ಮಂಗಳೂರು: ಎಂ.ಆರ್.ಪಿ.ಎಲ್ ಮೂರನೇ ವಿಸ್ತರಣಾ ಹಂತದ ಕೋಕ್ ಮತ್ತು ಸಲ್ಫರ್ ಘಟಕ ಮುಚ್ಚಬೇಕು. ಮಾಲಿನ್ಯ ನಿಯಂತ್ರಣ ಮಂಡಳಿ ಜೂನ್ ತಿಂಗಳಿಗೆ ಅಂತ್ಯಗೊಳ್ಳುವ ಕೋಕ್ , ಸಲ್ಫರ್ ಘಟಕದ ಪರವಾಣಿಗೆಯನ್ನು ನವೀಕರಿಸಬಾರದು ಎಂದು ಒತ್ತಾಯಿಸಿ ಮೇ, 6 ರಂದು ಸಮಯ ಬೆಳಿಗ್ಗೆ 10 ಘಂಟೆಗೆ ನಾಗರಿಕ ಹೋರಾಟ ಸಮಿತಿ ಜೋಕಟ್ಟೆಯು, ಜೋಕಟ್ಟೆಯಿಂದ ಎಂ.ಆರ್.ಪಿ.ಎಲ್ ಮುಖ್ಯ ದ್ವಾರದವರೆಗೆ ಎಂ.ಆರ್.ಪಿ.ಎಲ್ ಚಲೋ ಪಾದಯಾತ್ರೆ ಹಮ್ಮಿಕೊಂಡಿದೆ ಎಂದು ನಾಗರಿಕ ಹೋರಾಟ ಸಮಿತಿ ಪ್ರಮುಖರಾದ ಮುನೀರ್ ಕಾಟಿಪಳ್ಳ ತಿಳಿಸಿದ್ದಾರೆ.
ಎಂ.ಆರ್.ಪಿ.ಎಲ್ ನ ಕೋಕ್ , ಸಲ್ಫರ್ ಘಟಕದಿಂದಾಗಿ ಪರಿಸರದ ಗ್ರಾಮಗಳ ಜನರ ಮೇಲಾಗುತ್ತಿರುವ ಗಂಭೀರ ಪರಿಣಾಮಗಳನ್ನು ವಿರೋಧಿಸಿ, ಘಟಕವನ್ನು ಮುಚ್ಚುವಂತೆ ಒತ್ತಾಯಿಸಿ ಕಳೆದ ಏಳೆಂಟು ತಿಂಗಳುಗಳಿಂದ ನಿರಂತರ ಪ್ರತಿಭಟನೆಗಳನ್ನು ನಡೆಸಲಾಗುತ್ತಿದೆ. ಆದರೆ, ರಾಜ್ಯ , ಕೇಂದ್ರ ಸರ್ಕಾರಗಳು, ಮಾಲಿನ್ಯ ನಿಯಂತ್ರಣ ಮಂಡಳಿ ಯಾವುದೇ ಧೃಡವಾದ ಕ್ರಮಗಳನ್ನು ಕೈಗೊಳ್ಳದೆ ಜನತೆಯ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿದೆ. ಕಂಪೆನಿ ತನ್ನ ಉತ್ಪಾಧನೆಗಳನ್ನು ಇನ್ನಷ್ಟು ಹೆಚ್ಚುಸುತ್ತಿದೆ. ಇದರಿಂದಾಗಿ ಹೋರಾಟಗಳನ್ನು ಇನ್ನಷ್ಟು ತೀವೃಗೊಳಿಸಲು ನಾಗರಿಕಾ ಹೋರಾಟ ಸಮಿತಿ ನಿರ್ಧರಿಸಿದೆ. ಅದರಂತ್ತೆ ಸರ್ಕಾರ ತಕ್ಷಣ ಕೋಕ್ ಸಲ್ಫರ್ ಘಟಕವನ್ನು ಮುಚ್ಚಬೇಕು ಜೊತೆಗೆ ಜೂನ್ 30 ಕ್ಕೆ ಮಾಲಿನ್ಯ ನಿಯಂತ್ರಣ ಮಂಡಳಿ ಕೋಕ್ ಘಟಕಕ್ಕೆ ನೀಡಿರುವ ಪರವಾನಿಗೆ ಅವಧಿ ಮುಗಿಯುತ್ತದೆ. ಇಷ್ಟೆಲ್ಲಾ ಮಾಲಿನ್ಯಕ್ಕೆ ಕಾರಣವಾಗಿರುವ ಕೋಕ್ ಸಲ್ಫರ್ ಘಟಕದ ಪರವಾನಿಗೆಯನ್ನು ಯಾವುದೇ ಕಾರಣಕ್ಕೂ ನವೀಕರಿಸಬಾರದು ಎಂದು ಒತ್ತಾಯಿಸಿ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ.
ಪಾದಯಾತ್ರೆಯು ಜೋಕಟ್ಟೆ ಗ್ರಾಮ ಪಂಚಾಯತ್ ಮುಂಭಾಗದಲ್ಲಿ ಆರಂಭಗೊಂಡು ಜೋಕಟ್ಟೆ, ಕೆ.ಬಿ.ಎಸ್ ಜಂಕ್ಷನ್ , ಕೋಡಿಕೆರೆ, ಮೈಂದ ಗುರಿ, ಕುಳಾಯಿ, ಕಾನ, ಬಾಳ ದಾರಿಯಾಗಿ ಸಂಚರಿಸಿ ಎಂ.ಆರ್.ಪಿ.ಎಲ್ ಪ್ರಧಾನ ದ್ವಾರದ ಮುಂಭಾಗ ಮಧ್ಯಾಹ್ಮ 1 ಗಂಟೆಗೆ ಬೃಹತ್ ಸಾರ್ವಜನಿಕ ಸಭೆಯ ಮೂಲಕ ಅಂತ್ಯಗೊಳ್ಳಲಿದೆ ಎಂದು ಮುನೀರ್ ಕಾಟಿಪಳ್ಳ ತಿಳಿಸಿದ್ದಾರೆ.