ಮಂಗಳೂರು ಸಬ್ ಜೈಲ್ ನಲ್ಲಿ ಹಾಡುಹಗಲೇ ಸಪ್ಲೈ ಆಗುತ್ತೆ ಗಾಂಜಾ!
ಮಂಗಳೂರು: ಸಬ್ ಜೈಲ್ ಕಡಲನಗರಿಯ ಹೃದಯ ಭಾಗದಲ್ಲಿ ನಟೋರಿಯಸ್ ಕ್ರಿಮಿನಲ್ ಗಳಿರೋ ಜೈಲು.ಈ ಜೈಲಿನೊಳಗೆ ಅಕ್ರಮಗಳು ನಡೆಯುತ್ತಿರೋ ಬಗ್ಗೆ ಈ ಹಿಂದೆಯೂ ಆರೋಪಗಳಿತ್ತು. ಆದರೆ ಇದೀಗ ಆರೋಪಕ್ಕೆ ಪುಷ್ಠಿ ದೊರಕಿದೆ.ಹಾಡು ಹಾಗಲೇ ಜೈಲಿಗೆ ಹೊರಗಿನಿಂದ ಒಳಗೆ ಗಾಂಜಾ ಪೂರೈಕೆಯಾಗುತ್ತೆ.ಕಣ್ಣಿದ್ದು ಅಧಿಕಾರಿಗಳೂ ಕುರುಡಾರಾಗುತ್ತಾರೆ.ಆದರೆ ಮಂಗಳೂರಿನ ಮಾಜಿ ಮೇಯರ್ ಸಮಯಪ್ರಜ್ಞೆಯಿಂದ ಜೈಲಿನೊಳಗೆ ನಿಷೇಧಿತ ವಸ್ತು ಪೂರೈಕೆಯ ಘಟನೆ ಬೆಳಕಿಗೆ ಬಂದಿದೆ. ಅರ್ಥಾತ್ ಮಾಜಿ ಮೇಯರ್ ಎದುರುಗಡೆಯೆ ಜೈಲಿನೊಳಗೆ ನಿಷೇಧಿತ ವಸ್ತು ಪೂರೈಕೆಯಾಗಿದೆ.. ಈ ದೃಶ್ಯ ಅವರ ಕಾರಿನ ಡ್ಯಾಶ್ ಕ್ಯಾಮರದಲ್ಲಿ ಸೆರೆಯಾಗಿದೆ.
ಮಂಗಳೂರು ಮಹಾ ನಗರ ಪಾಲಿಕೆಯ ಮಾಜಿ ಮೇಯರ್ ಕವಿತಾ ಸನಿಲ್ ಕಾರಿನ ಕ್ಯಾಮರಾದಲ್ಲಿ ಸೆರೆಯಾದ ದೃಶ್ಯ. ಮಂಗಳೂರು ಸಬ್ ಜೈಲ್ ನ ಹೊರಭಾಗದ ರಸ್ತೆ ಅಂದ್ರೆ ಜೈಲ್ ರೋಡ್ ನಲ್ಲಿ ಹಾಡುಹಗಲೇ ರಸ್ತೆಯಲ್ಲಿ ಸಾರ್ವಜನಿಕರು ಓಡಾಡುವಾಗಲೇ ಯಾರೋ ಕಿಡಿಗೇಡಿಗಳು ಜೈಲಿನ ಒಳಗೆ ಎರಡು ಪೊಟ್ಟಣಗಳಲ್ಲಿ ಏನನ್ನೋ ಎಸೆದಿದ್ದಾರೆ. ಮಾಜಿ ಮೇಯರ್ ಕಾರ್ಯಕ್ರಮ ಮುಗಿಸಿ ವಾಪಸ್ ಆಗೋ ವೇಳೆ ಸ್ಕೂಟರ್ ನಲ್ಲಿ ಮುಂದೆ ಇದ್ದ ಇಬ್ಬರು ಆಗಂತುಕರು ಜೈಲಿನ ಮುಂಭಾಗ ವಾಹನ ನಿಲ್ಲಿಸಿ ಎರಡು ಪೊಟ್ಟಣವನ್ನ ಜೈಲಿನ ಒಳಗೆ ಎಸೆಡಿದ್ದಾರೆ.ಇದನ್ನ ಗಮನಿಸಿದ ಮಾಜಿ ಮೇಯರ್ ಕವಿತಾ ಸನಿಲ್ ಇಬ್ಬರು ದುಷ್ಕರ್ಮಿಗಳನ್ನ ತಮ್ಮ ಕಾರಿನಲ್ಲಿ ಬೆನ್ನಟ್ಟಿದ್ದಾರೆ. ಈ ವೇಳೆ ಮೇಯರ್ ಗಮನಕ್ಕೆ ಬಂದ ಶಾಕಿಂಗ್ ಸಂಗತಿ ಏನು ಅಂದ್ರೆ ಆ ಸ್ಕೂಟರ್ ನಂಬರ್ ಪ್ಲೇಟ್ ನಲ್ಲಿ ನಂಬರ್ ಇರಲಿಲ್ಲ.ನಂಬರ್ ಪ್ಲೇಟ್ ಬ್ಲಾಂಕ್ ಆಗಿತ್ತು.ಆದರೂ ಆಗಂತುಕರನ್ನ ಬೆಂಬಿಡದೆ ಹಿಂಬಾಲಿಸಿದ ಕವಿತಾ ಸನಿಲ್ ಕೈಯಿಂದ ದುಷ್ಕರ್ಮಿಗಳು ತಪ್ಪಿಸಿಕೊಳ್ಳುತ್ತಾರೆ.ಆದರೆ ಇಷ್ಟೊತ್ತಿಗೆ ಆ ಅಷ್ಟು ದೃಶ್ಯ ಮೇಯರ್ ಕಾರಿನ ಕ್ಯಾಮರಾದಲ್ಲಿ ಸೆರೆಯಾಗಿರುತ್ತೆ.ಇದೆ ಆಧಾರದಲ್ಲಿ ಮಂಗಳೂರು ದಕ್ಷಿಣ ಬಿಜೆಪಿ ಶಾಸಕ ವೇದವ್ಯಾಸ್ ಕಾಮತ್ ಹಾಗೂ ಇತರರಿಗೆ ಕವಿತಾ ಸನಿಲ್ ತತಕ್ಷಣ ಮಾಹಿತಿ ನೀಡುತ್ತಾರೆ. ಈ ವೇಳೆ ಶಾಸಕ ಕಾಮತ್ ಹಾಗೂ ತಂಡ ಜೈಲಿಗೆ ದೌಡಾಯಿಸಿದ್ದಾರೆ
ಸ್ಕೂಟರ್ ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಜೈಲಿನ ಒಳಗೆ ಎರಡು ಪೊಟ್ಟಣ ಎಸೆದಿದ್ದು ನಿಜವಂತೆ ಇದನ್ನ ಜೈಲಿನ ಒಳಗಿರೋ ಖೈದಿ ರಫೀಕ್ ಎಂಬಾತ ಹೆಕ್ಕಿದ್ದಾನಂತೆ. ಆದರೆ ಪರಿಶೀಲನೆ ನಡೆಸೋ ವೇಳೆ ಆ ಪೊಟ್ಟನದಲ್ಲಿ ಚಾ ಹುಡಿ ಮತ್ತು ಸಿಗರೇಟ್ ಇತ್ತಂತೆ. ಅಧಿಕಾರಿಯ ಈ ಮಾಹಿತಿ ಕೇಳುತ್ತಿದ್ದಂತೆ ಶಾಸಕ ಕಾಮತ್ ಗರಂ ಆಗಿದ್ದಾರೆ.ಒಳಗಡೆ ಖೈದಗಳಿಗೆ ನೀವು ಚಾಹದ ವ್ಯವಸ್ಥೆ ಮಾಡೋದಿಲ್ವ ಎಂದು ಕೇಳಿದ್ದಾರೆ. ಅದಕ್ಕೆ ಆಶೆಖಾನ್ ಹೇಳೋದು ಕೆಲವರಿಗೆ ನಾವು ನೀಡೋ ಚಾ ಸಾಲೋದಿಲ್ಲ ಹಾಗಾಗಿ ಹೆಚ್ಚುವರಿ ಚಾ ಕುಡಿಯಲು ಕೆಲವು ಖೈದಿಗಳು ಈ ರೀತಿ ಮಾಡುತ್ತಾರಂತೆ
ಜೈಲಿನ ಮುಖ್ಯ ಅಧಿಕಾರಿ ನೀಡಿದ ಮಾಹಿತಿಯಿಂದ ಬಿಜೆಪಿ ಶಾಸಕ ವೇದವ್ಯಾಸ್ ಕಾಮತ್ ಗರಂ ಆಗಿದ್ದಾರೆ.ಇದು ರಾಜ್ಯ ಸರಕಾರ, ಗೃಹ ಇಲಾಖೆ ಹಾಗೂ ಬಂಧಿಖಾನೆ ಇಲಾಖೆಯ ವೈಫಲ್ಯತೆಗೆ ಸಾಕ್ಷಿ ಎಂದು ಕಿಡಿ ಕಾರಿದ್ದಾರೆ. ಶೀಘ್ರ ನಿಷೇಧಿತ ವಸ್ತು ಎಸೆದವರನ್ನ ಪತ್ತೆ ಹಚ್ಚುವಂತೆ ಪೊಲೀಸ್ ಇಲಾಖೆಗೆ ಆಗ್ರಹಿಸಿದ್ದಾರೆ.
ಕಾರಿನ ಡ್ಯಾಶ್ ಕ್ಯಾಮರಾದಲ್ಲಿ ಸೆರೆಯಾದ ದೃಶ್ಯಕ್ಕೂ ಜೈಲಿನ ಹಿರಿಯ ಅಧಿಕಾರಿಗಳು ನೀಡುತ್ತಿರೋ ಸಬುಬಿಗೂ ತಾಳೆಯಾಗುತ್ತಿಲ್ಲ. ಕೇವಲ ಚಾ ಹುಡಿ ಎಸೆಯೋದಕ್ಕೆ ಇಷ್ಟೆಲ್ಲಾ ಸರ್ಕಸ್ ಮಾಡುತ್ತಾರ. ಅತ್ತಿಂದ ನಿಷೇಧಿತ ವಸ್ತು ಪೂರೈಕೆಯಾಗುತ್ತಲೇ ಜೈಲಿನ ಒಳಗಿರೋ ಖೈದಿ ಅದನ್ನ ಹೆಕ್ಕುತ್ತಾನೆ ಎಂದ್ರೆ ಈತನಿಗೆ ಮಾಹಿತಿ ನೀಡಿದ್ದು ಯಾರು? ಜೈಲಿನ ಸಿಬ್ಬಂದಿಗಳು ಇದರಲ್ಲಿ ಪಾಲು ಪಡೆದಿದ್ದಾರೆ ಅನ್ನೋ ಅನುಮಾನ ದಟ್ಟವಾಗಿ ಕಾಡುತ್ತಿದೆ. ಈಗಾಗಲೇ ಜೈಲಾಧಿಕಾರಿಗಳು ಬರ್ಕೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.ಮುಂದೇನಾಗುತ್ತೆ ಎಂದು ಕಾದು ನೋಡಬೇಕಿದೆ