ಮಂಗಳೂರು: ಶಲೋನ್ ಜೋನ್ ಪಾಯ್ಸ್‍ರವರಿಗೆ ನಮಾನ್ ಬಾಳೊಕ್ ಜೆಜು  ಯುವ ಪ್ರತಿಭಾ ಪುರಸ್ಕಾರ ಪ್ರಾಪ್ತವಾಗಿದೆ

Spread the love

ಮಂಗಳೂರು: 2015ನೇ ಸಾಲಿನ ಚೊಚ್ಚಲ ‘ನಮಾನ್ ಬಾಳೊಕ್ ಜೆಜು’ ಯುವ ಪ್ರತಿಭಾ ಪುರಸ್ಕಾರವು ಶಲೋನ್ ಜೋನ್ ಪಾಯ್ಸ್‍ರವರಿಗೆ ಪ್ರಾಪ್ತವಾಗಿದೆ ಎಂದು ತಿಳಿಸಲು ನಾವು ಸಂತಸಪಡುತ್ತೇವೆ.

‘ನಮಾನ್ ಬಾಳೊಕ್ ಜೆಜು’ ಕೊಂಕಣಿ ಮಾಸಪತ್ರಿಕೆಯು ಏಳನೇ ವರ್ಷಕ್ಕೆ ಕಾಲಿರಿಸುವ ಶುಭ ಸಂದರ್ಭದಲ್ಲಿ, ‘ಆಕಾಶ್-ಅಮೂಲ್ಯ’ ರವರ ಹೆಸರಲ್ಲಿ ಶ್ರೀ. ಕಾಲ್ವಿನ್ ಹಾಗೂ ಶ್ರೀಮತಿ ಮೇವಿಸ್ ರೊಡ್ರಿಗಸ್‍ರವರು ಸಂಸ್ಥಾಪಿಸಿದ ಈ ಪುರಸ್ಕಾರದ ಪ್ರಮುಖ ಉದ್ದೇಶ: ಪ್ರತಿಭಾವಂತ ಕಥೊಲಿಕ್ ಯುವಕ/ಯುವತಿಯರನ್ನು ಗುರುತಿಸಿ, ಅವರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಬೆಳೆÀಯಲು ಹಾಗೂ ಇನ್ನಷ್ಟು ಸಾಧನೆಗೈಯಲು ಪ್ರೋತ್ಸಾಹಿಸುವುದಾಗಿದೆ.

NBJ

ಕಲೆ, ಕ್ರೀಡೆ, ಸಾಹಿತ್ಯ, ವಿಜ್ಞಾನ, ಕೃಷಿ, ಸಮಾಜಸೇವೆ, ಪರಿಸರ ರಕ್ಷಣೆ, ವಾಣಿಜ್ಯ ಕ್ಷೇತ್ರಗಳಲ್ಲಿ ಸಾಧನೆಗೈದ, 18-30 ವಯೋಮಿತಿಯೊಳಗಿನ ಕಥೊಲಿಕ್ ಯುವಕ/ಯುವತಿಯರನ್ನು ಗುರುತಿಸಿ ಪ್ರೋತ್ಸಾಹಿಸುವ ಸಲುವಾಗಿ ಈ ಪುರಸ್ಕಾರವು ಜನ್ಮ ತಾಳಿದೆ. ಈ ಪುರಸ್ಕಾರವು ರೂ. 25,000 ನಗದು, ಪ್ರಮಾಣಪತ್ರ, ಸ್ಮರಣಿಕೆ ಹಾಗೂ ಶಾಲು ಹೊಂದಿರುತ್ತದೆ.

ನಿಯಮಾವಳಿಯಂತೆ, 18 ವರ್ಷ ವಯಸ್ಸಿನ ಶಲೋನ್ ಜೋನ್ ಪಾಯ್ಸ್‍ರವರು ಈ ಚೊಚ್ಚಲ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ. ಮಂಗಳೂರಿನ ಬಜ್ಜೋಡಿಯಲ್ಲಿ ವಾಸವಾಗಿರುವ ಶ್ರೀ ಜಾನ್ ಹಾಗೂ ಶ್ರೀ ಮಾರ್ಗರೇಟ್ ಪಾಯ್ಸ್ ದಂಪತಿಯ ಮಗಳಾದ ಕು. ಶಲೋನ್, ಮಂಗಳೂರಿನ ಪ್ರತಿಶ್ಟಿತ Sಆಒ ಕಾನೂನು ಕಾಲೇಜಿನಲ್ಲಿ ಃ.ಂ ಐಐಃ ವ್ಯಾಸಂಗವನ್ನು ಮಾಡುತ್ತಿದ್ದಾರೆ.

ಪ್ರತಿಭಾವಂತ ಯುವತಿ ಶಲೋನ್ ಈಗಾಗಲೇ ಚದುರಂಗ (ಚೆಸ್) ಆಟದಲ್ಲಿ ಗಣನೀಯ ಸಾಧನೆಗೈದಿದ್ದಾರೆ. 2009ರಲ್ಲಿ ನಡೆದ 54ನೇ ರಾಷ್ಟ್ರೀಯ ಶಾಲಾಕ್ರೀಡೆಯಲ್ಲಿ ತೃತೀಯ ಬಹುಮಾನ, 55ನೇ ವರ್ಷದಲ್ಲಿ ದ್ವೀತೀಯ ಬಹುಮಾನ, 57ನೇ ಹಾಗೂ 58ನೇ ವರ್ಷದ ಸ್ಪರ್ಧೆಗಳಲ್ಲಿ ತೃತೀಯ ಹಾಗೂ 60ನೇ ರಾಷ್ಟ್ರೀಯ ನ್ಯಾಶನಲ್ ಗೇಮ್ಸ್‍ನಲ್ಲಿ ದ್ವೀತಿಯ ಬಹುಮಾನವನ್ನು ಪಡೆದಿರುತ್ತಾರೆ. ಮಾತ್ರವಲ್ಲದೆ, 2014ನೇ ಅಂತರಾಷ್ಟ್ರೀಯ ಈIಆಇ ಮಟ್ಟದ ಓಪನ್ ಟೂರ್ನಮೆಂಟ್‍ನಲ್ಲಿ ಅತ್ರ್ತುತ್ತಮ ಮಹಿಳಾ ಕ್ರೀಡಾಪಟು ಪುರಸ್ಕರಾವನ್ನು ತನ್ನದಾಗಿಸಿಕೊಂಡಿದ್ದಾರೆ. ಅಲ್ಲದೆ, 2015 ರಲ್ಲಿ ಈIಆಇ ಓಪನ್ ಟೂರ್ನಮೆಂಟ್‍ನಲ್ಲಿ 10ನೇ ಸ್ಥಾನವನ್ನು ಪಡೆದಿದ್ದಾರೆ.

2005ನೇ ಸಾಲಿನ ಏಶಿಯನ್ ಯೂತ್ ಚೆಸ್ ಚಾಂಪಿಯನ್ ಶಿಪ್‍ನಲ್ಲಿ 6ನೇ ಸ್ಥಾನವನ್ನೂ, 2010ರಲ್ಲಿ ನಡೆದ ನ್ಯಾಶನಲ್ ಸ್ಕೂಲ್ ಚೆಸ್ ಚಾಂಪಿಯನ್ ಶಿಪ್‍ನಲ್ಲಿ ಬೆಳ್ಳಿಪದಕವನ್ನು ಪಡೆದು, 2015ನೇ ಸಾಲಿನ ನ್ಯಾಶನಲ್ SಉಈI ಚೆಸ್ ಚಾಂಪಿಯನ್‍ಶಿಪ್‍ನ ಹಾಗೂ 2012ರಲ್ಲಿ ಕರ್ನಾಟಕ ರಾಜ್ಯ ಮಹಿಳಾ ಚಾಂಪಿಯನ್‍ಶಿಪ್‍ನಲ್ಲಿ ಕರ್ನಾಟಕ ತಂಡದ ಕ್ಯಾಪ್ಟನ್ ಆಗಿ ಪ್ರತಿನಿಧಿಸಿದ್ದಾರೆ.

ಚೆಸ್ ಕ್ರೀಡೆ ಮಾತ್ರವಲ್ಲದೆ ಶಲೋನ್‍ರಿಗೆ ಸಂಗೀತದಲ್ಲೂ ಆಸಕ್ತಿಯಿದೆ. ವಯೋಲಿನ್ ಹಾಗೂ ಪಿಯಾನೋ ನುಡಿಸುವ ಜೊತೆಗೆ ಗಾಯನ, ನೃತ್ಯ ಹಾಗೂ ಭಾಷಣಕಲೆಗಳನ್ನು ಮೈಗೂಡಿಸಿ ಕೊಂಡಿದ್ದಾರೆ. ‘ನಮಾನ್ ಬಾಳೊಕ್ ಜೆಜು’ ಪತ್ರಿಕೆಯು ಇಂತಹ  ಬಹುಮುಖ ಪ್ರತಿಭೆಯ ಯುವತಿಯನ್ನು ಗುರುತಿಸಿ, ಸನ್ಮಾನಿಸಲು ಸಂತಸಪಡುತ್ತದೆ. ಮಾತ್ರವಲ್ಲದೆ, ಅವರು ಮುಂದೆಯೂ ತಮ್ಮ ಕ್ಷೇತ್ರದಲ್ಲಿ ಉನ್ನತ ಮಟ್ಟದ ಸಾಧನೆಗೈದು, ಅವರಿಂದ ಸಮಾಜಕ್ಕೆ ಉತ್ತಮ ಸೇವೆ ಲಭಿಸುವಂತಾಗಲಿ ಹಾಗೂ ಅವರ ಸಾಧನೆಯು ಅನೇಕ ಯುವಕ-ಯುವತಿಯರಿಗೆ ಮಾದರಿಯಾಗಲಿ ಎಂದು ಆಶಿಸುತ್ತದೆ.

ಈ ಪುರಸ್ಕಾರದ ಆಯ್ಕೆ ಸಮಿತಿಯಲ್ಲಿ ಕಾರ್ಯನಿರ್ವಹಿಸಿದ ಪ್ರೊ ಜಿಯೋ ಡಿಸಿಲ್ವಾ (ನಿರ್ದೆಶಕರು ಹಾಗೂ ವಿಶೇಷ ಅಧಿಕಾರಿ, ಪ್ಲೇಸ್‍ಮೆಂಟ್ ವಿಭಾಗ, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಹಾಗೂ ಕೊಂಕಣಿ ಸಾಹಿತಿ), ನಿತಿಶಾ ರಾಡ್ರಿಗಸ್ (ದೈಹಿಕ ಶಿಕ್ಷಣಾ ನಿರ್ದೇಶಕಿ, ಸಹ್ಯಾದ್ರಿ ತಾಂತ್ರಿಕ ವಿದ್ಯಾಲಯ) ಹಾಗೂ ‘ಮಿ. ವಲ್ರ್ಢ್’ ರೇಮಂಡ್ ಡಿಸೋಜಾ (ವೈಟ್ ಲಿಫ್ಟಿಂಗ್ ಚಾಂಪಿಯನ್) ರಂತಹ ಗಣ್ಯಾತಿಗಣ್ಯರಿಗೆ ‘ನಮಾನ್ ಬಾಳೊಕ್ ಜೆಜು’ ಪತ್ರಿಕೆಯು ಕೃತಜ್ಞತೆಯನ್ನು ಸಲ್ಲಿಸುತ್ತದೆ.

ಡಿಸೆಂಬರ್ 20, 2015 ರಂದು ಬಾಲಯೇಸುವಿನ ಪುಣ್ಯಕ್ಷೇತ್ರ, ಬಿಕರ್ನಕಟ್ಟೆಯಲ್ಲಿ ಜರುಗುವ ಪತ್ರಿಕೆಯ ವಾರ್ಷಿಕೋತ್ಸವದ ಶುಭ ಸಂದರ್ಭದಲ್ಲಿ, ಕರ್ನಾಟಕ ಹಾಗೂ ಗೋವಾ ಪ್ರೊವಿನ್ಸ್‍ನ ಪ್ರೊವಿನ್ಶಿಲ್, ರೆ.ಫಾ. ಚಾಲ್ಸ್ ಸೆರಾವೊ ರವರು ಈ ಪುರಸ್ಕಾರವನ್ನು ಹಸ್ತಾಂತರಿಸಲಿದ್ದಾರೆ. ಈ ಸಂದರ್ಭದಲ್ಲಿ ಖ್ಯಾತ ಕೊಂಕಣಿ ಹಾಗೂ ಕನ್ನಡದ ಅಂಕಣಕಾರರು ಹಾಗೂ ಫಾತಿಮಾ ರಿಟ್ರೀಟ್ ಹೌಸ್‍ನ ನಿರ್ದೇಶಕರಾದ ಫಾ| ಪ್ರಶಾಂತ್ ಮಾಡ್ತ, Sಎ ಮತ್ತು ಉಡುಪಿ ಧರ್ಮಕ್ಷೇತ್ರದ Pಖಔ ರೆ. ಫಾ ಡೆನಿಸ್ ಡೇಸಾ ರವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು.

ಪುರಸ್ಕಾರ ಹಸ್ತಾಂತರ ಕಾರ್ಯಕ್ರಮದ ಜೊತೆಗೆ ಈ ಸಂದರ್ಭದಲ್ಲಿ ಸಕಾಳಿಕ್.ಕೊಮ್ ಎಂಬ ಕೊಂಕಣಿ ಅಂತರ್ಜಾಲದ ಲೋಕಾರ್ಪಣೆ ಹಾಗೂ 4 ಪುಸ್ತಕಗಳ ಬಿಡುಗಡೆ ಕಾರ್ಯಕ್ರಮವೂ ಜರುಗಲಿರುವುದು.

‘ನಮಾನ್ ಬಾಳೊಕ್ ಜೆಜು’ ಕನ್ನಡ ಲಿಪಿಯಲ್ಲಿ ಪ್ರಕಟವಾಗುತ್ತಿರುವ ಕೊಂಕಣಿ ಮಾಸ ಪತ್ರಿಕೆ, 2009 ರಲ್ಲಿ ಪ್ರಾರಂಭವಾಗಿದ್ದು, ಬಾಲಯೇಸುವಿನ ಪುಣ್ಯಕ್ಷೇತ್ರ, ಬಿಕರ್ನಕಟ್ಟೆ, ಮಂಗಳೂರು ಇಲ್ಲಿನ ಕಾರ್ಮೆಲಿತ್ ಧರ್ಮಗುರುಗಳಿಂದ ಪ್ರಕಟಗೊಳ್ಳುತ್ತಿದೆ.


Spread the love