ಮಂಗಳೂರು ಧರ್ಮಪ್ರಾಂತ್ಯ ವತಿಯಿಂದ ಕ್ರಿಸ್ಮಸ್ ಹಬ್ಬದ ವಾಹನಗಳ ಮೆಗಾ ರ್ಯಾಲಿ
ಮಂಗಳೂರು: ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಮಂಗಳೂರು ಧರ್ಮಪ್ರಾಂತ್ಯ ವತಿಯಿಂದ ತಾ-21-12-2016 (ಬುದವಾರ) ರಂದು ಅಪರಾಹ್ನ ವಾಹನಗಳ ಮೆಗಾ ರ್ಯಾಲಿ ಹಮ್ಮಿಕೊಳ್ಳಲಾಗಿದೆ. ಈ ರ್ಯಾಲಿಯಲ್ಲಿ ಧರ್ಮಪ್ರಾಂತ್ಯದ ಐದು ವಲಯಗಳ (ಎಪಿಸ್ಕೊಪಲ್, ಸಿಟಿ, ಪೆರ್ಮನ್ನೂರು, ಪೆeóÁರ್ ಮತ್ತು ಸುರತ್ಕಲ್) ಜನರು ಭಾಗವಹಿಸಲಿದ್ದಾರೆ.
ರ್ಯಾಲಿಯನ್ನು ನಾಲ್ಕು ವಿಭಾಗಗಳಲ್ಲಿ ಆಯೋಜಿಸಲಾಗಿದೆ: ಎ)ಪೆರ್ಮನ್ನೂರು ವಲಯದ ವಾಹನಗಳು ಪಂಪ್ವೆಲ್-ಕಂಕನಾಡಿ-ಫಳ್ನೀರ್-ಮಿಲಾಗ್ರಿಸ್(ನಾಗೊರಿ ಮತ್ತು ಬಜಾಲ್ ವಾಹನಗಳು ಪಂಪ್ವೆಲ್ ಬಳಿ ಮತ್ತು ಕಾಸ್ಸಿಯಾ, ಜೆಪ್ಪು ಮತ್ತು ವಾಲೆನ್ಸಿಯಾ ವಾಹನಗಳು ಕಂಕನಾಡಿ ಬಳಿ ರ್ಯಾಲಿ ಸೇರಿಕೊಳ್ಳಲಿವೆ). ಬಿ)ವಾಮಂಜೂರ್, ಫೆರ್ಮಾಯ್, ಕೆಲರಯ್, ಪಾಲ್ದನೆ, ಶಕ್ತಿನಗರ ಕುಲಶೇಕರ, ನಂತೂರ್-ಬೆಂದೂರ್-ಬಲ್ಮಠ-ಜ್ಯೋತಿ-ಮಿಲಾಗ್ರಿಸ್ (ದಾರಿಯಲ್ಲಿ ಬಜ್ಜೋಡಿ, ಬೆಂದೂರ್ ವಾಹನಗಳು ರ್ಯಾಲಿ ಸೇರಿಕೊಳ್ಳಲಿವೆ) ಸಿ) ಸುರತ್ಕಲ್, ತನ್ನೀರ್ಬಾವಿ, ಕುಳೂರು, ಆಶೊಕನಗರ, ಉರ್ವದ ವಾಹನಗಳು ಲಾಲ್ಬಾಗ್-ಪಿ.ವಿ.ಎಸ್-ಬಂಟ್ಶ್ ಹಾಸ್ಟೆಲ್-ಜ್ಯೋತಿ-ಮಿಲಾಗ್ರಿಸ್(ಬೊಂದೇಲ್, ದೇರೆಬೈಲ್, ಬಿಜೈ ವಾಹನಗಳು ಲಾಲ್ ಬಾಗ್ ಹತ್ತಿರ ರ್ಯಾಲಿ ಸೇರಿ ಕೊಳ್ಳಲಿವೆ) ಡಿ) ರೊಸಾರಿಯೋ-ಎ.ಬಿ.ಶೆಟ್ಟಿ ಸರ್ಕಲ್- ಮಿಲಾಗ್ರಿಸ್
ರ್ಯಾಲಿಯಲ್ಲಿ ದ್ವಿಚಕ್ರ ಮತ್ತು ಇತರ ನಾಲ್ಕು ಚಕ್ರದ ವಾಹನಗಳು ಬಾಗವಹಿಸಲಿವೆ. ಸುಮಾರು 3000 ಜನರು ಈ ರ್ಯಾಲಿಯಲ್ಲಿ ಭಾಗ ವಹಿಸುವ ನಿರೀಕ್ಷೆ ಇದೆ. ರ್ಯಾಲಿಯಲ್ಲಿ ಕ್ರಿಸ್ಮಸ್ ಹಬ್ಬಕ್ಕೆ ಸಂಬದ ಪಟ್ಟ ದ್ಪಶ್ಯಗಳು ಮತ್ತು ಹಾಡುಗಳು ಇರುವುವು. ಎಲ್ಲ ವಾಹನಗಳಿಗೆ ಮಿಲಾಗ್ರಿಸ್ ಶಾಲಾ ಮೈದಾನದಲ್ಲಿ ಪಾರ್ಕಿಂಗ್ ಮಾಡಲಾಗಿದೆ. ವಾಹನಗಳಲ್ಲಿ ಬಂದ ಜನರು ಮಿಲಾಗ್ರಿಸ್ ಚರ್ಚ್ ವಠಾರದಲ್ಲಿ ಸಾಯಾಂಕಾಲ 6.30 ಕ್ಕೆ ಸೇರಲಿದ್ದಾರೆ ಅಲ್ಲಿ ಕ್ರಿಸ್ ಹಬ್ಬದ ಹಾಡುಗಳು (ಕೊಂಕಣಿ, ಕನ್ನಡ, ಇಂಗ್ಲಿಷ್ ಭಾಶೆಯಲ್ಲಿ) ಹಾಡಲಾಗುವುದು. ಯೆಸುಸ್ವಾಮಿಯ ಭೊದನೆ ಆಧಾರಿತ ದ್ಪಶ್ಯ ರೂಪಕ ಪ್ರದರ್ಶಿಸಲಾಗುವುದು. ಅ.ವಂ.ಡಾ. ಅಲೋಶಿಯಸ್ ಪಾವ್ಲ್ ಡಿಸೋಜ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರು ಕ್ರಿಸ್ಮಸ್ ಹಬ್ಬದ ಸಂದೇಶ ನೀಡುವರು.
ಈ ಹಬ್ಬದ ಆಚರಣೆಯ ಅಂಗವಾಗಿ ಶುಕ್ರವಾರ 23-12-2016 ರಂದು ಜೆಪ್ಪು ಸಂತ ಆಂತೋನಿ ಆಶ್ರಮದಲ್ಲಿ ಧರ್ಮಾಧ್ಯಕ್ಷರು ನಿರ್ಗತಿಕರಿಗೆ ಕ್ರಿಸ್ಮಸ್ ತಿಂಡಿ ಮತ್ತು ಬಟ್ಟೆ ಹಾಗೂ ಏಡ್ಸ್ ಪೀಡಿತ ಕುಟುಂಬಗಳಿಗೆ ಹಬ್ಬಕ್ಕೆ ಬೇಕಾದ ಸಾಮಾಗ್ರಿ ಮತ್ತು ಬಡ ಕುಟುಂಬಕ್ಕೆ ಮನೆ ಕಟ್ಟಲು ನೆರವು ನೀಡಲಿದ್ದಾರೆ.
ಪತ್ರಿಕಾಗೊಷ್ಟಿಯಲ್ಲಿ ವಂ. ಒನಿಲ್ ಡಿ’ಸೊಜ ರ್ಯಾಲಿಯ ಸಂಚಾಲಕರು, ವಂ. ರೊನಾಲ್ಡ್ ಡಿ’ಸೋಜ ಭಾರತೀಯ ಕಥೋಲಿಕ ಯುವ ಸಂಚಾಲನ, ಮಂಗಳೂರು, ಎಂ.ಪಿ ನೊರೊನ್ಹ ಕಾರ್ಯದರ್ಶಿ, ಗೋಡ್ ವಿನ್ ಪಿಂಟೋ ಉಪಸ್ಥಿತರಿದ್ದರು.