ಮಂಗಳೂರು: ಸನಾತನ ಸಂಸ್ಥೆ ಹಾಗೂ ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಜುಲೈ 31ರಂದು ವಿ.ಟಿ.ರಸ್ತೆಯಲ್ಲಿರುವ ಶ್ರೀನಿವಾಸ ಕಲ್ಯಾಣ ಮಂಟಪದಲ್ಲಿ ಗುರುಪೂರ್ಣಿಮಾ ಮಹೋತ್ಸವದ ಆಯೋಜನೆ ಮಾಡಲಾಗಿತ್ತು.
ಈ ಕಾರ್ಯಕೃಮದಲ್ಲಿ 400ಕ್ಕಿಂತಲೂ ಹೆಚ್ಚು ಧರ್ಮಾಭಿಮಾನಿಗಳು ಉಪಸ್ಥಿತರಿದ್ದರು. ಕಾರ್ಯಕೃಮದ ಮುಖ್ಯ ಅಥಿತಿಗಳಾಗಿ ಉಚ್ಚ ನ್ಯಾಯಾಲಯದ ವಕೀಲರಾದ ಶ್ರೀ ಅಮೃತೇಶ ಎನ್,ಪಿ ಹಾಗೂ ಉಜಿರೆಯಿಂದ ಆಗಮಿಸಿದ ಶ್ರೀ ಕಿಶೋರಕುಮಾರ ಶಿರಾಡಿ, ಸನಾತನದ ಸಂತರಾದ ಪೂ.ಸತ್ಯವಾನ ಕದಮ, ಹಾಗೂ ಸ್ರೀಮತಿ ರಾಧಾ ಪ್ರಭು .ಸನಾತನ ಸಂಸ್ಥೆಯ ವತಿಯಿಂದ ಸೌ. ಲಕ್ಷ್ಮೀ ಪೈ, ಸೌ ಪ್ರತಿಮಾ ಪ್ರಭು, ಕು.ವಿಜಯಲಕ್ಷ್ಮೀ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕೃಮವನ್ನು ಪ್ರಥಮವಾಗಿ ಸನಾತನ ಸಂಸ್ಥೆಯ ಪ್ರೇರಣಾ ಸ್ಥಾನ ಪ.ಪೂ. ಭಕ್ತರಾಜ ಮಹಾರಾಜರ ಭಾವಚಿತ್ರ ಪೂಜೆಯೋಂದಿಗೆ ಅಂದರೆ ಗುರುಪೂಜೆಯೊಂದಿಗೆ ಪ್ರಾರಂಭವಾಯಿತು.ನಂತರ ಉಪಸ್ತಿತ ಸಂತರ ಸತ್ಕಾರವನ್ನು ಮಾಡಲಾಯಿತು. ಸನಾತನ ಸಂಸ್ಥೆಯು ಪ್ರಕಾಶಿಸಿದ ಆಧ್ಯಾತ್ಮ ವಿಶ್ವ ವಿಧ್ಯಾಲಯ ಈ ಗೃಂಥವನ್ನು ಉಚ್ಚ ನ್ಯಾಯಾಲಯದ ವಕೀಲರಾದ ಶ್ರೀ ಅಮೃತೇಶ ಎನ್.ಪಿ ಬಿಡುಗಡೆಮಾಡಿ ಮಾತನಾಡಿದರು. ಇಂದು ಕೇವಲ ಭೌತಿಕ ಸಾಧನೆಗೆ ಸಂಭಧಿಸಿದ ವಿಶ್ವವಿಧ್ಯಾಲಯಗಳಿವೆ ಆದರೆ ಆಧ್ಯಾತ್ಮಿಕ ಸಾಧನೆಗೆ ಸಂಭಂದಿಸಿದ ಯಾವದೇ ವಿಶ್ವವಿಧ್ಯಾಲಯ ಇಲ್ಲ.ಪ.ಪೂ.ಡಾ.ಆಠವಲೆಯವರು ಈ ವಿಶ್ವವಿಧ್ಯಾಲಯವನ್ನು ನಿರ್ಮಿಸುತ್ತಿದ್ದಾರೆ ಎಂದರು.
ಈ ಸಂಧರ್ಭದಲ್ಲಿ ಉಚ್ಚಲೋಕದಿಂದ ಪೃತ್ವಿಯಲ್ಲಿ ಜನಿಸಿದ ಮಕ್ಕಳ ಸತ್ಕಾರವನ್ನು ಮಾಡಲಾಯಿತು. ಮತ್ತು ಸಾಧನೆಯನ್ನು ಮಾಡಿ 61% ಆಧ್ಯಾತ್ಮಿಕ ಮಟ್ಟ ತಲುಪಿದ ಸಾದಕರ ಸತ್ಕಾರವನ್ನು ಈ ಸಂಧರ್ಭದಲ್ಲಿ ಮಾಡಲಾಯಿತು.
ಆಧ್ಯಾತ್ಮ ವಿಶ್ವ ವಿಧ್ಯಾಲಯದ ಸ್ವರೂಪ ಹಾಗೂ ಕಾರ್ಯದ ಬಗ್ಗೆ ಸೌ ಪ್ರತಿಮಾ ಪ್ರಭು ಇವರು ತಿಳಿಸಿದರು. ಹಿಂದೂ ವಾರ್ತಾವಾಹಿನಿಯ ಅವಶ್ಯಕತೆ ಬಗ್ಗೆ ಕು.ವಿಜಯಲಕ್ಷ್ಮೀ ಇವರು ತಿಳಿಸಿದರು.
ಇನ್ನೋರ್ವ ಅಥಿತಿಯಾದ ಶ್ರೀ ಕಿಶೋರ ಶಿರಾಡಿ ಇವರು ಕಾರ್ಯಕೃಮದಲ್ಲಿಮಾತನಾಡುತ್ತಾ ಹಿಂದೂಗಳು ಬೇರೆ ಬೇರೆ ಉಧ್ಯೋಗದಲ್ಲಿರುತ್ತಾರೆ ಅಲ್ಲಿದ್ದುಕೊಂಡು ಧರ್ಮ ಕಾರ್ಯ ಮಾಡಬಹುದು, ಆದರೆ ಧರ್ಮಶಿಕ್ಷಣದ ಅಭಾವದಿಂದಾಗಿ ಏನು ಕಾರ್ಯ ಮಾಡುವದಿಲ್ಲ ಹಾಗೂ ಮಾಡುವವರಿಗೂ ಅವರಿಂದಾದ ಸಹಾಯ ಸಹ ಮಾಡುವದಿಲ್ಲ.ದೇವಸ್ಥಾನದ ಜಾಗೆಗಳು ದಾಖಲೆಯಾಗಿರುವದಿಲ್ಲ ಅಲ್ಲಿನ ಜನರು ಹಾಗೂ ದೇವಸ್ಥಾನದ ಧರ್ಮಾಭಿಮಾನಿಗಳು,ಅಧಿಕಾರಿಗಳು ಮನಸ್ಸು ಮಡಿದರೆ ದಾಖಲೆಗಳನ್ನು ಸರಿಪಡಿಸಬಹುದು.ಅದಕ್ಕೆ ಇಚ್ಚಾ ಶಕ್ತಿಯ ಅವಶ್ಯಕತೆ ಇದೆ ಎಂದರು.
ಸನಾತನ ಸಂಸ್ಥೆಯ ಸೌ ಲಕ್ಷ್ಮೀ ಪೈ ಇವರು ಮಾತನಾಡುತ್ತಾ ಗುರುಕೃಪಾಹಿ ಕೇವಲಂ ಶಿಷ್ಯ ಪರಮ ಮಂಗಲಂ ಅಂದರೆ ಮೋಕ್ಷ ಪ್ರಾಪ್ತಿಯು ಕೇವಲ ಗುರುಕೃಪೆಯಿಂದಲೇ ಆಗುತ್ತದೆ.ಗುರುಗಳ ಮಹತ್ವವು ಹಿಂದೂ ಧರ್ಮದಲ್ಲಿ ಅಸಾಧಾರಾಣವಾಗಿದೆ.
ಇಂದು ಗುರುಗಳಿಗೆ ಕೃತಜ್ಞತೆಯನ್ನು ವ್ಯಕ್ತ ಪಡಿಸುವ ಅತ್ಯಮೂಲ್ಯ ದಿನವಾಗಿದೆ. ಧರ್ಮ ಸಂಸ್ಥಾಪನೆಯ ಐತಿಹಾಸಿಕ ಕಾರ್ಯವನ್ನು ಇಲ್ಲಿಯವರೆಗೆ ಗುರುಶಿಷ್ಯ ಪರಂಪರೆಯು ಮಾಡುತ್ತಾ ಬಂದಿದೆ. ಇಂದು ರಾಷ್ಟ್ರ ಮತ್ತು ಧಮ್ದ ಸ್ಥಿತು ಅತ್ಯಂತ ಗಂಭೀರವಾಗಿದೆ.ಸಮಾಜದಲ್ಲಿ ಇಂದು ಹೆಚ್ಚುತ್ತಿರುವ ಅರಾಜಕತೆ ಭೃಷ್ಠಾಚಾರ,ಗಲಭೆಗಳು,ಹಿಂದು ನಾಯಕರ ಹತ್ಯೆ ಮುಂತಾದ ಸಂಕಟಗಳಿಗೆ ಒಂದೇ ಪರಿಹಾರೋಪಾಯವೆಂದರೆ ಹಿಂದೂ ರಾಷ್ಟ್ರ ಸ್ಥಾಪನೆ.ಧರ್ಮಾಧಿಷ್ಟಿತ ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ಧರ್ಮ ಕ್ರಾಂತಿಯೇ ಪರ್ಯಾಯವಾಗಿದೆ ಎಂದರು.
ಈ ಸಂಧರ್ಭದಲ್ಲಿ ಆಧ್ಯಾತ್ಮಿಕಗ್ರಂಥಗಳ ಸಾತ್ವಿಕ ಉತ್ಪಾದನೆಗಳ ಹಾಗೂ ರಾಷ್ಟ್ರ ಹಾಗೂ ಧರ್ಮ ಜಾಗೃತಿಯ ಕುರಿತು ಫ್ಲೆಕ್ಸಗಳ ಪ್ರದರ್ಶನಿಯನ್ನು ಏರ್ಪಡಿಸಲಾಗಿತ್ತು.