ಮಂಗಳೂರು: ಫ್ಲಾಟ್, ಮಾಲ್‍ ಗಳಲ್ಲಿ ಹಸಿ ತ್ಯಾಜ್ಯ ಸಂಸ್ಕರಿಸಲು ಮಹಾನಗರಪಾಲಿಕೆ ಸೂಚನೆ 

Spread the love

ಮಂಗಳೂರು: ಫ್ಲಾಟ್, ಮಾಲ್‍ ಗಳಲ್ಲಿ ಹಸಿ ತ್ಯಾಜ್ಯ ಸಂಸ್ಕರಿಸಲು ಮಹಾನಗರಪಾಲಿಕೆ ಸೂಚನೆ 

ಮಂಗಳೂರು:  ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ನೆಲೆಸಿರುವ 30 ಕ್ಕಿಂತ ಹೆಚ್ಚಿನ ಫ್ಲಾಟ್‍ಗಳನ್ನು ಹೊಂದಿರುವ ಅಪಾರ್ಟ್‍ಮೆಂಟ್‍ಗಳು, 5000 ಚ.ಅಡಿಗೂ ಅಧಿಕ ವಿಸ್ತೀರ್ಣದ ಸಂಕೀರ್ಣಗಳು, ಉದ್ದಿಮೆ ಮತ್ತು ವ್ಯಾಪಾರಸ್ಥರು, ಮಾಲ್‍ಗಳು, ವಾಣಿಜ್ಯ ಸಂಸ್ಥೆಗಳು, ಪೂಜಾ ಸ್ಥಳಗಳು, ಸಾರ್ವಜನಿಕ ವಲಯದ ಉದ್ದಿಮೆಗಳು, ಖಾಸಗಿ ಕಂಪನಿಗಳು , ಹಾಗೂ ಇನ್ನಿತರ ಇಲಾಖೆಗಳು ಪ್ರತಿ ನಿತ್ಯ ತಮ್ಮ ಉದ್ದಿಮೆಯಿಂದ ಸರಾಸರಿ 100 ಕೆ.ಜಿ ಗಿಂತ ಹೆಚ್ಚು ತ್ಯಾಜ್ಯ ಉತ್ಪಾದಿಸುವ ಬೃಹತ್ ತ್ಯಾಜ್ಯ ಉತ್ಪಾದಕರು ತಮ್ಮಲ್ಲಿ ಉತ್ಪಾದನೆಯಾಗುವ ಘನ ತ್ಯಾಜ್ಯವನ್ನು 3 ವಿಧವಾಗಿ (ಹಸಿತ್ಯಾಜ್ಯ, ಒಣತ್ಯಾಜ್ಯ, ಅಪಾಯಕಾರಿ ತ್ಯಾಜ್ಯ) ಗಳಾಗಿ ವಿಂಗಡಿಸಿ, ಹಸಿ ತ್ಯಾಜ್ಯವನ್ನು ತಮ್ಮ ಆವರಣದಲ್ಲಿಯೇ ಸಂಸ್ಕರಿಸಿ (On-site Composting method) ಗೊಬ್ಬರ ಉತ್ಪತ್ತಿ ಮಾಡುವ ಕುರಿತು ಅಗತ್ಯ ಕ್ರಮವನ್ನು 2025 ಜನವರಿ 15ರ ವರೆಗೆ ಸಮಯಾವಕಾಶವನ್ನು ನಿಗದಿಪಡಿಸಲಾಗಿದೆ.

ಜನವರಿ-2025ರ ಅಂತ್ಯದಲ್ಲಿ ಮ.ನ.ಪಾ ವ್ಯಾಪ್ತಿಯ ಬೃಹತ್ ತ್ಯಾಜ್ಯ ಉತ್ಪಾದಕರು ಹಸಿ ತ್ಯಾಜ್ಯವನ್ನು ತಮ್ಮ ಆವರಣದಲ್ಲಿಯೇ ಸಂಸ್ಕರಿಸಿ ವಿಲೇವಾರಿ ಮಾಡಲು ವಿಫಲವಾದಲ್ಲಿ ಘನ ತ್ಯಾಜ್ಯ ನಿರ್ವಹಣೆ ನಿಯಮಗಳು 2016 ಮತ್ತು ಮ.ನ.ಪಾ ಘನ ತ್ಯಾಜ್ಯ ನಿರ್ವಹಣೆ ಬೈಲಾ-2019 ರ ಪ್ರಕಾರ ರೂ.15,000 ದಂಡ ವಿಧಿಸಲಾಗುತ್ತದೆ.

ಸಾರ್ವಜನಿಕರು ಹೆಚ್ಚಿನ ಮಾಹಿತಿಯನ್ನು ಪಾಲಿಕೆಯ ವೆಬ್‍ಸೈಟ್ : mangalurucity.mrc.gov.in ನಲ್ಲಿ ಪಡೆಯಬಹುದು.

ಹೆಚ್ಚಿನ ಮಾಹಿತಿಗೆ mcchealth2018@gmail.com ಗೆ ಇ-ಮೇಲ್ ಸಂದೇಶವನ್ನು ಕಳುಹಿಸುವಂತೆ ಮಂಗಳೂರು ಮಹಾನಗರಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love
Subscribe
Notify of

0 Comments
Inline Feedbacks
View all comments