ಮಂಗಳೂರು ವಿವಿ 36ನೇ ವಾರ್ಷಿಕ ಘಟಿಕೋತ್ಸವ

Spread the love

ಮಂಗಳೂರು ವಿವಿ 36ನೇ ವಾರ್ಷಿಕ ಘಟಿಕೋತ್ಸವ

ಮಂಗಳೂರು :ಮಂಗಳೂರು ವಿಶ್ವವಿದ್ಯಾನಿಲಯದ 36ನೇ ವಾರ್ಷಿಕ ಘಟಿಕೋತ್ಸವವು 2018ನೇ ಜನವರಿ/ಫೆಬ್ರವರಿ ತಿಂಗಳಿನಲ್ಲಿ ನಡೆಯಲಿರುವುದು. ಮಂಗಳೂರು ವಿವಿಯ ಸಂಯೋಜಿತ ಘಟಕ ಮತ್ತು ಸ್ವಾಯತ್ತ ಕಾಲೇಜುಗಳಲ್ಲಿ ವ್ಯಾಸಂಗ ಮಾಡಿ ಅಕ್ಟೋಬರ್ 31 ರ ಒಳಗೆ ವಿವಿಧ ಪದವಿಗಳನ್ನು ಪಡೆಯಲು ಅರ್ಹರಾದ ಅಭ್ಯರ್ಥಿಗಳು ಈ ಘಟಿಕೋತ್ಸವದಲ್ಲಿ ಪದವಿ ಪಡೆಯಲು ಅರ್ಹರಾಗಿರುತ್ತಾರೆ.

ಅಭ್ಯರ್ಥಿಗಳು ಈ ಹಿಂದೆ ಕಲಿತ ಕಾಲೇಜುಗಳ ಪ್ರಾಂಶುಪಾಲರಿಂದ/ವಿಭಾಗಗಳ ಅಧ್ಯಕ್ಷರಿಂದ ನಿಗದಿತ ಅರ್ಜಿಯನ್ನು ಪಡೆದುಕೊಂಡು ಹಾಜರಿ ಅಥವಾ ಗೈರುಹಾಜರಿಯಲ್ಲಿ ಪದವಿಯನ್ನು ಪಡೆಯಬಹುದು.ಸ್ವಾಯತ್ತ ಕಾಲೇಜುಗಳಲ್ಲಿ ವ್ಯಾಸಂಗ ಮಾಡಿ ಪದವಿ ಪಡೆಯಲು ಅರ್ಹರಾದ ಅಭ್ಯರ್ಥಿಗಳು ಅರ್ಜಿಗಳನ್ನು ಸಂಬಂಧಪಟ್ಟ ಕಾಲೇಜುಗಳ ಪ್ರಾಂಶುಪಾಲರುಗಳ ಮುಖಾಂತರವೇ ಸಲ್ಲಿಸಬೇಕು.

ಪರಿಶಿಷ್ಟ ಜಾತಿ/ಪಂಗಡದ ಅಭ್ಯರ್ಥಿಗಳು ದೃಢೀಕರಿಸಿದ ಜಾತಿ ಪ್ರಮಾಣ ಪತ್ರವನ್ನು ಅರ್ಜಿಯ ಜೊತೆ ಲಗತ್ತಿಸಬೇಕು. ಪಿಎಚ್‍ಡಿ/ಡಿಎಸ್ಸಿ/ಡಿ.ಲಿಟ್ ಪದವಿಯನ್ನು ಪಡೆಯಲು ಅರ್ಹರಾದ ಅಭ್ಯರ್ಥಿಗಳು ಅರ್ಜಿಯೊಂದಿಗೆ ಪಾಸ್‍ಪೋರ್ಟ್ ಅಳತೆಯ ಭಾವಚಿತ್ರವನ್ನು ಲಗತ್ತಿಸಬೇಕು.

ಪದವಿ ಪಡೆಯಲು ಶುಲ್ಕದ ವಿವರ: ಪದವಿ ಮಟ್ಟ ರೂ. 690/- ಹಾಗೂ ಪ.ಜಾತಿ ಮತ್ತು ಪಂಗಡದವರಿಗೆ ರೂ. 345/- ಸ್ನಾತಕೋತ್ತರ ಪದವಿ ರೂ. 900/- ಹಾಗೂ. ಪ.ಜಾತಿ ಮತ್ತು ಪಂಗಡದವರಿಗೆ ರೂ. 450/- ಪಿಎಚ್‍ಡಿ/ಎಂಫಿಲ್ ಪದವಿಗೆ ರೂ. 1850/- ಹಾಗೂ ಪ.ಜಾತಿ ಮತ್ತು ಪಂಗಡದವರಿಗೆ ರೂ. 925/- ಡಿ.ಎಸ್ಸಿ/ ಡಿಲಿಟ್ ಪದವಿಗೆ ರೂ. 2900/-ಹಾಗೂ ಪ.ಜಾತಿ ಮತ್ತು ಪಂಗಡದವರಿಗೆ ರೂ. 1450/- ನಿಗದಿಪಡಿಸಲಾಗಿದೆ. ಇದರ ಜೊತೆಗೆ ರೂ. 100/- ಅರ್ಜಿಶುಲ್ಕವನ್ನು ಪಾವತಿಸಬೇಕು.

ಭರ್ತಿ ಮಾಡಿದ ಅರ್ಜಿಗಳನ್ನು ನಿಗದಿತ ಶುಲ್ಕದೊಂದಿಗೆ 2018ನೇ ಜನವರಿ 10ರ ಒಳಗೆ (ಕುಲಸಚಿವರ) ಪರೀಕ್ಷಾಂಗ ವಿಭಾಗ ಮಂಗಳೂರು ವಿವಿ ಮಂಗಳಗಂಗೋತ್ರಿ ಇಲ್ಲಿಗೆ ಸಲ್ಲಿಸಬೇಕು ಎಂದು ಪ್ರಕಟಣೆ ತಿಳಿಸಿದೆ.


Spread the love