ಮಂಗಳೂರು: ಮಹಾನಗರಪಾಲಿಕೆ ಕಟ್ಟಡ ಉಪವಿಧಿ ಪ್ರಕಟ

Spread the love

ಮಂಗಳೂರು: ಮಹಾನಗರಪಾಲಿಕೆ ಕಟ್ಟಡ ಉಪವಿಧಿ ಪ್ರಕಟ 

ಮಂಗಳೂರು: ಮಂಗಳೂರು ಮಹಾನಗರಪಾಲಿಕೆ ಕಟ್ಟಡ ಉಪವಿಧಿಗಳು 2025 ಕ್ಕೆ ಉಲ್ಲೇಖಿತ ಪತ್ರದನ್ವಯ ಸರ್ಕಾರದಿಂದ ಅನುಮೋದನೆ ನೀಡಲಾಗಿರುತ್ತದೆ. ಮುಂದುವರೆದು ಕೆ.ಎಂ.ಸಿ ಕಾಯ್ದೆ 1976ರ ಕಲಂ 426 ರನ್ವಯ ಮಂಗಳೂರು ಮಹಾನಗರಪಾಲಿಕೆ ಕಟ್ಟಡ ಉಪವಿಧಿಗಳು – 2025ನ್ನು ಮಂಗಳೂರು ಮಹಾನಗರಪಾಲಿಕೆಯ ನಗರಯೋಜನಾ ಶಾಖೆಯ ನೋಟೀಸ್ ಬೋರ್ಡಿನಲ್ಲಿ ಪ್ರಚುರಪಡಿಸಲಾಗಿದ್ದು, ಆಸಕ್ತ ಸಾರ್ವಜನಿಕರು ಪಾಲಿಕೆಗೆ ಭೇಟಿ ನೀಡಿ ಕಟ್ಟಡ ಉಪವಿಧಿಗಳನ್ನು ಪರಿಶೀಲಿಸಬಹುದಾಗಿದೆ. ಇದಕ್ಕೆ ಸಂಬಂಧಿಸಿದಂತೆ ರೂ.600 ಪಾವತಿಸಿ ಕಟ್ಟಡ ಉಪವಿಧಿಗಳ ಪ್ರತಿಯನ್ನು ಸಹ ಆಸಕ್ತ ಸಾರ್ವಜನಿಕರು ಪಡೆಯಬಹುದಾಗಿದೆ ಎಂದು ಮಹಾನಗರಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love
Subscribe
Notify of

0 Comments
Inline Feedbacks
View all comments