ಮಂಗಳೂರು ಮಹಾನಗರ ಪಾಲಿಕೆಯಲ್ಲಿ ವಿಧಾನ ಪರಿಷತ್ ಶಾಸಕ ಐವನ್ ಡಿಸೋಜರ ಶಾಸಕರ ಕಚೇರಿ ಪ್ರಾರಂಭ

Spread the love

ಮಂಗಳೂರು ಮಹಾನಗರ ಪಾಲಿಕೆಯಲ್ಲಿ ವಿಧಾನ ಪರಿಷತ್ ಶಾಸಕ ಐವನ್ ಡಿಸೋಜರ ಶಾಸಕರ ಕಚೇರಿ ಪ್ರಾರಂಭ

ಮಂಗಳೂರು: ಮಹಾನಗರ ಪಾಲಿಕೆಯ ನೆಲಮಹಡಿಯಲ್ಲಿ ವಿಧಾನ ಪರಿಷತ್ತಿನ ಶಾಸಕರಾದ ಐವನ್ ಡಿ ಸೋಜಾ ಇವರ ಶಾಸಕರ ಕಛೇರಿಯ ಉದ್ಘಾಟನೆಯನ್ನು ಕಟೀಲ್ ದುರ್ಗಾಪರಮೇಶ್ವರಿ ದೇವಸ್ಥಾನದ ಕೆ. ಅನಂತ ಪದ್ಮನಾಭ ಅಸ್ರಣ್ಣ, ಕುದ್ರೋಳಿ ನಡುಪಲ್ಲಿ ಮಸೀದಿ ಕತಿಬರಾದ ರಿಯಾಜ್ ಫೈಝಿ ಕಕ್ಕಿಂಜೆ, ಬಿಜೈ ಚರ್ಚ್ ನ ಫಾ. ಜಾನ್ಸನ್ ಸಿಕ್ವೇರಾ ಇವರ ಅಮೃತ ಹಸ್ತದಿಂದ ದೀಪ ಪ್ರಜ್ವಲ ಮಾಡುವುದರ ಮೂಲಕ ಉದ್ಘಾಟಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಕೆ. ಅನಂತ ಪದ್ಮನಾಭ ಆಸ್ರಣ್ಣ ರವರು ಐವನ್ ಡಿಸೋಜಾ ಇವರು ಜನಪರ ಕೆಲಸಗಳು ಮತ್ತು ಜನಪರ ಕಾಳಜಿ, ಯಾವುದೇ ಕೆಲಸ ಪ್ರಾರಂಭಿಸಿದರು ಗುರಿ ಮುಟ್ಟಿಸುವಂತ ಜವಾಬ್ದಾರಿ ಕೆಲಸ ಮಾಡುವಂತರು. ಎರಡನೇ ಭಾರಿ ವಿಧಾನ ಪರಿಷತ್ತಿನ ಶಾಸಕರಾಗಿ ಒಳ್ಳೆ ಭವಿಷ್ಯ ನಿರ್ಮಾಣವಾಗಲಿ ಮತ್ತು ಮೊದಲನೇ ಭಾರಿ ಶಾಸಕರಾಗಿ ಅವರು ಮಾಡಿದ ಕೆಲಸ, ಸೇವೆ ಅತ್ಯಂತ ಅದ್ಬುತವಾಗಿದ್ಧು ,ಅವರ ಸೇವೆಗೆ ಮತ್ತೊಮ್ಮೆ ವಿಧಾನ ಪರಿಷತ್ತಿನ ಶಾಸಕರಾಗುವಂತೆ ಆಯಿತು. ಮುಂದೆ ಜಿಲ್ಲೆಯ ಉಸ್ತುವಾರಿ ಮಂತ್ರಿಯಾಗಲಿ ಅಂತ ನಾನು ಆಶಿಸುತ್ತೇನೆ ಎಂದು ಈ ಸಂದರ್ಭದಲ್ಲಿ ಹೇಳಿದರು, ಖತೀಬರು ಹಾಗೂ ಧರ್ಮಗುರುಗಳು ಮಾತನಾಡಿ ಸಾರ್ವಜನಿಕರಿಗೆ ಸದುಪಯೋಗವಾಲೆಂದು ಹಾರೈಸಿ, ಐವನ್ ರವರ ಮುಂದಿನ ಭವಿಷ್ಯ ಉಜ್ವಲವಾಗಲೆಂದು ಹಾರೈಸಿದರು.

ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಮಾಜಿ ಶಾಸಕರಾದ ಜೆ ಆರ್ ಲೋಬೋ, ಮಾಜಿ ಮೂಡ ಅಧ್ಯಕ್ಷರಾದ ಸುರೇಶ್ ಬಲ್ಲಾಳ್ ರವರು ಶುಭ ಹಾರೈಸಿದರು.ದ.ಕ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಮಾಜಿ ಶಾಸಕರಾದ ಹರೀಶ್ ಕುಮಾರ್, ಎಲ್ಲಾ ನಗರ ಪಾಲಿಕೆಯ ಸದಸ್ಯರು, ಪಕ್ಷದ ಮುಖಂಡರು ಕಾರ್ಯಕರ್ತರು ಭೇಟಿ ನೀಡಿ ಶುಭ ಹಾರೈಸಿದರು.


Spread the love
Subscribe
Notify of

0 Comments
Inline Feedbacks
View all comments