ಮಂಗಳೂರು: ಸಿಗರೇಟು, ತಂಬಾಕು ಮಾರಾಟಕ್ಕೆ ಪ್ರತ್ಯೇಕ ಲೈಸನ್ಸ್ ಪಡೆಯಲು ಸೂಚನೆ

Spread the love

ಮಂಗಳೂರು: ಸಿಗರೇಟು, ತಂಬಾಕು ಮಾರಾಟಕ್ಕೆ ಪ್ರತ್ಯೇಕ ಲೈಸನ್ಸ್ ಪಡೆಯಲು ಸೂಚನೆ

ಮಂಗಳೂರು: ಪುತ್ತೂರು ನಗರಸಭಾ ವ್ಯಾಪ್ತಿಯಲ್ಲಿನ ವರ್ತಕರಿಗೆ, ಉದ್ಯಮಗಳಿಗೆ ನಗರಸಭಾ ವ್ಯಾಪ್ತಿಯಲ್ಲಿ ಯಾವುದೇ ಉದ್ಯಮ ನಡೆಸುತ್ತಿರುವ ಉದ್ದಿಮೆದಾರರು ತಮ್ಮ ಉದ್ಯಮದ ಜೊತೆಗೆ ತಂಬಾಕು ಮತ್ತು ಅದರ ಉತ್ಪನ್ನಗಳ ಮಾರಾಟ ಮಾಡುತ್ತಿದ್ದಲ್ಲಿ, ಈಗಾಗಲೇ ಚಾಲ್ತಿಯಲ್ಲಿರುವ ಉದ್ದಿಮೆ ಪರವಾನಿಗೆ ಜೊತೆಗೆ ತಂಬಾಕು ಮಾರಾಟದ ಬಗ್ಗೆ ಪ್ರತ್ಯೇಕ ಪರವಾನಿಗೆಯನ್ನು ಪಡೆಯುವಂತೆ ಸೂಚಿಸಲಾಗಿದೆ.

ಎಲ್ಲಾ ವರ್ತಕರು ತಮ್ಮ ಉದ್ದಿಮೆ ಪರವಾನಿಗೆಯನ್ನು ಮುಂದಿನ ಸಾಲಿಗೆ ನವೀಕರಿಸುವ ಸಂದರ್ಭ ತಂಬಾಕು ಮಾರಾಟ ಮಾಡುತ್ತಿರುವ ಬಗ್ಗೆ ನಗರಸಭಾ ಕಛೇರಿಗೆ ಮಾಹಿತಿ ನೀಡಿ ಪ್ರತ್ಯೇಕ ಪರವಾನಿಗೆಯನ್ನು ಪಡೆಯಬೇಕು. ತಪ್ಪಿದಲ್ಲಿ ಸ್ಥಳ ಪರಿಶೀಲನೆ ಸಂದರ್ಭದಲ್ಲಿ ತಂಬಾಕು ಉತ್ಪನ್ನಗಳ ಶೇಖರಣೆ ಮತ್ತು ಮಾರಾಟ ಕಂಡು ಬಂದಲ್ಲಿ ಯಾವುದೇ ಮುನ್ಸೂಚನೆ ನೀಡದೆ ಉದ್ದಿಮೆಯನ್ನು ದಂಡ ಸಹಿತ ಸ್ಥಗಿತಗೊಳಿಸಿ ಕಾನೂನು ಕ್ರಮವನ್ನು ಕೈಗೊಳ್ಳಲಾಗುತ್ತದೆ.

ಸಿಗರೇಟು ಮತ್ತು ಇತರ ತಂಬಾಕು ಉತ್ಪನ್ನಗಳ (ಜಾಹೀರಾತು, ನಿμÉೀಧ ಮತ್ತು ವ್ಯಾಪಾರ ಮತ್ತು ವಾಣಿಜ್ಯ ಉತ್ಪಾದನೆ, ಸರಬರಾಜು ಮತ್ತು ವಿತರಣೆ ವಿನಿಮಯ) ಅಧಿನಿಯಮ 2003 ರಲ್ಲಿ ಉಲ್ಲೇಖಿಸಿರುವ ಸಾಮಾನ್ಯ ಅಂಶಗಳಂತೆ, ಅಧಿನಿಯಮದ ಕಲಂ (4) ರಂತೆ ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ವ್ಯಕ್ತಿಯು ಯಾವುದೇ ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಮಾಡತಕ್ಕದ್ದಲ್ಲ. ಇದನ್ನು ಉಲ್ಲಂಘಿಸುವ ಯಾರೇ ವ್ಯಕ್ತಿಯು 100 ರೂಪಾಯಿವರೆಗೆ ವಿಸ್ತರಿಸಬಹುದಾದ ದಂಡನೆಗೆ ಗುರಿಪಡಿಸಲಾಗುವುದು. ಕಲಂ ಸಂಖ್ಯೆ (6) ರಂತೆ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಯಾರೇ ವ್ಯಕ್ತಿಗೆ ಮತ್ತು ಯಾವುದೇ ಶಿಕ್ಷಣ ಸಂಸ್ಥೆಯ 100 ಅಡಿ ಅಂತರದೊಳಗಿನ ಪ್ರದೇಶದಲ್ಲಿ ಯಾವುದೇ ಪ್ರದೇಶದಲ್ಲಿ ಯಾವುದೇ ಸಿಗರೇಟು ಅಥವಾ ಅದರ ಉತ್ಪನ್ನಗಳ ಮಾರಾಟವನ್ನು ದಾಸ್ತಾನು ಇಡತಕ್ಕದ್ದಲ್ಲ. ಅಥವಾ ಅದಕ್ಕೆ ಅನುಮತಿ ನೀಡತಕ್ಕದ್ದಲ್ಲ. ಇದರ ಉಲ್ಲಂಘನೆಯಾದಲ್ಲಿ ಯಾರೇ ವ್ಯಕ್ತಿಯೂ ಎರಡು ನೂರು ರೂಪಾಯಿಗಳವರೆಗೆ ವಿಸ್ತರಿಸಬಹುದಾದ ದಂಡನೆಗೆ ಗುರಿಪಡಿಸಿ ಸಂಬಂಧಪಟ್ಟ ಉದ್ದಿಮೆದಾರರಿಗೆ ವಿರುದ್ಧ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪುತ್ತೂರು ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಲಾಗಿದೆ.


Spread the love
Subscribe
Notify of

0 Comments
Inline Feedbacks
View all comments