ಮಂಗಳೂರು: ಫುಟ್​ಬಾಲ್ ಟೂರ್ನ್​ಮೆಂಟ್ ವೇಳೆ ಪ್ರೇಕ್ಷಕರ ಗ್ಯಾಲರಿ ಕುಸಿತ, ವಿಡಿಯೋ ವೈರಲ್

Spread the love

ಮಂಗಳೂರು: ಫುಟ್​ಬಾಲ್ ಟೂರ್ನ್​ಮೆಂಟ್ ವೇಳೆ ಪ್ರೇಕ್ಷಕರ ಗ್ಯಾಲರಿ ಕುಸಿತ, ವಿಡಿಯೋ ವೈರಲ್

ಮಂಗಳೂರು: ಫುಟ್ ಬಾಲ್ ಟೂರ್ನ್​ಮೆಂಟ್ ನಡೆಯುತ್ತಿದ್ದಾಗ ಪ್ರೇಕ್ಷಕರ ಗ್ಯಾಲರಿ ಕುಸಿದ ಘಟನೆ ಕೆಲವು ದಿನಗಳ ಹಿಂದೆ ಮಂಗಳೂರಿನ‌ ಎಮ್ಮೆಕೆರೆ ಬಳಿ ನಡೆದಿದೆ. ಫೆಬ್ರವರಿ 8 ರಂದು ರಾತ್ರಿ ನಡೆದ ಘಟನೆಯ ದೃಶ್ಯ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ.

ಬಿಎಸ್​ಎನ್​ಎಲ್ ವತಿಯಿಂದ ಆಯೋಜಿಸಿದ್ದ ಫುಟ್ ಬಾಲ್ ಟೂರ್ನ್​ಮೆಂಟ್ ವೇಳೆ ಘಟನೆ ಸಂಭವಿಸಿದೆ. ಅದೃಷ್ಟವಶಾತ್, ಪ್ರೇಕ್ಷಕರು ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ. ಬೊಳಾರ್ ಸೂಪರ್ ಲೀಗ್​​ನಿಂದ ಫುಟ್ ಬಾಲ್ ಟೂರ್ನ್​ಮೆಂಟ್ ಆಯೋಜಿಸಲಾಗಿತ್ತು. ಗ್ಯಾಲರಿ ಬಿದ್ದ ಕೂಡಲೆ ಪ್ರೇಕ್ಷಕರು ಚಲ್ಲಾಪಿಲ್ಲಿಯಾದರು. ಸೀದಾ ಆಟದ ಮೈದಾನಕ್ಕೆ ನುಗ್ಗಿದರು. ನಂತರ ಅದನ್ನು ಸರಿಪಡಿಸಲು ಆಯೋಜಕರು ಒದ್ದಾಡಿದರು.


Spread the love
Subscribe
Notify of

0 Comments
Inline Feedbacks
View all comments