ಮಂಗಳೂರು ಬಿಷಪ್ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದ ಶಾಸಕ ವೇದವ್ಯಾಸ ಕಾಮತ್

Spread the love

ಮಂಗಳೂರು ಬಿಷಪ್ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದ ಶಾಸಕ ವೇದವ್ಯಾಸ ಕಾಮತ್

ಮಂಗಳೂರು: ನೂತನವಾಗಿ ಆಯ್ಕೆಯಾದ ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಅವರು ಮಂಗಳವಾರ ಮಂಗಳೂರು ಕ್ರೈಸ್ತ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿ ವಂ ಅಲೋಶೀಯಸ್ ಪಾವ್ಲ್ ಡಿಸೋಜಾ ಅವರನ್ನು ಭೇಟಿ ಮಾಡಿ ಆಶೀರ್ವಾದವನ್ನು ಪಡೆದುಕೊಂಡರು.

ವಿಧಾನಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಜೊತೆ ಬಿಷಪ್ ಹೌಸಿನ ಚಾಪೆಲಿಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಧರ್ಮಾಧ್ಯಕ್ಷರನ್ನು ಭೇಟಿಯಾದ ವೇದವ್ಯಾಸ ಕಾಮತ್ ಅವರು ಆಶೀರ್ವಾದವನ್ನು ಪಡೆದುಕೊಂಡರು.

ಈ ವೇಳೆ ಧರ್ಮಾಧ್ಯಕ್ಷರು ನೂತನ ಶಾಸಕರನ್ನು ಧರ್ಮಪ್ರಾಂತ್ಯದ ಪರವಾಗಿ ಗೌರವಿಸಿದರು ಮತ್ತು ತಮ್ಮ ಶಾಸಕತ್ವದ ಅವಧಿಯನ್ನು ಯಶಸ್ವಿಯಾಗಿ ನಿರ್ವಹಿಸುವಂತೆ ಆಶೀರ್ವದಿಸಿದರು.


Spread the love