ಮಂಗಳೂರು: ಯುನಾಯ್ಟೆಡ್ ಕ್ರಿಶ್ಚಿಯನ್ ಎಸೋಶಿಯೇಶನ್ ರಿ ಮಂಗಳೂರು ಇವರ ಮುಂದಾಳತ್ವದಲ್ಲಿ ವಿದ್ಯಾದಾನಿ ಹರೇಕಳ ಹಾಜಬ್ಬರಿಗೆ ನೂತನ ಮನೆಯನ್ನು ಕಟ್ಟಿಕೊಡುವ ಸಲುವಾಗಿ ಶಿಲನ್ಯಾಸ ಕಾರ್ಯಕ್ರಮ ಸಪ್ಟೆಂಬರ್ 13ರಂದು ಬೆಳಿಗ್ಗೆ 9 ಕ್ಕೆ ಹಾಜಬ್ಬರ ವಾಸಸ್ಥಳದವಾದ ಹರೇಕಳದಲ್ಲಿ ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದಲ್ಲಿ ಸಾಂದಿಪನಿ ಸಾಧನಾಶ್ರಮ ಕೇಮಾರು ಕ್ಷೇತ್ರ ಇದರ ಶ್ರೀ ಈಶ ವಿಠಲದಾಸ ಸ್ವಾಮೀಜಿ, ವಂ ಜೆ ಬಿ ಸಲ್ಡಾನ್ಹ, ಧರ್ಮಗುರುಗಳು ಪೆರ್ಮನ್ನೂರು ಧರ್ಮಕೇಂದ್ರ ಹಾಗೂ ಹರೇಕಳ ಮಸೀದಿಯ ಗುರುಗಳಾದ ಶರೀಫ್ ಖಾದಿ ನಂದಾವರ ಇವರು ಹಾಜರಿದ್ದು, ಶಿಲನ್ಯಾಸವನ್ನು ನೇರವೇರಿಸುವರು.
ಕರಾವಳಿಯ ಅಕ್ಷರ ಯೋಗಿ ಎಂದೇ ಪ್ರಖ್ಯಾತರಾಗಿರುವ ಹರೇಕಳದ ಹಾಜಬ್ಬರವರು ತನ್ನ ದುಡಿಮೆಯ ಎಲ್ಲಾ ಸಂಪತ್ತನ್ನು ಬಡಮಕ್ಕಳ ವಿದ್ಯೆಗೋಸ್ಕರವೆ ವ್ಯಯಿಸಿ ತನ್ನ ಸ್ವಂತ ಸೂರಿನ ಬಗ್ಗೆ ಆಲೋಚಿಸದಿದ್ದುದ್ದರಿಂದ ಅವರು ಈಗ ವಾಸ್ತವ್ಯ ಹೂಡಿರುವ ಮನೆಯು ಸಂಪೂರ್ಣವಾಗಿ ಶಿಥಿಲವಾಗಿದ್ದು ಕುಸಿಯುವ ಭೀತಿಯಲ್ಲಿದೆ. ಈ ಬಗ್ಗೆ ಯುನಾಯ್ಟೆಡ್ ಕ್ರೀಶ್ಚಿಯನ್ ಎಸೋಶಿಯೇಶನ್ ಮುತುವರ್ಜಿ ವಹಿಸಿ ಅವರಿಗೆ ಸುಸಜ್ಜಿತವಾದ ಹೊಸ ಮನೆಯನ್ನು ಕಟ್ಟಿಕೊಡಲು ಮುಂದಾಗಿದೆ.