ಮಂಗಳೂರು ನಗರದಲ್ಲಿ ಅವಶ್ಯವಿರುವ ಕಡೆಗಳಲ್ಲಿ ನೋ-ಪಾರ್ಕಿಂಗ್ ವಲಯಗಳನ್ನು ಘೋಷಿಸಿ ನಗರ ಪೊಲೀಸ್ ಕಮೀಷನರ್  ಆದೇಶ

Spread the love

ಮಂಗಳೂರು ನಗರದಲ್ಲಿ ಅವಶ್ಯವಿರುವ ಕಡೆಗಳಲ್ಲಿ ನೋ-ಪಾರ್ಕಿಂಗ್ ವಲಯಗಳನ್ನು ಘೋಷಿಸಿ ನಗರ ಪೊಲೀಸ್ ಕಮೀಷನರ್  ಆದೇಶ

ಮಂಗಳೂರು:  ನಗರದಲ್ಲಿ ಅವಶ್ಯವಿರುವ ಕಡೆಗಳಲ್ಲಿ ನೋ-ಪಾರ್ಕಿಂಗ್ ವಲಯ ಎಂಬುದಾಗಿ ಅಧಿಸೂಚನೆ ಹೊರಡಿಸಿ ನಗರ ಪೊಲೀಸ್ ಕಮೀಷನರ್ ವಿಕಾಶ್ ಕುಮಾರ್ ವಿಕಾಶ್ ಅವರು ಅದೇಶ ಹೊರಡಿಸಿದ್ದಾರೆ.

ಹೊಸದಾಗಿ ನೋ-ಪಾರ್ಕಿಂಗ್ ವಲಯ ಎಂದು ಅಧಿಸೂಚನೆ ಹೊರಡಿಸಿರುವ ಸ್ಥಳಗಳ ವಿವರ

  1. ಬಲ್ಮಠ ರಸ್ತೆಯಲ್ಲಿ ಬಲ್ಮಠ ವೃತ್ತದಿಂದ ರಸ್ತೆಯ ಎಡಬದಿಯಲ್ಲಿ ಕ್ರಿಶ್ಚಿಯನ್ ಇನ್ ಸ್ಟಿಟ್ಯೂಟ್ ದ್ವಾರದ ತನಕ
  2. ಬಲ್ಮಠ ರಸ್ತೆಯಲ್ಲಿ ಎಂಜೇಸ್ ಕಾಂಪ್ಲೆಕ್ಸ್ ನಲ್ಲಿ ವೈನ್ ಗೇಟ್ ನಿಂದ ಜ್ಯೂಸ್ ಜಂಕ್ಷನ್ ತಿರುವಿನಲ್ಲಿ ಮತ್ತು ಮುಂದುವರೆದು ಬ್ರಿಡ್ಜ್ ರಸ್ತೆಯ ಮೇಲ್ಸೆತುವೆ ವರೆಗೆ
  3. ಬಲ್ಮಠ ರಸ್ತೆಯಲ್ಲಿ ನಾಯಕ್ಸ್ ಓಪ್ಟಿಕಲ್ಸ್ ನಿಂದ ಡಾ ಅಂಬೇಡ್ಕರ್ ವೃತ್ತದ ತನಕ (ಎಡಬದಿ)
  4. ಬಲ್ಮಠ ರಸ್ತೆಯ ಅಂಬೇಡ್ಕರ್ ವೃತ್ತದಿಂದ ಮಿಲಾಗ್ರೀಸ್ ನ ಲಾರ್ಡ್ ಕೃಷ್ಣ ಬ್ಯಾಂಕ್ ತನಕ ರಸ್ತೆಯವರೆಗೆ (ಬಲಬದಿ)
  5. ಮಿಲಾಗ್ರಿಸ್ ಮ್ಯಾನ್ ಶನ್ ಕಟ್ಟಡದ ಬಲಬದಿ ಅಂಚಿನಿಂದ ಹಂಪನಕಟ್ಟೆ ವೃತ್ತದ ತನಕ ರಸ್ತೆಯವರೆಗೆ (ಎಡಬದಿ)
  6. ಬಲ್ಮಠ ಜ್ಯೂಸ್ ಜಂಕ್ಷನ್ ನಿಂದ ಬಲ್ಮಠ ವೃತ್ತದವರೆಗೆ ರಸ್ತೆಯವರೆಗೆ (ಎಡಬದಿ)
  7. ಫಳ್ನೀರ್ ರಸ್ತೆಯ ಅವೇರಿ ಬಸ್ಸು ನಿಲ್ದಾಣದ ಎರಡೂ ಕಡೆಗೆ 30 ಮೀಟರ್ ಉದ್ದಕ್ಕೆ (ಬಸ್ಸು ನಿಲ್ದಾಣದಲ್ಲಿ ನಿಲುಗಡೆಗೆ ಅನುಮತಿ ಇರುವ ಬಸ್ಸುಗಳ ಹೊರತಾಗಿ ) ಎರಡೂ ಬದಿ
  8. ಬಿಕರ್ನಕಟ್ಟೆ ಬಾಲಯೇಸು ದೇವಾಲಯದ ಮುಖ್ಯದ್ವಾರದಿಂದ ಬಾಲಯೇಸು ದೇವಾಲಯದವರೆಗೆ 100 ಮೀಟರ್ ಸಾರ್ವಜನಿಕ ರಸ್ತೆಯ (ಎಡಬದಿ)
  9. ಮಂಗಳೂರು ಮಹಾನಗರಪಾಲಿಕೆಯ ವಾರ್ಡ್ ನಂಬ್ರ 38 ರಲ್ಲ ಕಲ್ಪನಾ ರಸ್ತೆಯಲ್ಲಿ ಕರಾವಳಿ ವೃತ್ತದ ಕಡೆಯಿಂದ ವಾಸ್ ಲೇನ್ ರಸ್ತೆಯವರೆಗೆ ಮತ್ತು ವಾಸ್ ಲೇನ್ 1ನೇ ಅಡ್ಡರಸ್ತೆಯಿಂದ ಯುನಿಟಿ ಆಸ್ಪತ್ರೆಯವರೆಗೆ, ಅದೇ ರೀತಿ ಕರಾವಳಿ ವೃತ್ತದಿಂದ ಎ.ಆರ್. ಡಿಸೋಜಾ ಲೇನ್ ರಸ್ತೆಯಲ್ಲಿ ಮತ್ತು ಡೋಮಿನೋಸ್ ಪಿಜ್ಜಾ, ಮಂಗಳೂರು ಪರಿಸರದ 100 ಮೀಟರ್ ಅಂತರದಲ್ಲಿ (ಎರಡೂ ಬದಿ)
  10. ಮಂಗಳೂರು ನಗರದ ಕರಾವಳಿ ಜಂಕ್ಷನ್ ಬಳಿಯ ಬಸ್ಸು ಬೇ ಬಳಿಯಿಂದ ಪಂಪ್ ವೆಲ್ ಜಂಕ್ಷನ್ ಕಡೆಗೆ ಹಾದು ಹೋಗುವ ರಸ್ತೆಯ ಎರಡೂ ಬದಿಯಲ್ಲಿ 100 ಮೀಟರ್ ವರಗೆ (ಎರಡೂ ಬದಿ)
  11. ಮಂಗಳೂರು ನಗರದ ಕರಂಗಲ್ಪಾಡಿ ಸಿಜೆ ಕಾಮತ್ ಕ್ರಾಸ್ ರಸ್ತೆಯಿಂದ ತಂದೂರು ಬಾರ್ ಎದರು ಶ್ರೀ ದೇವೆ ನರ್ಸಿಂಗ್ ಹೋಮ್ ಕಡೆಗೆ ಹೋಗುವ ಕ್ರಾಸ್ ರಸ್ತೆವರೆಗೆ (ಎಡಬದಿ)
  12. ಮಂಗಳೂರು ನಗರದ ಕರಂಗ್ಲಪಾಡಿ ಮೇಡಿಕೆರ್ ಬಿಲ್ಡಿಂಗ್ ರಸ್ತೆಯಿಂದ ಕೋರ್ಟು ಕ್ರಾಸ್ ರಸ್ತೆಯವರೆಗೆ (ಬಲಬದಿ)
  13. ಮಂಗಳೂರು ನಗರದ ಕರಂಗ್ಲಾಪಾಡಿ ಕೋರ್ಟ್ ಕ್ರಾಸ್ ರಸ್ತೆಯಿಂದ ಪಿವಿಎಸ್ ಬಸ್ಸು ಸ್ಟಾಫ್ ವರೆಗೆ ರಸ್ತೆಯ ಎರಡೂ ಬದಿಯಲ್ಲಿ (ಎರಡೂ ಬದಿ)
  14. ಮಂಗಳೂರು ನಗರದ ಎಬಿ ಶೆಟ್ಟಿ ವೃತ್ತದ ಬಳಿಯ ಓಲ್ಡ್ ಕೆಂಟ್ ಕ್ರಾಸ್ ರಸ್ತೆಯಿಂದ ಕಾರ್ಪೋರೇಶನ್ ಬ್ಯಾಂಕ್ ಕಡೆಗೆ ಹಾದು ಹೋಗುವ ಸಾರ್ವಜನಿಕ ರಸ್ತೆ (ಎಡ ಬದಿ)
  15. ಮಂಗಳೂರು ನಗರದ ಫಳ್ನೀರು, ಅವೇರಿ ಜಂಕ್ಷನ್ ಬಳಿಯ ಸ್ಟರಕ್ ರೋಡ್ ಕ್ರಾಸ್ ರಸ್ತೆಯಿಂದ ಹಂಪನಕಟ್ಟೆ ಅತ್ತಾವರ ಕ್ರಾಸ್ ರಸ್ತೆಯವರೆಗೆ ರಸ್ತೆಯ ಎಡ ಬದಿ ಹಾದು ಹೋಗುವ ಸಾರ್ವಜನಿಕ ರಸ್ತೆ (ಎಡಬದಿ)
  16. ಮಂಗಳೂರು ನಗರದ ಕರಂಗ್ಲಪಾಡಿ ರಾಧಾ ಮೆಡಿಕಲ್ಸ್ ಎದುರಿನ ಕೋರ್ಟ್ ರಸ್ತೆಯ ಕಡೆಗೆ ಹಾದು ಹೋಗುವ ಸಾರ್ವಜನಿಕ ರಸ್ತೆ (ಎಡಬದಿ)
  17. ಮಂಗಳೂರು ನಗರದ ಅಂಬೇಡ್ಕರ್ ಜಂಕ್ಷನ್ ಬಸ್ಸ್ ಬೇ ಬಳಿಯ ಮ್ಯಾಪಲ್ ಶೋ ರೂಮ್ ನಿಂದ ಮೋಟಾರೋಲಾ ಹೆಲ್ಮೆಟ್ ಶಾಫ್ ಕಡೆಗೆ ಹಾದು ಹೋಗುವ ಸಾರ್ವಜನಿಕ ರಸ್ತೆ (ಎಡಬದಿ)
  18. ಮಂಗಳೂರು ನಗರದ ಹಂಪನಕಟ್ಟೆ ಜಂಕ್ಷನ್ ನಿಂದ ಮುತ್ತಪ್ಪ ಗುಡಿ ಜಂಕ್ಷನ್ ವರೆಗೆ (ಎರಡೂ ಬದಿ)

B. ಸಂಚಾರ ಪಶ್ಚಿಮ ಠಾಣಾ ವ್ಯಾಪ್ತಿಯಲ್ಲಿ

  1. ಭಾರತೀಯ ಸ್ಟೇಟ್ ಬ್ಯಾಂಕ್ ಪೋರ್ಟ್ ರೋಡ್ ರಸ್ತೆ ಮಂಗಳೂರು ಇದರ ಕಟ್ಟಡದ ಮುಖ್ಯ ದ್ವಾರದಲ್ಲಿ ರಸ್ತೆಯ ಬದಿಯಲ್ಲಿ 100 ಅಡಿ ದೂರದ ಮತ್ತು ಎಡಬದಿಯಲ್ಲಿ 30 ಅಡಿ ದೂರದ ವ್ಯಾಪ್ತಿಯಲ್ಲಿ
  2. ಮಂಗಳೂರು ನಗರದ ಮಣ್ಣಗುಡ್ಡೆ ವಾರ್ಡ್ ನಂಬ್ರ 28 ರ ಮುಖ್ಯರಸ್ತೆಯಲ್ಲಿ 2ನೇ ಮತ್ತು 3 ಅಡ್ಡ ರಸ್ತೆಯಲ್ಲಿ(ಎರಡೂ ಬದಿ)
  3. ಮಂಗಳೂರು ನಗರದ ಕೊಟ್ಟಾರ ಚೌಕಿ ಜಂಕ್ಷನ್ ನಿಂದ ಕೋಡಿಕಲ್ ಕ್ರಾಸ್ ವರೆಎ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 66 ರ ಸರ್ವಿಸ್ ರಸ್ತೆಯಲ್ಲಿ (ಎರಡೂ ಬದಿ)
  4. ಹ್ಯಾಮಿಲ್ಟನ್ ಸರ್ಕಲ್ ನಲ್ಲಿರರುವ ಸ್ವಾಗತ್ ಹೋಟೆಲ್ ನಿಂದ ಜಿಲ್ಲಾಧಿಕಾರಿಯವರ ಕಛೇರಿ ಕಂಪೌಂಡ್ ವರೆಗೆ ರಸ್ತೆಯ (ಎಡಬದಿ)
  5. ಕ್ಲಾಕ್ ಟವರ್ ನ ಹೋಟೆಲ್ ಸಾಯಿಕೃಪಾದಿಂದ ಕೆ ಬಿ ಕಟ್ಟೆ ಜಂಕ್ಷನ್ ವರೆಗಿನ ರಸ್ತೆಯ (ಎಡ ಪಾರ್ಶ್ವ)
  6. ಕೆ.ಬಿಕಟ್ಟೆ ಜಂಕ್ಷನ್ ನಿಂದ ಫೆಲಿಕ್ಸ್ ಪೈ ಜಂಕ್ಷನ್ (ಫೆಲಿಕ್ಸ್ ಪೈ ಬಜಾರ್) ವರೆಗೆ ರಸ್ತೆಯ (ಎಡ ಹಾಗೂ ಬಲ ಪಾರ್ಶ್ವ)
  7. ಹಂಪನಕಟ್ಟೆ ಜಂಕ್ಷನ್ ನಿಂದ ಕೆಎಸ್ ಆರ್ ರಸ್ತೆಯಲ್ಲಿರುವ ಪಿ ಎಂ ರಾವ್ ರಸ್ತೆ ಕ್ರಾಸ್ ವರೆಗೆ ರಸ್ತೆಯ (ಎರಡೂ ಪಾರ್ಶ್ವ)
  8. ಕೆ ಎಸ್ ಆರ್ ರಸ್ತೆಯ ಕರ್ನಾಟಕ ಬ್ಯಾಂಕ್ ನಿಂದ ನವಭಾರತ್ ಸರ್ಕಲ್ ವರೆಗೆ ರಸ್ತೆಯ (ಎರಡೂ ಪಾರ್ಶ್ವ)
  9. ಪಿವಿಎಸ್ ವೃತ್ತದಲ್ಲಿರುವ ಸುಧೀಂದ್ರ ಸೂಪರ್ ಮಾರ್ಕೆಟ್ ನಿಂದ ಮಾನಸ ಟವರ್ ವರೆಗೆ ರಸ್ತೆಯ (ಎಡ ಪಾರ್ಶ್ವ)
  10. ಎಂ.ಜಿ ರಸ್ತೆಯ ಬೆಸೆಂಟ್ ಬಿಲ್ಡಿಂಗ್ ನ ಹ್ಯಾಂಗ್ಯೋ ಐಸ್ ಕ್ರೀಂ ಅಂಗಡಿಯಿಂದ ಕೋಡಿಯಾಲ್ ಗುತ್ತು ಎಂಪೈರ್ ಮಾಲ್ ವರೆಗೆ ರಸ್ತೆಯ (ಎರಡೂ ಪಾರ್ಶ್ವ)
  11. ಲಾಲ್ ಬಾಗ್ ಜಂಕ್ಷನ್ ನಲ್ಲಿರುವ ರಾಮಕೃಷ್ಣ ವಿದ್ಯಾರ್ಥಿನಿ ನಿಲಯದ ಎದುರಿನ ಬಸ್ ನಿಲ್ದಾಣದಿಂದ ಕೆ ಎಸ್ ಆರ್ ಟಿಸಿ (ಬಿಗ್ ಬಜಾರ್) ವರೆಗೆಇನ ರಸ್ತೆಯ (ಎಡ ಪಾರ್ಶ್ವ)
  12. ಲಾಲ್ ಬಾಗ್ ಜಂಕ್ಷನ್ ನಲ್ಲಿರುವ ಸಾಯಿ ಬಿನ್ ಕಾಂಪ್ಲೆಕ್ಸ್ ಚಿಕನ್ ಟಿಕ್ಕಾ ಅಂಗಡಿಯ ಎದುರುಗಡೆಯಿಂದ ಎಡ ತಿರುವು ಮುಕ್ತವಾಗಿರುವ ರಸ್ತೆಯಲ್ಲಿ ನೆಹರೂ ಅವೆನ್ಯೂ ಜಂಕ್ಷನ್ ವರೆಗೆ ರಸ್ತೆಯ (ಎಡ ಪಾರ್ಶ್ವ)
  13. 13. ಬಾಲಾಜಿ ಜಂಕ್ಷನ್ ನಿಂದ ಲೋವರ್ ಕಾರ್ ಸ್ಟ್ರೀಟ್ ಜಂಕ್ಷನ್ ನಲ್ಲಿರುವ ಗಿರಿರಾಜ್ ಟವರ್ ವರೆಗೆ ರಸ್ತೆಯ (ಎರಡೂ ಪಾರ್ಶ್ವ)
    14. ಎಸ್ ಪಿ ಸರ್ಕಲ್ ನಿಂದ ಲೇಡಿಗೋಶನ್ ಮುಖ್ಯರಸ್ತೆಗೆ ಸಾಗಿರುವ ಅಡ್ಡ ರಸ್ತೆಯ (ಎರಡೂ ಪಾರ್ಶ್ವ)
    15. ಲೇಡಿಗೋಶನ್ ಜಂಕ್ಷನ್ ನಿಂದ ಸೆಂಟ್ರಲ್ ಮಾರ್ಕೆಟ್ ಬಳಿ ಇರುವ ಕಲ್ಪನಾ ಸ್ವೀಟ್ಸ್ ಅಂಗಡಿಯ ಎದುರು ರಸ್ತೆಯವರೆಗೆ
    16. ಹ್ಯಾಮಿಲ್ಟನ್ ಜಂಕ್ಷನ್ ನಿಂದ ಎಸ್ ಪಿ ಸರ್ಕಲ್ ವರೆಗಿನ ರಸ್ತೆಯ (ಎಡ ಪಾರ್ಶ್ವ)
    17. ಶ್ರೀ ಎಮ್ ಲೋಕಯ್ಯ ಶೆಟ್ಟಿ ರಸ್ತೆಯ ಮಣ್ಣಗುಡ್ಡೆ ಜಂಕ್ಷನ್ ನಿಂದ (ದುರ್ಗಾ ಮಹಲ್ ಜಂಕ್ಷನ್) ಬಲ್ಲಾಳ್ ಬಾಗ್ ಜಂಕ್ಷನ್ ವರೆಗೆ ಹೋಗುವ ರಸ್ತೆಯ ಜಿಲ್ಲಾ ಪಂಚಾಯತ್ ಸರ್ಕಾರಿ ಶಾಲೆಯಿಂದ – ಕೆಂದ್ರಿಯ ಉಗ್ರಾಣದ ಜಂಕ್ಷನ್ ವರೆಗೆ (ವೇರ್ ಹೌಸ್ ಜಂಕ್ಷನ್ ವರೆಗೆ ) ಎಡ ಪಾರ್ಶ್ವ
    ಅಲ್ಟರ್ ನೇಟಿವ್ ಪಾರ್ಕಿಂಗ್ ಸ್ಥಳಗಳು
    1. ಕೂಳೂರು ಫೆರ್ರಿ ರಸ್ತೆಯಲ್ಲಿರುವ ಅಳಕೆ ಜಂಕ್ಷನ್ ನಿಂದ ( ಅಳಕೆ ಸೇತುವೆ ಹೊರತು ಪಡಿಸಿ) ಬಾಲಾಜಿ ಜಂಕ್ಷನ್ ವರೆಗೆ ಎರಡೂ ಬದಿಯಲ್ಲಿ
    2. ಬಾಲಾಜಿ ಜಂಕ್ಷನ್ ನಿಂದ ವೆಂಕಟರಮಣ ದೇವಸ್ಥಾನದ ವರೆಗೆ ಎರಡೂ ಬದಿಯಲ್ಲಿ
    ಸಿ. ಸಂಚಾರ ಉತ್ತರ ಠಾಣಾ ವ್ಯಾಪ್ತಿಯಲ್ಲಿ
    1. ಜೋಕಟ್ಟೆ ಜಂಕ್ಷನ್ ನಿಂದ ಶಬರಿ ಗ್ಯಾರೇಜ್ ವರೆಗಿನ ಡಾಮರು ರಸ್ತೆಯ ಎರಡು ಬದಿಯಲ್ಲಿ
    2. ಡಿಕ್ಸಿ ಕ್ರಾಸ್ ರಸ್ತೆಯಿಂದ ಬೀಚ್ ವರೆಗಿನ ಕಾಂಕ್ರಿಟ್ ರಸ್ತೆಯ ಎರಡು ಬದಿಗಳಲ್ಲಿ
    3. ದೀಪಕ್ ಪೆಟ್ರೋಲ್ ಪಂಪ್ ಮತ್ತು ಪೆಟ್ರೋಲ್ ಬಂಕ್ ನ ಎದುರುಗಡೆ ಎನ್ ಹೆಚ್ 66 ಡಾಮರು ರಸ್ತೆಯ ಎರಡೂ ಬದಿಗಳಲ್ಲಿ
    4. ಬೈಕಂಪಾಡಿ ಪೇಟೆಯ ಎನ್ ಹೆಚ್ 66 ರಲ್ಲಿ ಡಾಮರು ರಸ್ತೆಯ ಎರಡೂ ಬದಿಗಳಲ್ಲಿ
    5. ಸುರತ್ಕಲ್ ಜಂಕ್ಷನ್ ನಿಂದ ರೋ-ರೋ ಕ್ರಾಸ್ ವರೆಗಿನ ಡಾಮರು ರಸ್ತೆಯ ಎರಡು ಬದಿಗಳಲ್ಲಿ
    6. ರೋ-ರೋ ಕ್ರಾಸ್ ನಿಂದ ಬಿ ಎ ಎಸ್ ಎಫ್ ಕೆಮಿಕಲ್ ಇಂಡಸ್ಟ್ರೀಯಲ್ ಘಟಕದವರೆಗಿನ ಡಾಮಾರು ರಸ್ತೆಯ ಎರಡು ಬದಿಗಳಲ್ಲಿ
    7. ಬಿ ಎ ಎಸ್ ಎಫ್ ಕೆಮಿಕಲ್ ಘಟಕದಿಂದ ಎಂ ಆರ್ ಪಿ ಎಲ್ ಘಟಕದವರೆಗಿನ ಡಾಮಾರು ರಸ್ತೆಯ ಎರಡು ಬದಿಗಳಲ್ಲಿ
    8. ಮೂಲ್ಕಿ ಜಂಕ್ಷನ್ ನಿಂದ ಕಡವಿ ಬಾಗಿಲು ರಸ್ತೆಯನ್ನು ಸಂಧಿಸುವರೆಗೆ ಬಪ್ಪ ಬ್ಯಾರಿ ರಸ್ತೆಯ ಎರಡು ಬದಿಗಳಲ್ಲಿ
    9. ಪೆರ್ಲಗುರಿ ಕ್ರಾಸ್ ನಿಂದ ವಿಮಾನ ನಿಲ್ದಾಣದ ಕಡೆಗೆ ಕರ್ನಾಟಕ ಬ್ಯಾಂಕ್ ವರೆಗೆ ಎರಡೂ ಬದಿಯಲ್ಲಿ
    10. ಪದವಿನಂಗಡಿ ಯೂತ್ ಕ್ಲಬ್ ನಿಂದ ಕೆಪಿಟಿ ಕಡೆಗೆ ಮುಗರೋಡಿ ಕ್ರಾಸ್ ವರೆಗೆ ಎರಡು ಬದಿಯಲ್ಲಿ
    11. ಸುರತ್ಕಲ್ ಕೋರ್ದಬ್ಬು ದೇವಸ್ಥಾನ ದ್ವಾರದಿಂದ ಶಾರದಾ ಲಾಡ್ಜ್ ಕ್ರಾಸ್ ವರೆಗೆ (ಎರಡೂ ಬದಿ)
    12. ಸುರತ್ಕಲ್ ಮಾರ್ಕೆಟ್ ಕ್ರಾಸ್ ನಿಂದ ಸುರತ್ಕಲ್ ಚರ್ಚ್ ದ್ವಾರದ ವರೆಗೆ (ಎಡಬದಿ)
    13. ಸುರತ್ಕಲ್ ಜಂಕ್ಷನ್ ಇಡ್ಯಾ ಕ್ರಾಸ್ ನಿಂದ ಸುರತ್ಕಲ್ ಜಂಕ್ಷನ್ ಉಡುಪಿ ಸರ್ವಿಸ್ ಬಸ್ ನಿಲ್ದಾಣದವರೆಗೆ (ಎಡ ಬದಿ)
    14. ಸುರತ್ಕಲ್ ಸೂರಜ್ ಹೋಟೆಲ್ ಕ್ರಾಸ್ ನಿಂದ ಸುರತ್ಕಲ್ ಜಂಕ್ಷನ್ ವರೆಗಿನ ಸರ್ವಿಸ್ ರಸ್ತೆ (ಎರಡೂ ಬದಿ)
    15. ಸುರತ್ಕಲ್ ಜಂಕ್ಷನ್ ನಿಂದ ಗೋವಿಂದದಾಸ ಕಾಲೇಜು ವರೆಗಿನ ಸರ್ವಿಸ್ ರಸ್ತೆ (ಎರಡೂ ಬದಿ)
    16. ಕೂಳೂರು ಜಂಕ್ಷನ್ ಹತ್ತಿರದ ದೀಪಕ್ ಜನರಲ್ ಸ್ಟೋರ್ಸ್ ನಿಂದ ಕೂಳೂರು ಉಡುಪಿ ರಸ್ತೆ ಬಸ್ ಬೇ ವರೆಗೆ (ಎಡ ಬದಿ)
    17. ಕೂಳೂರು ಅಯ್ಯಪ್ಪ ಗುಡಿಯ ಸರ್ವಿಸ್ ರಸ್ತೆಯಿಂದ ಕೂಳೂರು ಜಂಕ್ಷನ್ ವರೆಗಿನ ಸರ್ವಿಸ್ ರಸ್ತೆ (ಎರಡೂ ಬದಿ)
    18. ಕಾವೂರು ಕೋರ್ದಬ್ದು ದೇವಸ್ಥಾನದ ಎದುರು ರಸ್ತೆಯಿಂದ ಕಾವೂರು ಕೆ ಇ ಬಿ ಗೇಟ್ ವರೆಗೆ ಎರಡೂ ಬದಿ
    ಸಂಚಾರ ದಕ್ಷಿಣ ಠಾಣಾ ವ್ಯಾಪ್ತಿಯಲ್ಲಿ
    1. ಪಂಪ್ ವೇಲ್ ಜಂಕ್ಷನ್ ನಿಂದ ಮೀರಾಪ್ರಿಂಟರ್ಸ್ ಅಂಗಡಿಯವರೆಗೆ (ಎಡಬದಿ)
    2. ಪಂಪ್ ವೆಲ್ ಜಂಕ್ಷನ್ ನ ಮಥುರಾ ಹೋಟೆಲ್ ನಿಂದ ಎಂಬೇಜ್ ಪ್ಲಾಜಾವರೆಗೆ (ಬಲಬದಿ)
    3. ಕಲ್ಲಾಪು ಯುನಿಟಿ ಹಾಲ್ ನಿಂದ ಕಲ್ಲಾಪು ಜಂಕ್ಷನ್ ವರೆಗೆ (ಬಲಬದಿ)
    4. ದೇರಳಕಟ್ಟೆ – ಯೆನಪೋಯ ಆಸ್ಪತ್ರೆಯ ರಸ್ತೆಯಲ್ಲಿ (ಎಡಬದಿ)
    5. ದೇರಳಕಟ್ಟೆ – ಕೆ ಎಸ್ ಹೆಗ್ಡೆ ಆಸ್ಪತ್ರೆ ರಸ್ತೆಯ (ಎರಡೂ ಬದಿ)
    6. ಮಂಗಳೂರು ನಗರದ ಪದವಿನಂಗಡಿ ಜಂಕ್ಷನ್ ರಸ್ತೆಯಲ್ಲಿ (ಎಡಬದಿ)

     


Spread the love