ಮಂಗಳೂರು: ಮಂಗಳೂರು ಕ್ಷೇತ್ರದ ಶಾಸಕರಾದ ಜೆ ಆರ್ ಲೋಬೋರವರು ಇಂದು ಬೆಳಿಗ್ಗೆ ನಗರದ ವಿವಿಧೆಡೆ ಅಭಿವೃದ್ಧಿಯ ಯೋಜನೆಯ ಕುರಿತಂತೆ ವಿವಿಧ ಸ್ಥಳಗಳಿಗೆ ಭೇಟಿನೀಡಿದರು.
ಯೋಜನೆಯ ಪರಿಶೀಲನೆಯ ನಂತರ ಶಾಸಕರಾದ ಲೋಬೋರವರು ಮಾದ್ಯಮ ಮಿತ್ರರನ್ನುದ್ದೇಶಿಸಿ ಶಾಸಕರಾದ ಲೋಬೋರವರು ಯೋಜನೆಯ ಸಂಕ್ಷಿಪ್ತ ವರದಿಯನ್ನು ನೀಡಿದರು
ಯೋಜನೆಯ ವಿವರಗಳು ಈ ಕೆಳಗಿನಂತಿವೆ:
ಕದ್ರಿ ಪಾರ್ಕ್ ಅಭಿವೃದ್ಧಿ
ಸಂಗೀತ ಕಾರಂಜಿ ಅಭಿವೃದ್ಧಿ, ಹೂದೋಟ ನಿರ್ಮಾಣ ಹಾಗೂ ಕದ್ರಿ ಪಾರ್ಕ್ ಅಭಿವೃದ್ಧಿ, ವಿದ್ಯುದ್ದೀಪ, ಮುಖ್ಯ ದ್ವಾರ, ಪಾರ್ಕ್ನ ಮುಂಭಾಗದ ರಸ್ತೆ ಅಭಿವೃದ್ಧಿ, ವಾಹನ ನಿಲುಗಡೆ ಅಭಿವೃದ್ಧಿ, ಸೊಸೈಟಿ ರಚನೆ.
ಇಲಾಖೆಗಳು : ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ, ತೋಟಗಾರಿಕಾ ಇಲಾಖೆ, ಮಂಗಳೂರು ಮಹಾನಗರ ಪಾಲಿಕೆ, ನಿರ್ಮಿತಿ ಕೇಂದ್ರ.
ಮಂಗಳೂರು ನಗರದ ಮಾರುಕಟ್ಟೆಗಳ ಪುನರ್ ನಿರ್ಮಾಣ. 1) ಕೇಂದ್ರ ಮಾರುಕಟ್ಟೆ. 2) ಕಂಕನಾಡಿ ಮಾರುಕಟ್ಟೆ.3) ಕದ್ರಿ ಮಾರುಕಟ್ಟೆ 4) ಬಿಕರ್ನಕಟ್ಟೆ ಮಾರುಕಟ್ಟೆ. 5) ಅಳಪೆ ಮಾರುಕಟ್ಟೆ.
ಇಲಾಖೆ : ಮಂಗಳೂರು ಮಹಾನಗರ ಪಾಲಿಕೆ. 6) ಉರ್ವ ಮಾರುಕಟ್ಟೆ. 7) ಉರ್ವ ಸ್ಟೋರ್ ಮಾರುಕಟ್ಟೆ.
ಇಲಾಖೆ : ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ.
ಪಂಪುವೆಲ್ ವೃತ್ತದ ಹತ್ತಿರ ಖಾಸಗಿ ಬಸ್ ನಿಲ್ದಾಣ ನಿರ್ಮಾಣ,
ಇಲಾಖೆ : ಮಂಗಳೂರು ಮಹಾನಗರ ಪಾಲಿಕೆ.
ಹಂಪನ್ಕಟ್ಟೆ ಹಳೇ ಬಸ್ ನಿಲ್ದಾಣದಲ್ಲಿ ವಾಹನ ತಂಗುದಾಣದ ನಿರ್ಮಾಣ.
ಇಲಾಖೆ : ಮಂಗಳೂರು ಮಹಾನಗರ ಪಾಲಿಕೆ.
ಕಂಕನಾಡಿ ರೈಲ್ವೆ ನಿಲ್ದಾಣಕ್ಕೆ ಅಗಲ ಕಿರಿದಾದ ರಸ್ತೆಯನ್ನು ಅಗಲಗೊಳಿಸಿ ಕಾಂಕ್ರೀಟೀಕರಣಗೊಳಿಸುವುದು.
ಇಲಾಖೆ : ಮಂಗಳೂರು ಮಹಾನಗರ ಪಾಲಿಕೆ.
ರಸ್ತೆ ಮತ್ತು ಫೂಟ್ಪಾತ್ಗಳ ನಿರ್ಮಾಣ 2ನೇ ಮತ್ತು 3ನೇ 100 ಕೋಟಿ ಯೋಜನೆ ಅನುಷ್ಠಾನ.
ಇಲಾಖೆ : ಮಂಗಳೂರು ಮಹಾನಗರ ಪಾಲಿಕೆ.
ಮಹಾಕಾಳಿಪಡ್ಪುವಿನಲ್ಲಿ ರೈಲ್ವೆ ಕೆಳಸೇತುವೆ ನಿರ್ಮಾಣ.
ಇಲಾಖೆ : ಮಂಗಳೂರು ಮಹಾನಗರ ಪಾಲಿಕೆ, ರೈಲ್ವೆ ಇಲಾಖೆ.
ಕುಡುಪ್ಪಾಡಿಯಲ್ಲಿ ರೈಲ್ವೆ ಕೆಳ ಸೇತುವೆ ನಿರ್ಮಾಣ.
ಇಲಾಖೆ : ಮಂಗಳೂರು ಮಹಾನಗರ ಪಾಲಿಕೆ, ರೈಲ್ವೆ ಇಲಾಖೆ.
ಕುಲಶೇಖರ ಕನ್ನಗುಡ್ಡೆ ರಸ್ತೆ ನಿರ್ಮಾಣ ಮತ್ತು ಕುಲಶೇಖರ-ಕೊಂಗೂರು ಮಠ ರಸ್ತೆ ನಿರ್ಮಾಣ.
ಇಲಾಖೆ : ರೈಲ್ವೆ ಮತ್ತು ಮಂಗಳೂರು ಮಹಾನಗರ ಪಾಲಿಕೆ.
ಪಡೀಲ್ ನಲ್ಲಿ ರೈಲ್ವೆ ಕೆಳ ಸೇತುವೆ ಯೋಜನೆಗೆ ರಸ್ತೆ ಮತ್ತು ಚರಂಡಿಯ ಪೂರಕ ಕಾಮಗಾರಿಗಳು.
ಇಲಾಖೆ : ಮಂಗಳೂರು ಮಹಾನಗರ ಪಾಲಿಕೆ, ರೈಲ್ವೆ ಇಲಾಖೆ.
ಯೆಯ್ಯಾಡಿಯಲ್ಲಿ ವಿಮಾನ ನಿಲ್ದಾಣ ರಸ್ತೆಯಿಂದ ಶಕ್ತಿನಗರ ರಸ್ತೆಯನ್ನು ಅಗಲೀಕರಿಸುವುದು ಮತ್ತು ಕಾಂಕ್ರೀಟೀಕರಣ.
ಇಲಾಖೆ : ಮಂಗಳೂರು ವiಹಾನಗರ ಪಾಲಿಕೆ.
ಮೀನುಗಾರಿಕಾ ಕಾಲೇಜಿನ ಹತ್ತಿರ ಕನಕರ ಬೆಟ್ಟು ರಸ್ತೆ ನಿರ್ಮಾಣ.
ಇಲಾಖೆ : ಮಂಗಳೂರು ಮಹಾನಗರ ಪಾಲಿಕೆ, ಮೀನುಗಾರಿಕಾ ಕಾಲೇಜು.
ತಣ್ಣೀರುಬಾವಿಯಲ್ಲಿ ತೂಗು ಸೇತುವೆ ನಿರ್ಮಾಣ.
ಇಲಾಖೆ : ಲೋಕೋಪಯೋಗಿ.
ನೇತ್ರಾವತಿ – ಕಣ್ಣೂರು ಬೈಪಾಸ್ ರಸ್ತೆ ನಿರ್ಮಾಣ.
ಇಲಾಖೆ : ಲೋಕೋಪಯೋಗಿ.
ನೈಸರ್ಗಿಕ ವಿಕೋಪ ಪರಿಹಾರ ರಸ್ತೆಗಳ ನಿರ್ಮಾಣ.
ಇಲಾಖೆ : ಲೋಕೋಪಯೋಗಿ, ಮಂಗಳೂರು ಮಹಾನಗರ ಪಾಲಿಕೆ.
ಮಿನಿ ವಿಧಾನಸೌಧ ನಿರ್ಮಾಣ.
ಇಲಾಖೆ : ಲೋಕೋಪಯೋಗಿ.
ಸರಕಾರಿ ನೌಕರರಿಗೆ ಉರ್ವ ಸ್ಟೋರ್ ಪಿ.ಡಬ್ಲ್ಯೂಡಿ ಜಾಗದಲ್ಲಿ ಬಹು ಅಂತಸ್ತಿನ ವಸತಿ ಗೃಹಗಳ ನಿರ್ಮಾಣ. ಉಳಿದ ಜಾಗದಲ್ಲಿ ರಂಗ ಮಂದಿರ ನಿರ್ಮಾಣ, ವಾಣಿಜ್ಯ ಸಂಕೀರ್ಣ ನಿರ್ಮಾಣ.
ಇಲಾಖೆ : PWD, ಕರ್ನಾಟಕ ಗೃಹ ಮಂಡಳಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆ.
ಕೋರ್ಟು ರಸ್ತೆ ನಿರ್ಮಾಣ.
ಇಲಾಖೆ : ಲೋಕೋಪಯೋಗಿ.
ಬಜಾಲ್ ರಸ್ತೆ ನಿರ್ಮಾಣ.
ಇಲಾಖೆ : ಲೋಕೋಪಯೋಗಿ, ಮಹಾನಗರ ಪಾಲಿಕೆ.
ಉರ್ವ ಮಾರುಕಟ್ಟೆ – ಸುಲ್ತಾನ್ ಬತ್ತೇರಿ ರಸ್ತೆ ನಿರ್ಮಾಣ.
ಇಲಾಖೆ : ಲೋಕೋಪಯೋಗಿ, ಮಹಾನಗರ ಪಾಲಿಕೆ.
ಕಬಡ್ಡಿ ಮತ್ತು ಶಟಲ್ ಒಳಾಂಗಣ ಕ್ರೀಡಾಂಗಣ, ಉರ್ವ ಮಾರುಕಟ್ಟೆ ಹತ್ತಿರ.
ಇಲಾಖೆ : ಕ್ರೀಡಾ ಇಲಾಖೆ, ಮಹಾನಗರ ಪಾಲಿಕೆ.
ಅಂತರಾಷ್ಟ್ರೀಯ ಈಜು ಕೊಳ, ಎಮ್ಮೆಕೆರೆಯಲ್ಲಿ.
ಇಲಾಖೆ : ಕ್ರೀಡಾ ಇಲಾಖೆ.
ಬೊಂದೇಲ್ನಲ್ಲಿ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣ.
ಇಲಾಖೆ : ಕ್ರೀಡಾ ಇಲಾಖೆ, ಪಿ.ಡಬ್ಲ್ಯೂಡಿ. ಗುಜ್ಜರಕೆರೆ ಅಭಿವೃದ್ಧಿ.
ಇಲಾಖೆ : ಸಣ್ಣ ನೀರಾವರಿ, ಮಹಾನಗರ ಪಾಲಿಕೆ.
ಮೂರನೇ ಹಂತದ ಮೀನುಗಾರಿಕಾ ಬಂದರು ಅಭಿವೃದ್ಧಿ
ಇಲಾಖೆ : ಮೀನುಗಾರಿಕಾ ಇಲಾಖೆ, ಬಂದರು ಇಲಾಖೆ.
ಬೊಕ್ಕಪಟ್ಣದಲ್ಲಿ ಮೀನುಗಾರಿಕಾ ದಕ್ಕೆ ನಿರ್ಮಾಣ.
ಇಲಾಖೆ : ಮೀನುಗಾರಿಕೆ, ಬಂದರು.
ಹಳೇ ಬಂದರಿನಲ್ಲಿ ರಖಂ ಮೀನುಗಾರಿಕಾ ಮಾರುಕಟ್ಟೆ ಅಭಿವೃದ್ಧಿ.
ಇಲಾಖೆ : ಮೀನುಗಾರಿಕೆ, ಬಂದರು, ಮಹಾನಗರ ಪಾಲಿಕೆ.
ಮಂಗಳೂರು ನಗರದಲ್ಲಿ ಭೂಗತ ವಿದ್ಯುತ್ ಕೇಬಲ್ ಅಳವಡಿಸುವುದು.
ಇಲಾಖೆ : ಮೆಸ್ಕಾಂ.
ಮಣ್ಣಗುಡ್ಡದಲ್ಲಿ ವಿದ್ಯುತ್ ಸಬ್ ಸ್ಟೇಶನ್ ನಿರ್ಮಾಣ.
ಇಲಾಖೆ : ಮೆಸ್ಕಾಂ, ಮಹಾನಗರ ಪಾಲಿಕೆ.
ನೆಹರೂ ಮೈದಾನಿನ ಹತ್ತಿರ ವಿದ್ಯುತ್ ಸಬ್ಸ್ಟೇಷನ್ ಮೇಲ್ದರ್ಜೆರೇರಿಸುವುದು.
ಇಲಾಖೆ : ಮೆಸ್ಕಾಂ.
ಕಂಕನಾಡಿ ಗ್ರಾಮೀಣಪೊಲೀಸ್ ಸ್ಟೇಷನ್ ನನ್ನು ವಿಭಜಿಸಿ, ನಗರ ಮತ್ತು ಗ್ರಾಮೀಣ ಎಂದು ಎರಡು ಪೊಲೀಸ್ ಸ್ಟೇಷನ್ಗಳ ನಿರ್ಮಾಣ.
ಇಲಾಖೆ : ಕಮಿಶನರ್, ಪೊಲೀಸ್, ಮಂಗಳೂರು.
ಬಜ್ಪೆ ಹತ್ತಿರ ಎಕ್ಕಾರಿನಲ್ಲಿ ಕೇಂದ್ರ ಸರಕಾರದ ರ್ಯಾಪಿಡ್ ಆಕ್ಸನ್ ಫೋರ್ಸ್ ಪಡೆಯನ್ನು ಸ್ಥಾಪಿಸಲು ಜಮೀನು ಮಂಜೂರಾತಿ.
ಇಲಾಖೆ : ಕಂದಾಯ, ಕಮಿಷನರ್, ಪೊಲೀಸ್.
ಮಂಗಳೂರು ನಗರದಲ್ಲಿ ಟ್ರಾಫಿಕ್ ವಾರ್ಡನ್ಗಳ ಸ್ಥಾಪನೆ.
ಇಲಾಖೆ : ಪೊಲೀಸ್ ಕಮಿಷನರ್.
ಬೆಂಗ್ರೆಯಲ್ಲಿ ನಗರ ರಿಸರ್ವ್ ಪೊಲೀಸ್ ಪೆರೇಡ್ ಗ್ರೌಂಡ್ ನಿರ್ಮಾಣ.
ಇಲಾಖೆ : ಕಂದಾಯ, ಸಿ.ಆರ್.ಜೆಡ್, ಪೊಲೀಸ್ ಕಮಿಷನರ್.
ಮುಡಿಪುವಿನಲ್ಲಿ ಕೇಂದ್ರ ಕಾರಾಗೃಹ ಸ್ಥಾಪನೆ.
ಇಲಾಖೆ : ಕಾರಾಗೃಹ
ಇಎಸ್ಐ ಆಸ್ಪತ್ರೆಯನ್ನು ಕೇಂದ್ರ ಸರಕಾರಕ್ಕೆ ವಹಿಸುವುದು.
ಇಲಾಖೆ : ಇ.ಎಸ್.ಐ. ಆಸ್ಪತ್ರೆ.
ಕರ್ನಾಟಕ ಪಾಲಿಟೆಕ್ನಿಕ್ ಮಂಗಳೂರು, ಇಲ್ಲಿ ರಾತ್ರಿ ಇಂಜಿನಿಯರಿಂಗ್ ಕಾಲೇಜನ್ನು ಆರಂಭಿಸುವುದು.
ಇಲಾಖೆ : ಉನ್ನತ ಶಿಕ್ಷಣ, ಕರ್ನಾಟಕ ಪಾಲಿಟೆಕ್ನಿಕ್.
ಅರ್ಬನ್ ಹೆಲ್ತ್ ಸೆಂಟರುಗಳನ್ನು ಮಂಗಳೂರು ನಗರದಲ್ಲಿ ಆರಂಭಿಸುವುದು.
ಇಲಾಖೆ : ಜಿಲ್ಲಾ ವೈದ್ಯಾಧಿಕಾರಿ (ಡಿಎಚ್ಒ) ಮಂಗಳೂರು ಮಹಾನಗರ ಪಾಲಿಕೆ.
2.5 ಎಂಜಿಡಿ ಹಳೇ ತುಂಬೆ ಮಂಗಳೂರು ನೀರು ಸರಬರಾಜು ಕೊಳವೆಯನ್ನು ದ.ಕ. ಜಿ.ಪಂ. ಗೆ ಹಸ್ತಾಂತರಿಸುವುದು.
ಇಲಾಖೆ : ದ.ಕ. ಜಿ.ಪಂ. ಮಂಗಳೂರು, ಮಂಗಳೂರು ಮಹಾನಗರ ಪಾಲಿಕೆ.
ವೆನ್ಲಾಕ್ ಆಸ್ಪತ್ರೆಯಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವುದು.
ಇಲಾಖೆ : ವೆನ್ಲಾಕ್ ಆಸ್ಪತ್ರೆ, ಮಂಗಳೂರು ಮಹಾನಗರ ಪಾಲಿಕೆ.
ಎ.ಡಿ.ಬಿ. 2ನೇ ಹಂತದ ಯೋಜನೆ ಅನುಷ್ಠಾನ.
ಇಲಾಖೆ : ಮಂಗಳೂರು ಮಹಾನಗರ ಪಾಲಿಕೆ.
ಮಂಗಳೂರು ನಗರಕ್ಕೆ ಸ್ಮಾರ್ಟ್ ಸಿಟಿ ಅನುಷ್ಠಾನ.
ಇಲಾಖೆ : ಮಂಗಳೂರು ಮಹಾನಗರ ಪಾಲಿಕೆ.
ಅಮೃತ ಸಿಟಿ.
ಮಹಾನಗರ ಪಾಲಿಕೆ (ಸಂಪೂರ್ಣ ಗಣಕೀಕೃತ)
ಕಣ್ಣೂರಿನಲ್ಲಿ ಬಹುಮಹಡಿ ಆಶ್ರಯ ಯೋಜನೆ.