ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ಅಖಿಲ ಭಾರತ ಅಥ್ಲೆಟಿಕ್ಸ್ ಚಾಂಪಿಯನ್‍ಷಿಪ್ ಪಟ್ಟ
ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ಅಖಿಲ ಭಾರತ ಅಥ್ಲೆಟಿಕ್ಸ್ ಚಾಂಪಿಯನ್‍ಷಿಪ್ ಪಟ್ಟ ಆಚಾರ್ಯ ನಾಗರ್ಜುನ ವಿಶ್ವವಿದ್ಯಾನಿಲಯ ಗುಂಟೂರು ಇಲ್ಲಿ ದಿನಾಂಕ 12 ರಿಂದ 16 ಡಿಸೆಂಬರ್ 2017ರವರೆಗೆ ನಡೆದ 78ನೇ ಅಖಿಲ ಭಾರತ ಅಂತರ ವಿಶ್ವವಿದ್ಯಾನಿಲಯ ಅಥ್ಲೇಟಿಕ್ಸ್ ಚಾಂಪಿಯನ್‍ಷಿಪ್‍ನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ದ್ವಿತೀಯ ಬಾರಿಗೆ ಚಾಂಪಿಯನ್ ಆಗಿ ಹೊರ ಹೊಮ್ಮಿದೆ.
ಮಂಗಳೂರು ವಿಶ್ವವಿದ್ಯಾನಿಲಯ ಪುರುಷರ ವಿಭಾಗದಲ್ಲಿ 116 ಅಂಕಗಳೊಂದಿಗೆ ಪ್ರಥಮ ಸ್ಥಾನವನ್ನು ಪಡೆದರೆ, 48 ಅಂಕಗಳೊಂದಿಗೆ ಪಂಜಾಬ್ ವಿಶ್ವವಿದ್ಯಾನಿಲಯ ದ್ವಿತೀಯ ಹಾಗೂ 44 ಅಂಕಗಳೊಂದಿಗೆ ಕ್ಯಾಲಿಕಟ್ ವಿಶ್ವವಿದ್ಯಾನಿಲಯ, ತೃತೀಯ ಸ್ಥಾನವನ್ನು ಪಡೆದಿದೆ. ಮಹಿಳೆಯರ ವಿಭಾಗದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ 61 ಅಂಕಗಳೊಂದಿಗೆ ದ್ವಿತೀಯ ಸ್ಥಾನವನ್ನು ಪಡೆದರೆ ಎಂ.ಜಿ. ವಿಶ್ವವಿದ್ಯಾನಿಲಯ ಕೊಟ್ಟಾಯಂ ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ. ಮಂಗಳೂರು ವಿಶ್ವವಿದ್ಯಾನಿಲಯ 177 ಅಂಕಗಳೊಂದಿಗೆ ಸಮಗ್ರ ಚಾಂಪಿಯನ್‍ಷಿಪ್ ಪಡೆದುಕೊಂಡಿದೆ.
ಮಂಗಳೂರು ವಿಶ್ವವಿದ್ಯಾನಿಲಯದ ವಿ.ಕೆ. ಎಲೈಕ್ಕಿಯದಾಸನ್‍ರವರು 100 ಮೀ. ಓಟವನ್ನು 10.47 ಸೆಕೆಂಡುಗಳೊಂದಿಗೆ ಗುರಿ ತಲುಪಿದರೆ, 200 ಮೀ. ಓಟವನ್ನು 20.92 ಸೆಕೆಂಡುಗಳೊಂದಿಗೆ ಗುರಿ ತಲುಪಿ 37 ವರುಷಗಳ ಹಳೆಯ ದಾಖಲೆಯನ್ನು ಮುರಿದ್ದಿದ್ದಾರೆ ಅಲ್ಲದೆ ಈ ಎರಡು ಸ್ಪರ್ಧೆಗಳಲ್ಲಿ ಕೂಡ ನೂತನ ದಾಖಲೆಯನ್ನು ಸ್ಥಾಪಿಸಿದ್ದಾರೆ.