ಮಂಗಳೂರು: ‘ವಾರಿಯರ್ ಆಫ್ ದಿ ಡೇ’ ಆಗಿ ಶಿವಪ್ಪ ಆಯ್ಕೆ

Spread the love

ಮಂಗಳೂರು: ‘ವಾರಿಯರ್ ಆಫ್ ದಿ ಡೇ’ ಆಗಿ ಶಿವಪ್ಪ ಆಯ್ಕೆ

ಮಂಗಳೂರು: ಕೊರೋನ ಹಿನ್ನೆಲೆಯಲ್ಲಿ ನಗರದಲ್ಲಿ ಲಾಕ್ಡೌನ್ ಜಾರಿಯಲ್ಲಿರುವ ಸಂದರ್ಭ ಉತ್ತಮ ಕಾರ್ಯನಿರ್ವಹಿಸಿದ ಓರ್ವ ಪೊಲೀಸ್ ಸಿಬ್ಬಂದಿಯನ್ನು ನಗರ ಪೊಲೀಸ್ ಆಯುಕ್ತರು ‘ದಿನದ ಕೊವಿಡ್ ವಾರಿಯರ್’ ಎಂದು ಗೌರವಿಸಲಿದ್ದಾರೆ.

ಅದರಂತೆ ಕಾವೂರು ಪೊಲೀಸ್ ಠಾಣೆಯ ಹೆಡ್ ಕಾನ್ಸ್ ಟೇಬಲ್ ಶಿವಪ್ಪ ಅವರನ್ನು ‘ವಾರಿಯರ್ ಆಫ್ ದಿ ಡೇ’ ಎಂದು ಗುರುತಿಸಲಾಗಿದೆ.

ಶಿವಪ್ಪ ಕಾವೂರು ಪೊಲೀಸ್ ಠಾಣೆಯಲ್ಲಿ ಹೆಡ್ ಕಾನ್ಸ್ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಏಪ್ರಿಲ್ 16 ರಂದು ಹಗಲು ಕರ್ತವ್ಯದಲ್ಲಿದ್ದು ಮಧ್ಯಾಹ್ನ 03.00 ಗಂಟೆ ಸಮಯಕ್ಕೆ ಠಾಣೆಗೆ ಬಂದ ದೂರವಾಣಿ ಕರೆಯನ್ನು ಆಧರಿಸಿ ಸ್ಥಳಕ್ಕೆ ಹೋದಾಗ ಬಾಗಲಕೋಟೆಯವಾರದ ಪ್ರಸ್ತುತ ಶಾಂತಿನಗರ ನಿವಾಸಿ ಸುಧಾ ಎಂಬುವವರು ತುಂಬು ಗಭೀಣಿಯಾಗಿದ್ದು, ವಿಪರೀತ ಹೊಟ್ಟೆ ನೋವು ಬಂದ ಕಾರಣ ಆಸ್ಪತ್ರೆಗೆ ತೆರಳಲು ಯಾವುದೇ ವಾಹನಗಳು ಇಲ್ಲದಿದ್ದುದರಿಂದ, ಸದರಿರವರು ಅಂಬ್ಯೂಲೇನ್ಸ್ ವ್ಯವಸ್ಥೆ ಮಾಡಿ ಸರ್ಕಾರಿ ಲೇಡಿಗೋಶನ್ ಆಸ್ಪತ್ರೆಗೆ ರವಾನಿಸಿ ಸಮಯ ಪ್ರಜ್ಙೆ ಮತ್ತು ಕರ್ತವ್ಯ ನಿಷ್ಠೆಯನ್ನು ತೋರಿ ಶ್ಲಾಘನೀಯ ಕೆಲಸವನ್ನು ಮಾಡಿರುತ್ತಾರೆ.

Also Read 

ಕೊರೋನ ಲಾಕ್ ಡೌನ್ ಉತ್ತಮ ಕಾರ್ಯನಿರ್ವಹಣೆ – ‘ವಾರಿಯರ್ ಆಫ್ ದಿ ಡೇ’ ಆಗಿ ಪುನೀತ್ ಆಯ್ಕೆ

ಕೊರೊನಾ ವಾರಿಯರ್: ಕೇರಳದ ಮಕ್ಕಳನ್ನು ಕುಟುಂಬ ಸೇರಿಸಿದ ಎಎಸ್ಐ ಸಂತೋಷ್

ಮಂಗಳೂರು: ‘ವಾರಿಯರ್ ಆಫ್ ದಿ ಡೇ’ ಆಗಿ ಸೋಮನಗೌಡ ಚೌಧರಿ ಆಯ್ಕೆ

ಮಂಗಳೂರು: ‘ವಾರಿಯರ್ ಆಫ್ ದಿ ಡೇ’ ಆಗಿ ರಂಜನ್ ಕುಮಾರ್ ಆಯ್ಕೆ


Spread the love