ಮಂಗಳೂರು: ‘ವಾರಿಯರ್ ಆಫ್ ದಿ ಡೇ’ ಆಗಿ ಕಾನ್ಸ್ಟೇಬಲ್ ಯುವರಾಜ್ ಎಲ್ ಆಯ್ಕೆ
ಮಂಗಳೂರು: ಕೊರೋನ ಹಿನ್ನೆಲೆಯಲ್ಲಿ ನಗರದಲ್ಲಿ ಲಾಕ್ಡೌನ್ ಜಾರಿಯಲ್ಲಿರುವ ಸಂದರ್ಭ ಉತ್ತಮ ಕಾರ್ಯನಿರ್ವಹಿಸಿದ ಓರ್ವ ಪೊಲೀಸ್ ಸಿಬ್ಬಂದಿಯನ್ನು ನಗರ ಪೊಲೀಸ್ ಆಯುಕ್ತರು ‘ದಿನದ ಕೊವಿಡ್ ವಾರಿಯರ್’ ಎಂದು ಗೌರವಿಸಲಿದ್ದಾರೆ.
ಅದರಂತೆ ಮಂಗಳವಾರ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ವೈರ್ ಲೆಸ್ ಪೊಲೀಸ್ ಕಾನ್ಸ್ಟೇಬಲ್ ಯುವರಾಜ್ ಎಲ್ ಅವರನ್ನು ‘ವಾರಿಯರ್ ಆಫ್ ದಿ ಡೇ’ ಎಂದು ಗುರುತಿಸಲಾಗಿದೆ.
ಯುವರಾಜ್ ಎಲ್ ರವರು ಮಂಗಳೂರು ನಗರ ನಿಯಂತ್ರಣ ಕೊಠಡಿಯಲ್ಲಿ ವೈರ್ ಲೇಸ್ ಪೊಲೀಸ್ ಕಾನ್ಸ್ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಕೋವಿಡ್-19 ಸಾಂಕ್ರಾಮಿಕ ರೋಗ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸದರಿಯವರು ನಗರ ನಿಯಂತ್ರಣ ಕೊಠಡಿಯ ಯು.ಹೆಚ್.ಎಫ್ ಚಾನಲ್ ನಲ್ಲಿ ಪಾಳೆಯ ಕರ್ತವ್ಯದಲ್ಲಿದ್ದು ಲಾಕ್ ಡೌನ್ ಉಲ್ಲಂಘನೆಯ ದೂರು ಪ್ರಕರಣಗಳನ್ನು ಕ್ಲಪ್ತ ಸಮಯದಲ್ಲಿ ಸಂಬಂದಪಟ್ಟ ಪೊಲೀಸ್ ಠಾಣೆಗಳಿಗೆ ಹಾಗೂ ಮೇಲಾಧಿಕಾರಿಗಳಿಗೆ ಮಾಹಿತಿಯನ್ನು ಒದಗಿಸುವಲ್ಲಿ ಉತ್ತಮ ಕೆಲಸ ಮಾಡಿರುತ್ತಾರೆ. ನಗರ ನಿಯಂತ್ರಣ ಕೊಠಡಿಯ ವಾಟ್ಸ್ಆ್ಯಫ್ ನಲ್ಲಿ ಬರುವ ದೂರಗಳಿಗೆ ಶೀಘ್ರವಾಗಿ ಸ್ಪಂದಿಸುತ್ತಾ ಸಾರ್ವಜನಿಕರಿಂದ ಪ್ರಶಂಸೆಗೆ ಪಾತ್ರರಾಗಿರುತ್ತಾರೆ.