಿಕೆ, ಭಾವನಾತ್ಮಕ ಅಸ್ಥಿರತೆ, ಸ್ವಯಂ ನಿಯಂತ್ರಣದಕೊರತೆ ಮುಂತಾದ ವೈಶಿಷ್ಟ್ಯಗಳಿಂದಹದಿಹರೆಯದ ಪ್ರತ್ಯೇಕತೆ ಹೊಂದಿದೆ.ಪ್ರಯೋಗಾತ್ಮಕತೆ, ಪ್ರಶ್ನಿಸುವುದು, ಭಾವನಾತ್ಮಕಔನ್ನತ್ಯ ಮತ್ತುತಳಮಟ್ಟಗಳು, ಆವೇಗ ಪ್ರವೃತ್ತಿ ಮತ್ತುಅಪಾಯ ಕೈಗೆತ್ತಿಕೊಳ್ಳುವ ನಡವಳಿಕೆಗಳ ವಯಸ್ಸೂಇದಾಗಿದೆ.ಮಕ್ಕಳ ನಡವಳಿಕೆಯನ್ನು ಅರ್ಥಮಾಡಿಕೊಳ್ಳಲು ಪೋಷಕರಿಗೆಕಷ್ಟವಾಗುತ್ತದೆ.ಸೂಕ್ತವಾಗಿ ನಿಭಾಯಿಸದಿದ್ದರೆ ಪರಿಸ್ಥಿತಿ ನಿಯಂತ್ರಣ ಮೀರಿ ವಿಕೋಪಕ್ಕೆ ಹೋಗಬಹುದು.ಅಗತ್ಯವಿದ್ದಾಗ ಪೋಷಕರು ಮತ್ತು ಮಕ್ಕಳು ನಾಚಿಕೆಯಿಂದ ವೃತ್ತಿಪರ ವೈದ್ಯಕೀಯ ಸಹಾಯ ಪಡೆಯುವುದಿಲ್ಲ. ಆದರೆಇದುಅತ್ಯಂತ ಮುಖ್ಯವಾಗಿರುತ್ತದೆ.ಇದಕ್ಕಾಗಿ ಹದಿಹರೆಯ ಸಂಬಂಧಿಹಾರ್ಮೋನ್‍ಬದಲಾವಣೆಗಳಿಂದ ಉಂಟಾಗುವಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿರುವಮತ್ತು ತೊಂದರೆಗೊಳಗಾದ ಪೋಷಕರಿಗೆ ಈ ಪ್ರತ್ಯೇಕಕ್ಲಿನಿಕ್‍ಪ್ರೋತ್ಸಾಹಕರವಾಗಿದೆಎಂದುಮಂಗಳೂರಿನ ಕೆಎಂಸಿ ಆಸ್ಪತ್ರೆಯಮಕ್ಕಳ ರೋಗ ಶಾಸ್ತ್ರ ವಿಭಾಗ ಸಹ ಪ್ರೊಫೆಸರ್‍ಮತ್ತು ಹದಿಹರೆಯದವರ ಮಕ್ಕಳ ರೋಗತಜ್ಞರಾದಡಾ. ಜಯಶ್ರೀ ಕೆ. ಹೇಳಿದರು. ಡಾ. ಜಯಶ್ರೀ ಅವರುತ್ರಿವೇಂಡ್ರಂನ ಕೇರಳ ವಿಶ್ವ ವಿದ್ಯಾಲಯದಿಂದ ಹದಿಹರೆಯದ ಮಕ್ಕಳ ರೋಗಶಾಸ್ತ್ರದಲ್ಲಿ ವಿಶೇಷ ಸ್ನಾತಕೋತ್ತರಡಿಪ್ಲೊಮಾ ಪಡೆದಿರುತ್ತಾರೆ.

ಅತ್ಯುತ್ತಮ ವೈದ್ಯಕೀಯ ಸೇವೆನೀಡುವನಮ್ಮ ಬದ್ಧತೆಗೆಅನುಗುಣವಾಗಿ, ಹದಿಹರೆಯವರಿಗೆ ಪ್ರತ್ಯೇಕವಾದಹ್ಯಾಪಿ ಟೀನ್‍ಕ್ಲಿಕ್‍ಆರಂಭಿಸಲು ನಾವು ಹರ್ಷಿಸುತ್ತೇವೆ. ಹದಿಹರೆಯದ ಬದಲಾವಣೆಗಳನ್ನು ಜನರು ಸಾಮಾನ್ಯವಾಗಿ ನಿರ್ಲಕ್ಷಿಸುವುದರಿಂದಈ ವಿಷಯದಲ್ಲಿ ಹೆಚ್ಚಿನಜಾಗೃತಿಅಗತ್ಯವಿರುತ್ತದೆ.ಈ ಸಂದರ್ಭ ನನಡವಳಿಕೆಯಲ್ಲಿನ ಬದಲಾವಣೆಗಳು ಸ್ವಾಭಾವಿಕವಾಗಿದ್ದುವೈದ್ಯಕೀಯತೊಂದರೆಯಲ್ಲಿಎಂಬುದನ್ನು ಗಮನಿಸಬೇಕು.ಇದು ನೈಸರ್ಗಿಕ ಬೆಳವಣಿಗೆ ಪ್ರಕ್ರಿಯೆಯಾಗಿದ್ದು ವೃತ್ತಿಪರ ಸಹಾಯದಅಗತ್ಯವಿರುತ್ತದೆ.ಹ್ಯಾಪಿ ಟೀನ್‍ಕ್ಲಿನಿಕ್‍ನಲ್ಲಿಹಲವಾರು ಅಗತ್ಯಗಳಿಗೆ ತಕ್ಕಂತಹ ಪರಿಹಾರಗಳ ಮಿಶ್ರಣವನ್ನು ನಾವು ಸಾದರಪಡಿಸುತ್ತೇವೆ. ಹದಿಹರೆಯದಎಲ್ಲ ವಿಷಯಗಳನ್ನು ನಿಭಾಯಿಸಬಲ್ಲಅರ್ಹ ಮತ್ತುಅನುಭವಿವೈದ್ಯರು ಮತ್ತುವಿಶೇಷ ತಜ್ಞರತಂಡ ನಮ್ಮಲ್ಲಿದೆ. ಪೋಷಕರು ಮತ್ತುಅವರ ಹದಿಹರೆಯದ ಮಕ್ಕಳ ಚಿಂತನಾ ಪ್ರಕ್ರಿಯೆಗಳನ್ನು ಸಮಗ್ರೀಕರಿಸಿ ಅವರಿಗೆಉತ್ತಮಗುಣಮಟ್ಟದಜೀವನ ನೀಡುವುದಲ್ಲದೇಅವರ ಬಿಕ್ಕಟ್ಟನ್ನು ಪರಿಹರಿಸುವ ವೇದಿಕೆ ಇದಾಗಿದೆಎಂದುಕೆಎಂಸಿ ಆಸ್ಪತ್ರೆಯ ವೈದ್ಯಕೀಯ ಸೂಪರಿಂಟೆಂಡೆಂಟ್‍ಡಾ.ಆನಂದ್ ವೇಣುಗೋಪಾಲ್ ಹೇಳಿದರು.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: ಹ್ಯಾಪಿ ಟೀನ್‍ಕ್ಲಿನಿಕ್, ಪ್ರತಿ ಶನಿವಾರ ಬೆಳಗ್ಗೆ 11ರಿಂದ  ಸಂಜೆ 5 ಗಂಟೆ, ಕೆಎಂಸಿ ಆಸ್ಪತ್ರೆ, ಅಂಬೇಡ್ಕರ್ ವೃತ್ತ, ಮಂಗಳೂರು. ಅಥವಾದೂರವಾಣಿ ಸಂಖ್ಯೆ -1800 3001 4000


Spread the love