ಮಂಗಳೂರು: ಸಹ್ಯಾದ್ರಿ ಕಾಲೇಜಿನ 14ನೇ ಪದವಿ ಪ್ರಧಾನ ಸಮಾರಂಭ
ಮಂಗಳೂರು: ನಗರದ ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ ಮತ್ತು ಮ್ಯಾನೇಜ್ಮೆಂಟ್ ನ 14ನೇ ಪದವಿ ಪ್ರಧಾನ ಸಮಾರಂಭವು ಇತ್ತೀಚೆಗೆ ಅದ್ದೂರಿಯಾಗಿ ನಡೆಯಿತು.
ಒಟ್ಟು 174 ಎಂಬಿಎ ವಿದ್ಯಾರ್ಥಿಗಳು, ಮೂರು ಎಂಟಿಕ್ ವಿದ್ಯಾರ್ಥಿಗಳು ಹಾಗೂ ಐದು ಪಿಎಚ್ ಡಿ ವಿದ್ಯಾರ್ಥಿಗಳು ಈ ಸಮಾರಂಭದಲ್ಲಿ ಪದವಿಯನ್ನು ಪಡೆದರು.
ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಡಾ. ಟಿ ಎನ್ ನಾಗಭೂಷಣ್, ಉಪಕುಲಾಪತಿಗಳು ಕಿಸ್ಕಿಂದ ಯುನಿವರ್ಸಿಟಿ, ಇವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಕಲಿಕೆಯೊಂದಿಗೆ ತಾಂತ್ರಿಕ ಪ್ರಗತಿ ಅಗತ್ಯತೆಯನ್ನು ವಿವರಿಸಿದರು. ಇನ್ನೋರ್ವ ಅತಿಥಿ ಶ್ರೀಮತಿ ಉಮಾ ಎ., ಹೆಡ್ ಆಫ್ ಪೇ ರೋಲ್ ಹಾಗೂ ಏಕೀಕೃತ ಮತ್ತು ಸಾಗರೋತ್ತರ ಹಣಕಾಸು ವರದಿ, ICICI ಬ್ಯಾಂಕ್ ಲಿಮಿಟೆಡ್, ಮುಂಬೈ ಮಾತನಾಡಿ ನಿರಂತರ ಕಲಿಕೆಯು ವೃತ್ತಿ ಯಶಸ್ಸಿನ ಅಡಿಪಾಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಡಾ.ಎಸ್ ಎಸ್ ಇಂಜಗನೇರಿ, ರಿಸರ್ಚ್ ಡೈರೆಕ್ಟರ್ ಡಾ.ಮಂಜಪ್ಪ, ಎಂಬಿಏ ಡೈರೆಕ್ಟರ್ ಡಾ. ವಿಶಾಲ್ ಸಮರ್ಥ ಹಾಗೂ ಕಂಪ್ಯೂಟರ್ ಸೈನ್ಸ್ ಮುಖ್ಯಸ್ಥರು ಡಾ. ಮುಸ್ತಫಾ ಬಸ್ತಿಕೋಡಿ ಅವರು ಹಾಜರಿದ್ದರು. ಎಂಬಿಎ ಪದವಿಯಲ್ಲಿ ಸಂಜನಾ ಅವರು ಪ್ರಥಮ ರ್ಯಾಂಕಿನೊಂದಿಗೆ ಬಂಗಾರದ ಪದಕ ಪಡೆದರೆ ದೀಪ ಬಾಳಿಗಾ ಲಿಯೋ ಲಿಯೋನ ಮೆಲಿಸಾ ಕಾರ್ಡೋಜಾ ದ್ವಿತೀಯ ಹಾಗೂ ತೃತೀಯ ರಾಂಕ್ ಪಡೆದರು. ಇದರೊಂದಿಗೆ ಇತ್ತೀಚೆಗೆ ವ ಶ್ವೇಶ್ವರಯ್ಯ ವಿಶ್ವವಿದ್ಯಾನಿಲಯದಿಂದ ಪಿಎಚ್ಡಿ ಪಡೆದ ಡಾ. ಸುಷ್ಮಾ ಎಂಬಿಎ ವಿಭಾಗ, ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಡಾ.ರಿತೇಶ್ ಪಕ್ಕಳ, ಡಾ.ಪ್ರಖ್ಯಾತ ರೈ ಡಾ. ಮೇಲ್ವಿನ್ ಡಿಸೋಜಾ ಹಾಗೂ ಡಾ. ರೋಹನ್ ಡೆನ್ ಸಲಿನ್ಸ್ ಇವರನ್ನು ಸನ್ಮಾನಿಸಲಾಯಿತು.