ಮಂಗಳೂರು ದಕ್ಷಿಣದಲ್ಲಿ ಆಗಬೇಕಿರುವ ಅಭಿವೃದ್ಧಿ ಕೆಲಸಗಳ ಬಗ್ಗೆ ಶಾಸಕ ಕಾಮತ್ ಅವರಿಂದ ಸಿಎಂಗೆ ಮನವಿ

Spread the love

ಮಂಗಳೂರು ದಕ್ಷಿಣದಲ್ಲಿ ಆಗಬೇಕಿರುವ ಅಭಿವೃದ್ಧಿ ಕೆಲಸಗಳ ಬಗ್ಗೆ ಶಾಸಕ ಕಾಮತ್ ಅವರಿಂದ ಸಿಎಂಗೆ ಮನವಿ

ಮಂಗಳೂರು: ಮಂಗಳೂರು ನಗರ ದಕ್ಷಿಣದಲ್ಲಿ ಆಗಬೇಕಾಗಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಶಾಸಕ ಡಿ ವೇದವ್ಯಾಸ ಕಾಮತ್ ಅವರು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯವರಿಗೆ ಲಿಖಿತ ಮನವಿ ಸಲ್ಲಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ಯೋಜನೆಯಾದ ಸ್ಮಾಟರ್್ ಸಿಟಿ ಆಗುವ ಭಾಗ್ಯ ಮಂಗಳೂರಿಗೆ ಒಲಿದಿದೆ. ಆದರೆ ಸಮರ್ಪಕವಾಗಿ ಅದು ಅನುಷ್ಟಾನಕ್ಕೆ ತರುವ ಪ್ರಕ್ರಿಯೆ ರಾಜ್ಯ ಸರಕಾರದ ಕಡೆಯಿಂದ ನಿಧಾನವಾಗಿ ನಡೆಯುತ್ತಿದೆ. ಇಲ್ಲಿಯ ತನಕ ಸ್ಮಾಟರ್್ ಸಿಟಿ ಯೋಜನೆಗೆ ಪೂರ್ಣ ಪ್ರಮಾಣದ ಎಂಡಿ, ಎಸ್ಪಿವಿ ನೇಮಕ ಆಗಿರುವುದಿಲ್ಲ. ಅಡ್ವೇಜರಿ ರಚನೆ ಕೂಡ ಆಗಿಲ್ಲ. ಈ ಯೋಜನೆಯಡಿ ನಿರ್ವಹಿಸಿರುವ ಕಾಮಗಾರಿಗಳ ಯೋಜನಾ ವೆಚ್ಚ, ಗುಣಮಟ್ಟದ ಬಗ್ಗೆ ಸಾರ್ವಜನಿಕರಿಂದ ದೂರುಗಳು ಕೇಳಿಬರುತ್ತಿವೆ. ಕಾಲಮಿತಿಯಡಿ ಯೋಜನೆ ಪೂರ್ಣಗೊಳಿಸಲು ತ್ವರಿತಗತಿಯಲ್ಲಿ ಯೋಜನೆ ಅನುಷ್ಟಾನ ಮಾಡಬೇಕಿದೆ. ಮಲ್ಟಿ ಲೆವೆಲ್ ಕಾರ್ ಪಾಕರ್ಿಂಗ್ ಮತ್ತು ಸರಕಾರಿ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಮಾರುಕಟ್ಟೆ ನಿಮರ್ಾಣ ಮತ್ತು ಜಿಲ್ಲಾ ಕ್ರೀಡಾಂಗಣವಾಗಿರುವ ಮಂಗಳಾ ಕ್ರೀಡಾಂಗಣದಲ್ಲಿ ಸಾಕಷ್ಟು ಅವ್ಯವಸ್ಥೆ ಇದೆ. ಅಲ್ಲಿ ಕ್ರೀಡಾಪಟುಗಳ ಅನುಕೂಲತೆಗಾಗಿ ಸಮಗ್ರ ಅಭಿವೃದ್ಧಿ ಆಗಬೇಕಿದೆ.

ಏಶಿಯನ್ ಕ್ರೀಡಾಕೂಟದಲ್ಲಿ ರಿಲೆಯಲ್ಲಿ ಚಿನ್ನದ ಪದಕ ಗೆದ್ದಿರುವ ಪೂವಮ್ಮ ಅವರಿಗೆ ರಾಜ್ಯ ಸರಕಾರ ಕೊಟ್ಟಿರುವ ಚಿನ್ನದ ಪದಕ ಗೆದ್ದದ್ದಕ್ಕೆ 25 ಲಕ್ಷ ಮತ್ತು ಬೆಳ್ಳಿ ಪದಕ ಗೆದ್ದದ್ದಕ್ಕೆ 15 ಲಕ್ಷ ಪ್ರೋತ್ಸಾಹಧನ ತುಂಬಾ ಕಡಿಮೆಯಾಗಿದೆ. ಗುಜರಾತ್ ಸರಕಾರದಿಂದ ಇದೇ ವಿಭಾಗದಲ್ಲಿ ಚಿನ್ನ ಗೆದ್ದಿರುವ ಕ್ರೀಡಾಪಟುವಿಗೆ ಒಂದು ಕೋಟಿ ರೂಪಾಯಿ ಸಿಕ್ಕಿದೆ. ಆದ್ದರಿಂದ ಪೂವಮ್ಮ ಅವರಿಗೂ ಒಂದು ಕೋಟಿ ರೂಪಾಯಿ ಮತ್ತು ಕಳೆದ ಏಶಿಯನ್ ಗೇಮ್ಸ್ ನಲ್ಲಿ ಪದಕ ಗೆದ್ದಾಗ ನಿವೇಶನ ಕೊಡುವ ಭರವಸೆ ಇನ್ನೂ ಈಡೇರದ್ದನ್ನು ಆದಷ್ಟು ಬೇಗ ಈಡೇರಿಸುವ ಅಗತ್ಯ ಇದೆ.

ಈ ವರ್ಷದ ಮೇ ಅಂತ್ಯ ಮತ್ತು ಜೂನ್ ಪ್ರಾರಂಭದಲ್ಲಿ ಸುರಿದ ಭಾರಿ ಮಳೆಗೆ ಮಂಗಳೂರು ನಗರ ದಕ್ಷಿಣದ ನೂರಾರು ಮನೆಗಳು ಭಾಗಶ: ಧ್ವಂಸ, ಮನೆಯ ಆವರಣ ಗೋಡೆ, ಕಟ್ಟಡಗಳ ತಡೆಗೋಡೆಗಳು ಕುಸಿದಿರುವುದು ಮತ್ತು ಸಾರ್ವಜನಿಕ ಸ್ವತ್ತುಗಳಿಗೆ ಅಪಾರ ಹಾನಿ ಸಂಭವಿಸಿದೆ. ಈ ಬಗ್ಗೆ ಖುದ್ದು ಪರಿಶೀಲನೆ ನಡೆಸಿದಾಗ ಸುಮಾರು 50 ಕೋಟಿ ರೂಪಾಯಿ ನಷ್ಟದ ಅಂದಾಜು ಮಾಡಲಾಗಿದೆ. ಇದರೊಂದಿಗೆ ಮಂಗಳೂರಿನಲ್ಲಿ ಸಾರ್ವಜನಿಕ ಗಣೇಶೋತ್ಸವ, ದಸರಾ ಮತ್ತು ದೀಪಾವಳಿ ಹಬ್ಬದ ಸಮಯದಲ್ಲಿ ಉತ್ಸವ ಮತ್ತು ಸಾರ್ವಜನಿಕ ಸಂಚಾರಕ್ಕೆ ರಸ್ತೆಗಳಲ್ಲಿ ಬಿದ್ದಿರುವ ಹೊಂಡ ಗುಂಡಿಗಳನ್ನು ಮುಚ್ಚಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಳ್ಳಲು ಕೂಡ ಅನುದಾನದ ಬಿಡುಗಡೆ ಮಾಡಲೇಬೇಕಿದೆ. ಈ ಎಲ್ಲಾ ಕಾಮಗಾರಿಗಳಿಗೆ ಮತ್ತು ಬೃಹತ್ ಒಳಚರಂಡಿ ನಿಮರ್ಾಣ ಸೇರಿ ಕನಿಷ್ಟ 50 ಕೋಟಿಯನ್ನಾದರೂ ತಕ್ಷಣ ಬಿಡುಗಡೆ ಮಾಡಬೇಕಿದೆ.

ಜಿಲ್ಲಾಸ್ಪತ್ರೆ ವೆನ್ಲಾಕ್ ನಲ್ಲಿ 900 ಸಾಮಾನ್ಯ ಬೆಡ್ ಮತ್ತು ಐಸಿಯುನಲ್ಲಿ 12 ಬೆಡ್ ಗಳಿವೆ. ಐಸಿಯುನಲ್ಲಿ ಕನಿಷ್ಟ ನೂರು ಬೆಡ್ಗಳನ್ನಾದರೂ ಮಾಡಬೇಕಿದೆ. ಇನ್ನು ಆರೋಗ್ಯ ಕನರ್ಾಟಕ ಕಾಡರ್್ ಯೋಜನೆಯ ಸೌಲಭ್ಯ ಜನಸಾಮಾನ್ಯರಿಗೆ ಸಿಗಲು ಇರುವ ಕೊಂದುಕೊರತೆಗಳನ್ನು ಪರಿಹರಿಸಬೇಕು. ತುತರ್ು ಸಂದರ್ಭದಲ್ಲಿ ರೋಗಿಗಳು, ಅಪಘಾತಕ್ಕೆ ಒಳಗಾದ ಗಾಯಾಳುಗಳನ್ನು ಖಾಸಗಿ ಆಸ್ಪತ್ರೆಗೆ ಸೇರಿಸುವ ಅಗತ್ಯ ಇರುತ್ತದೆ. ಆಗ ರೋಗಿಗಳ ಸಂಬಂಧಿಕರಿಗೆ ವೆನ್ಲಾಕ್ ಆಸ್ಪತ್ರೆಯಲ್ಲಿ ಕೂಡಲೇ ರೆಫೆರೆನ್ಸ್ ಕಾಡರ್್ ಸಿಗುವ ವ್ಯವಸ್ಥೆ ಆಗಬೇಕು. ಆರೋಗ್ಯ ಕನರ್ಾಟಕದ ಮಾಹಿತಿಗಾಗಿ ವೆನ್ಲಾಕ್ ಆಸ್ಪತ್ರೆಯಲ್ಲಿ ಹೆಚ್ಚುವರಿ ಕೌಂಟರ್ ತೆರೆಯಬೇಕಿದೆ.

ಯಾಂತ್ರೀಕೃತ ನಾಡದೋಣಿಗಳಿಗೆ ಸಬ್ಸಿಡಿ ದರದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಮೂಲಕ ಸೀಮೆ ಎಣ್ಣೆಯನ್ನು ಪೂರೈಸಲಾಗುತ್ತಿತ್ತು. ಆದರೆ ಈ ಬಾರಿ ಅದನ್ನು ಮೀನುಗಾರಿಕಾ ಇಲಾಖೆಯ ಮೂಲಕ ನೀಡಲಾಗುತ್ತಿದೆ. ಈಗಾಗಲೇ ಮೀನುಗಾರಿಕಾ ಇಲಾಖೆಗೆ ನೀಡಿರುವ ಅನುದಾನವನ್ನು ರಾಜ್ಯ ಸರಕಾರ ಕಡಿತ ಮಾಡಿರುವುದರಿಂದ ಮೀನುಗಾರರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ಆದ್ದರಿಂದ ಸಬ್ಸಿಡಿ ದರದಲ್ಲಿ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯಿಂದ ಸೀಮೆಎಣ್ಣೆ ವಿತರಿಸಲು ಅವಕಾಶ ಮಾಡಿಕೊಡಬೇಕು.

ಕಂದಾಯ ಇಲಾಖೆಯಲ್ಲಿ 11ಈ ಸಹಿತ ಅನೇಕ ವಿಷಯಗಳ ಕುರಿತು ದಕ್ಷಿಣ ಕನ್ನಡ ಜಿಲ್ಲೆಯ ನಾಗರಿಕರು ಅನುಭವಿಸುತ್ತಿರುವ ತೊಂದರೆಗಳನ್ನು ಕಂದಾಯ ಸಚಿವ ಆರ್ ವಿ ದೇಶಪಾಂಡೆಯವರಿಗೆ ಈಗಾಗಲೇ ಮನವಿ ಸಲ್ಲಿಸಲಾಗಿದೆ. ಈ ಕುರಿತು ಮುಖ್ಯಮಂತ್ರಿಗಳು ಗಮನ ಹರಿಸಬೇಕು.

ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಒಟ್ಟು ಇರಬೇಕಾಗಿರುವ ಸಿಬ್ಬಂದಿ ಸಂಖ್ಯೆ 1725. ಆದರೆ ಅದರಲ್ಲಿ 1084 ಹುದ್ದೆಗಳು ಖಾಲಿ ಇವೆ. ಇದರಿಂದ ಜನಸಾಮಾನ್ಯರ ಅಗತ್ಯದ ಕೆಲಸಗಳು ನಡೆಯದೇ ಜನರು ತೊಂದರೆ ಅನುಭವಿಸುತ್ತಿದ್ದಾರೆ.

ಮಹಾಕಾಳಿ ಪಡ್ಪು ಪ್ರದೇಶದಲ್ಲಿ ರೈಲ್ವೆ ಇಲಾಖೆಯಿಂದ ಜಿಎಡಿ ನಕ್ಷೆ ಅನುಮೋದನೆಗೊಂಡಿದ್ದು ರೈಲ್ವೆ ಕೆಳಸೇತುವೆಯ ನಿಮರ್ಾಣಕ್ಕಾಗಿ ರಾಜ್ಯ ಸರಕಾರದ ಪಾಲು ಇಪ್ಪತ್ತು ಕೋಟಿ ರೂಪಾಯಿ ಆದಷ್ಟು ಶೀಘ್ರದಲ್ಲಿ ಮಂಜೂರು ಮಾಡಿದರೆ ಜನಸಾಮಾನ್ಯರ ಸಂಚಾರಕ್ಕೆ ಅನುಕೂಲವಾಗುತ್ತದೆ.

ಮಂಗಳೂರು ಮಹಾನಗರ ಪಾಲಿಕೆಯಲ್ಲಿ ನಡೆದ ಕಾಮಗಾರಿಗಳ ಬಿಲ್ ಅನ್ನು ಹಿರಿತನದ ಆಧಾರದಲ್ಲಿ ಮಂಜೂರು ಮಾಡದೇ ವಶೀಲಿಬಾಜಿಗಳ ಮೂಲಕ ಹಣ ಬಿಡುಗಡೆ ಮಾಡುವ ಪ್ರಕ್ರಿಯೆ ನಡೆಯುತ್ತಿರುವುದರಿಂದ ಗುತ್ತಿಗೆದಾರರಿಗೆ ತುಂಬಾ ಅನಾನುಕೂಲತೆ ಆಗುತ್ತಿದೆ. ಇದು ಭ್ರಷ್ಟಾಚಾರಕ್ಕೂ ಕಾರಣವಾಗುತ್ತಿದೆ.

ಈ ಎಲ್ಲಾ ವಿಷಯಗಳ ಬಗ್ಗೆ ಮುಖ್ಯಮಂತ್ರಿಯವರು ಪರಿಶೀಲಿಸಿ ಮಂಗಳೂರು ನಗರ ದಕ್ಷಿಣದ ಅಭಿವೃದ್ಧಿಯ ಬಗ್ಗೆ ಶೀಘ್ರ ಅನುದಾನ ಬಿಡುಗಡೆ ಮಾಡಬೇಕೆಂದು ಶಾಸಕ ಡಿ ವೇದವ್ಯಾಸ ಕಾಮತ್ ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ಮನವಿ ಮಾಡಿದ್ದಾರೆ.


Spread the love