ಮಂಗಳೂರು: ಬಿಜೆಪಿ ಮುಖಂಡರ ಮನೆಗೆ ನುಗ್ಗಿ ಯುವಕರ ದಾಂಧಲೆ – ಇಬ್ಬರ ಬಂಧನ

Spread the love

ಮಂಗಳೂರು: ಬಿಜೆಪಿ ಮುಖಂಡರ ಮನೆಗೆ ನುಗ್ಗಿ ಯುವಕರ ದಾಂಧಲೆ – ಇಬ್ಬರ ಬಂಧನ

ಮಂಗಳೂರು: ನಗರದ ಪ್ರತಿಷ್ಠಿತ ಬಿಲ್ಡರ್ ಹಾಗೂ ಬಿಜೆಪಿ ಮುಖಂಡರೊಬ್ಬರ ಮನೆಗೆ ಯುವಕರು ನುಗ್ಗಿ ದಾಂಧಲೆ ನಡೆಸಿದ ಘಟನೆ ಗುರುವಾರ ರಾತ್ರಿ ನಡೆದಿದೆ.

ಜಿತೇಂದ್ರ ಕೊಟ್ಟಾರಿ

ಬಿಲ್ಡರ್ ಹಾಗೂ ಬಿಜೆಪಿ ಮುಖಂಡ ಜಿತೇಂದ್ರ ಕೊಟ್ಟಾರಿ ಮನೆಗೆ ಇಬ್ಬರು ಯುವಕರು ನುಗ್ಗಿ ದಾಂಧಲೆ ನಡೆಸಿದ್ದು ಅವರನ್ನು ಬರ್ಕೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಅನುಶ್ ಶೆಟ್ಟಿ ಹಾಗೂ ಅಂಕಿತ್ ಶೆಟ್ಟಿ ಎಂದು ಗುರುತಿಸಲಾಗಿದೆ.

ಬೆಂಗಳೂರಿನಿಂದ ಆಗಮಿಸಿದ್ದ ಮಗಳನ್ನು ಕರೆ ತರಲು ಜಿತೇಂದ್ರ ಕೊಟ್ಟಾರಿ ಏರ್ಪೋರ್ಟ್ ಗೆ ಆಗಮಿಸಿದ್ದರು. ಬಳಿಕ ತನ್ನ ಆಡಿ ಕಾರಿನಲ್ಲಿ ಮಗಳ ಜೊತೆ ಮಂಗಳೂರಿನ ಮನೆಯತ್ತ ತೆರಳುತ್ತಿದ್ದರು ಈ ವೇಳೆ ಅನುಷ್ ಶೆಟ್ಟಿ ಹಾಗೂ ಅಂಕಿತ್ ಇದ್ದ ಕಾರನ್ನು ಜಿತೇಂದ್ರ ಕೊಟ್ಟಾರಿ ಓವರ್ ಟೇಕ್ ಮಾಡಿದ್ದರು ಎನ್ನಲಾಗಿದೆ. ಇದೇ ಕೋಪದಲ್ಲಿ ಕಾರನ್ನು ಹಿಂಬಾಲಿಕೊಂಡು ಜಿತೇಂದ್ರ ಕೊಟ್ಟಾರಿ ಮನೆಯ ಬಳಿಗೆ ಬಂದಿದ್ದ ಯುವಕರು ಕುಡಿತದ ಮತ್ತಿನಲ್ಲಿ ಜಿತೇಂದ್ರ ಕೊಟ್ಟಾರಿ ಮನೆಗೆ ನುಗ್ಗಿ ಗಲಾಟೆ ನಡೆಸಿದ್ದಾರೆ.

ಜಿತೇಂದ್ರ ಕೊಟ್ಟಾರಿ ಮೇಲೆ ಹಲ್ಲೆ ನಡೆಸಿ ತಡೆಯಲು ಬಂದ ಪತ್ನಿ ಮೇಲೂ ಹಲ್ಲೆ ಯತ್ನ ಮಾಡಿದ್ದು ಘಟನೆ ಸಂಬಂಧಿಸಿ ಬರ್ಕೆ ಠಾಣೆಗೆ ಜಿತೇಂದ್ರ ಕೊಟ್ಟಾರಿ ದೂರು ನೀಡಿದ್ದು ದೂರು ಪಡೆದು ಎಫ್ಐಆರ್ ದಾಖಲಿಸಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.


Spread the love
Subscribe
Notify of

0 Comments
Inline Feedbacks
View all comments