ಮಂಗಳೂರು: ಪೋಕ್ಸೊ ಪ್ರಕರಣದ ಆರೋಪಿಗೆ ಐದು ವರ್ಷ ಕಾರಾಗೃಹ ಶಿಕ್ಷೆ

Spread the love

ಮಂಗಳೂರು: ಪೋಕ್ಸೊ ಪ್ರಕರಣದ ಆರೋಪಿಗೆ ಐದು ವರ್ಷ ಕಾರಾಗೃಹ ಶಿಕ್ಷೆ

ಮಂಗಳೂರು: ಪೋಕ್ಸೊ ಪ್ರಕರಣಕ್ಕೆ ಸಂಬಂಧಿಸಿದಂತೆ ತೋಟ ಬೆಂಗ್ರೆ ನಿವಾಸಿ ರಂಶೀದ್ ಎಂಬಾತನ ಆರೋಪವು ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಎಫ್ಟಿಎಸ್ಸಿ -1 (ಪೊಕ್ಸೊ)ದಲ್ಲಿ ಸಾಬೀತಾಗಿದೆ. ಆರೋಪಿಗೆ ನ್ಯಾಯಾಲಯವು ಐದು ವರ್ಷಗಳ ಕಾರಾಗೃಹ ಶಿಕ್ಷೆ ಮತ್ತು 15 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.

ದಿನಾಂಕ:17-07-2024 ರಂದು ಪಣಂಬೂರು ಪೊಲೀಸ್ ಠಾಣೆಯಲ್ಲಿ ದಾಖಲಾದ ಅಪರಾಧ ಕ್ರಮಾಂಕ:79/2024 ಕಲಂ: 13,14 ಪೋಕ್ಸ್ ಮತ್ತು ಕಲಂ 77 ಬಿ ಎನ್ ಎಸ್ ಕಾಯ್ದೆ ಪ್ರಕರಣವು ಮಾನ್ಯ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ (ಎಫ್.ಟಿ.ಎಸ್.ಸಿ-1 ಪೊಕ್ಸ್) ದ.ಕ ಮಂಗಳೂರು ನ್ಯಾಯಾಲಯದಲ್ಲಿ ವಿಚಾರಣೆಯಾಗಿ ಪ್ರಕರಣದ ಆರೋಪಿ ಮಹಮ್ಮದ್ ರಂಶಿದ್ ಅಲಿಯಾಸ್ ರಂಶಿ, ಸ್ಯಾಂಡ್ ಫಿಟ್ ಬೆಂಗ್ರೆ, ಮಂಗಳೂರು ತಾಲೂಕು ಎಂಬಾತನಿಗೆ ಮಾನ್ಯ ನ್ಯಾಯಾಲಯವು ಕಲಂ:14 ಪೊಕ್ಕೋ ಕಾಯ್ದೆ ಅಡಿಯಲ್ಲಿ 5 ವರ್ಷ ಸಾದಾ ಕಾರಗೃಹ ಶಿಕ್ಷೆ ಮತ್ತು 10,000 ದಂಡ, ತಪ್ಪಿದರೆ ಹೆಚ್ಚುವರಿ 1 ವರ್ಷ ಸಾದಾ ಕಾರಗೃಹ ಶಿಕ್ಷೆ ಮತ್ತು ಕಲಂ: 329(4) ಬಿ ಎನ್ ಎಸ್ ಕಾಯ್ದೆಯಂತೆ 1 ವರ್ಷ ಸಾದಾ ಕಾರಗೃಹ ಶಿಕ್ಷೆ ಮತ್ತು 5,000 ರೂಪಾಯಿ ದಂಡ, ತಪ್ಪಿದರೆ 02 ತಿಂಗಳ ಹೆಚ್ಚುವರಿ ಸಾದಾ ಕಾರಗೃಹ ಶಿಕ್ಷೆ, ಕಲಂ:329(3) ಬಿ ಎನ್ ಎಸ್ ಕಾಯ್ದೆ ಯಂತೆ 3 ತಿಂಗಳ ಸಾದಾ ಕಾರಗೃಹ ಶಿಕ್ಷೆ ವಿಧಿಸಿ ಮಾನ್ಯ ನ್ಯಾಯಾಲಯವು ತೀರ್ಪನ್ನು ಪ್ರಕಟಿರುವುದಾಗಿದೆ. ಈ ಪ್ರಕರಣದಲ್ಲಿ ಆರೋಪಿತನು ಜಾಮೀನು ಸಿಗದೆ ಸುಮಾರು 05 ತಿಂಗಳಿನಿಂದ ವಿಚಾರಣಾ ಬಂದಿಯಾಗಿದ್ದ ಸಮಯದಲ್ಲಿ ಪ್ರಕರಣದ ವಿಚಾರಣೆಯು  ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಆರೋಪಿತನ ಅಪರಾಧ ಸಾಭಿತಾಗಿ ಶಿಕ್ಷೆಯಾಗಿರುವುದಾಗಿದೆ.

ಪ್ರಕರಣದ ತನಿಖೆಯು ಮಂಗಳೂರು ನಗರದ ಪೊಲೀಸ್ ಆಯುಕ್ತರಾದ ಅನುಪಮ್ ಅಗರವಾಲ್ ಐ.ಪಿ.ಎನ್. ರವರ ಮಾರ್ಗದರ್ಶನದಂತೆ, ಸಿದ್ದಾರ್ಥ ಗೋಯಲ್, ಐ.ಪಿ.ಎಸ್. ಡಿ.ಸಿ.ಪಿ (ಕಾನೂನು ಮತ್ತು ಸುವ್ಯವಸ್ಥೆ), ಈ ಹಿಂದಿನ ಅಪರಾಧ ಮತ್ತು ಸಂಚಾರ ವಿಭಾಗದ ಡಿ.ಸಿ.ಪಿ.ಯಾಗಿದ್ದ ಬಿ.ಪಿ ದಿನೇಶ್ ಕುಮಾರ್ ಮತ್ತು ಉತ್ತರ ಉಪ ವಿಭಾಗದ ಈ ಹಿಂದಿನ ಸಹಾಯಕ ಪೊಲೀಸ್ ಆಯುಕ್ತರಾಗಿದ್ದ ಮನೋಜ್ ಕುಮಾರ್ ನಾಯ್ ರವರ ಮಾರ್ಗದರ್ಶನದಲ್ಲಿ ಪಣಂಬೂರು ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಸಲೀಂ ಅಬ್ಬಾಸ್, ರವರ ತನಿಖಾ ನಿರ್ದೇಶನದಲ್ಲಿ ಪಿ ಎಸ್ ಐ ರಾಘವೇಂದ್ರ ನಾಯ್ ಪ್ರಸ್ತುತ ಸುರತ್ಕಲ್ ಠಾಣೆ ರವರು ಪ್ರಾರಂಭಿಕ ತನಿಖೆ ನಡೆಸಿರುತ್ತಾರೆ ಮತ್ತು ಶ್ರೀಕಲಾ ಕೆ.ಟಿ ರವರುಗಳು ತನಿಖೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿರುತ್ತಾರೆ. ಪ್ರಕರಣದಲ್ಲಿ ತನಿಖಾ ಸಹಾಯಕರಾಗಿ ಪ್ರೇಮಾನಂದ ಹೆಚ್ ಸಿ 436 ರವರು ಸಹಕರಿಸಿರುತ್ತಾರೆ. ಸರಕಾರದ ಪರವಾಗಿ ವಿಶೇಷ ಸರಕಾರಿ ಅಭಿಯೋಜಕರಾದ ಶ್ರೀಮತಿ ಸಹನಾದೇವಿ ರವರು ವಾದ ಮಂಡಿಸಿರುತ್ತಾರೆ.


Spread the love
Subscribe
Notify of

0 Comments
Inline Feedbacks
View all comments