ಮಂಗಳೂರು : ಬಿಐಟಿಯಲ್ಲಿ ಮನಮೋಹಕ `ಬಟರ್ ಫ್ಲೈ ‘ ಕೆಫೆಟೇರಿಯ ಶುಭಾರಂಭ

Spread the love

ಮಂಗಳೂರು: ಬಿಐಟಿ (ಬ್ಯಾರೀಸ್ ಇನ್ಸ್‍ಟಿಟ್ಯೂಟ್ ಆಫ್ ಟೆಕ್ನಾಲಜಿ) ಸ್ಥಾಪನೆಯಾದ ಬಳಿಕ ಬೊಳಿಯಾರು ಗ್ರಾಮದ ಬಗ್ಗೆ ಹೆಚ್ಚು ಜನರು ತಿಳಿಯುವಂತಾಯಿತು.ಗ್ರಾಮದ  ಜನರಿಗೆ ಉದ್ಯೋಗವಕಾಶ ,ಶೈಕ್ಷಣಿಕ ಸೌಲಭ್ಯವೂ ದೊರೆಯುವಂತಾಯಿತು.ಸಣ್ಣ ಸಂಗತಿಗಳ ಬಗ್ಗೆಯೂ ಹೆಚ್ಚು ಗಮನಹರಿಸುತ್ತಾ ಅಚ್ಚುಕಟ್ಟಾಗಿ  ಒಂದು ಸಂಸ್ಥೆಯನ್ನು ನಡೆಸುವುದರಲ್ಲಿ ಬಿಐಟಿ ಹಾಗು ಅದರ ಅಧ್ಯಕ್ಷ ಸೈಯದ್ ಬ್ಯಾರಿ ಅವರು ಮಾದರಿಯಾಗಿದ್ದಾರೆ ಎಂದು ಬೊಳಿಯಾರು ಗ್ರಾಮ ಪಂಚಾಯತ್ ಅಧ್ಯಕ್ಷ ಸತೀಶ್ ಆಚಾರ್ಯ ಶ್ಲಾಘಿಸಿದರು.

ಅವರು ಇಂದು ಇನೋಳಿಯ ಬಿಐಟಿ ಕ್ಯಾಂಪಸ್ ಆವರಣದಲ್ಲಿ ನೂತನವಾಗಿ ನಿರ್ಮಿಸಲಾದ ವಿಶಿಷ್ಟ ವಿನ್ಯಾಸದ `ಬಟರ್ ಪ್ಲೈ’ಉಪಹಾರ ಗೃಹವನ್ನು ಉದ್ಘಾಟಿಸಿ  ಮಾತನಾಡಿದರು.

ಗ್ರಾಮದ ಅಭಿವೃದ್ಧಿಗೆ ಎಲ್ಲರ ಸಹಕಾರ ಅಗತ್ಯ ಈ ನಿಟ್ಟಿನಲ್ಲಿ ಬಿಐಟಿ ಸಂಸ್ಥೆ  ಉತ್ತಮ ಹಾದಿಯಲ್ಲಿ ಸಾಗುತ್ತಿದೆ ಎಂದು ಪಜೀರು ಗ್ರಾಮ ಪಂಚಾಯತ್ ಅಧ್ಯಕ್ಷ ಸೀತಾರಾಮ ಶೆಟ್ಟಿ ಶುಭ ಹಾರೈಸಿದರು. ಹರೇಕಳ ಗ್ರಾಮ ಪಂಚಾಯತ್ ಅಧ್ಯಕ್ಷೆ ಅನಿತಾ ಡಿ ಸೋಜ ಶುಭ ಹಾರೈಸಿದರು.

ಉತ್ತಮ ನಾಯಕತ್ವದಿಂದ ಯಾವೂದೇ ಪರಿಸರದಲ್ಲಿ ಬದಲಾವಣೆ ಸಾಧ್ಯ ಎನ್ನುವುದಕ್ಕೆ ಬಿಐಟಿ ಉದಾಹರಣೆ. ಬಿಐಟಿ ಸಂಸ್ಥೆ ನಮ್ಮ ಪರಿಸರಕ್ಕೆ ಹೆಮ್ಮೆಯ ಕೊಡುಗೆ . ಈ ಸಂಸ್ಥೆ ಮುಂದಿನ ದಿನಗಳಲ್ಲಿ ಉನ್ನತ ವಿಶ್ವ ವಿದ್ಯಾನಿಲಯವಾಗಿ ಬೆಳೆಯಲಿ ಎಂದು ಪಾವೂರು ಗ್ರಾಮ ಪಂಚಾಯತ್ ಅಧ್ಯಕ್ಷ ಫಿರೋರhÉï ಮುಹಮ್ಮದ್ ಮಲ್ಹಾರ್ ಶುಭ ಹಾರೈಸಿದರು.

“ನಿಸರ್ಗದೊಂದಿಗಿನ ನಿಕಟ ಸಂಬಂಧ ನಮಗೆ ಎದುರಾಗುವ ಹಲವು ಸವಾಲುಗಳನ್ನು ನಿಭಾಯಿಸಲು ಸಹಕಾರಿಯಾಗಿದೆ.ಪಕೃತಿಯೊಂದಿಗಿನ ನನ್ನ ಒಡನಾಟ ನನ್ನಲ್ಲಿ ಹೊಸ ಚೇತನವನ್ನುಂಟು ಮಾಡುತ್ತದೆ.ಅದಕ್ಕಾಗಿ ಹಲವಾರು ಬಾರಿ ನಾನು ಪಕೃತಿಯೊಂದಿಗೆ ಸಂವಾದ ನಡೆಸುತ್ತೇನೆ.ಚಿಟ್ಟೆಗಳು ಈ ಪಕೃತಿಯ ಸುಂದರ ಜೀವರಾಶಿ.ಬಣ್ಣ ಬಣ್ಣದ ಚಿಟ್ಟೆಗಳು ನನಗೆ ನನ್ನ ಬಾಲ್ಯದ ದಿನಗಳನ್ನು ನೆನಪಿಸುತ್ತವೆ.ಈ ಹಿನ್ನೆಲೆಯಲ್ಲಿ ಬಿಐಟಿ ಆವರಣದಲ್ಲಿ ಚಿಟ್ಟೆಯ ವಿನ್ಯಾಸದಲ್ಲಿ ಸುಂದರ ಹಾಗೂ ಮನಸ್ಸಿಗೆ ಮುದ ನೀಡುವ ಉಪಹಾರ ಗೃಹವನ್ನು ನಿರ್ಮಿಸಲಾಗಿದೆ ”ಎಂದು ಸೈಯ್ಯದ್ ಮುಹಮ್ಮದ್ ಬ್ಯಾರಿ ಹೇಳಿದರು.

ಬಿಐಟಿ ಪ್ರಾಂಶುಪಾಲ ಪೆÇ್ರ.ಆರ್.ಪಿ.ರೆಡ್ಡಿ ಬಿಐಟಿ ಸಂಸ್ಥೆಯ ಸಾಧನೆಯ ಬಗ್ಗೆ ತಿಳಿಸಿದರು.ಬೊಳಿಯಾರ್ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ  ಜಬ್ಬಾರ್  ಮಾತನಾಡಿದರು.ಪೆÇ್ರ.ಅಬ್ದುಲ್ ರಹಿಮಾನ್ ಸ್ವಾಗತಿಸಿ ,ನಿರೂಪಿಸಿದರು.


Spread the love