ಮಂಗಳೂರು ಸ್ವಚ್ಛತೆ: ರಾಮಕೃಷ್ಣ ಮಿಷನ್‍ ಜತೆ ಕೈ ಜೋಡಿಸಿದ ಎಂಪಿಎಲ್ ತಂಡಗಳು

Spread the love

ಮಂಗಳೂರು ಸ್ವಚ್ಛತೆ: ರಾಮಕೃಷ್ಣ ಮಿಷನ್‍ ಜತೆ ಕೈ ಜೋಡಿಸಿದ ಎಂಪಿಎಲ್ ತಂಡಗಳು

ಮಂಗಳೂರು: ರಾಮಕೃಷ್ಣ ಮಿಷನ್ ಮಂಗಳೂರಿನಲ್ಲಿ ನಡೆಸುತ್ತಿರುವ ಸ್ವಚ್ಛತಾ ಅಭಿಯಾನದ ಹತ್ತೊಂಭತ್ತನೆಯ ದಿನದ ಕಾರ್ಯಕ್ರಮದಲ್ಲಿ ಮಂಗಳೂರು ಪ್ರೀಮಿಯರ್ ಲೀಗ್‍ಕ್ರಿಕೆಟ್ ಪಂದ್ಯಾಟದ ಅಯೋಜಕರು ಮತ್ತು ವಿವಿಧ ತಂಡಗಳ ಮಾಲೀಕರು ಮತ್ತು ಆಟಗಾರರು ರಾಮಕೃಷ್ಣ ಮಿಷನ್ ಜತೆಗೂಡಿ ಸ್ವಚ್ಛತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ಮಂಗಳೂರು ಬಂದರ ಪೊಲೀಸ್ ಠಾಣೆಯ ಸುತ್ತಮುತ್ತಲ ಪ್ರದೇಶದಲ್ಲಿ ತುಂಬಿದ್ದ ಕಸದ ರಾಶಿಯನ್ನು ಜತೆಗೂಡಿದ ನೂರಾರು ಮಂದಿ ಸ್ವಯಂಸೇವಕರು ಜೆ ಸಿ ಬಿ , ಲಾರಿಗಳ ಸಹಾಯದಿಂದ ದೂರ ಸಾಗಿಸಿ ಆ ಪ್ರದೇಶವನ್ನು ಸ್ವಚ್ಛಗೊಳಿಸಿದರು. ಮುಂಜಾನೆ 7 ಗಂಟೆಗೆ ಆರಂಭವಾದ ಸ್ವಚ್ಛತಾ ಕಾರ್ಯಕ್ರಮವು ಬೆಳಿಗ್ಗೆ 10.00 ಗಂಟೆಯವರೆಗೆ ಮುಂದುವರಿದಿತ್ತು. ಹಲವಾರು ದಶಕಗಳಿಂದ ಬಣ್ಣವನ್ನೇ ಕಾಣದ ಬಂದರು ಠಾಣೆಯಆವರಣ ಗೋಡೆಗಳನ್ನು ಶುಚಿಗೊಳಿಸಿ ಬಣ್ಣ ಬಳಿದು ಸುಂದರ ಗೊಳಿಸಲಾಯಿತು. ಕಾರ್ಯಕ್ರಮಕ್ಕೆ ಚಾಲನೆ ನೀಡಿದ ರಾಮಕೃಷ್ಣ ಮಿಷನಿನ ಸ್ವಾಮೀಜಿಗಳು ನಾವು ಪರಿಸರದ ಕಸವನ್ನು ಶುಚಿಗೊಳಿಸುವಂತೆಯೇ ನಮ್ಮ ಮನದಲ್ಲಿ ತುಂಬಿರಬಹುದಾದ ದ್ವೇಷ, ಮತ್ಸರ, ಕ್ರೋಧ ಮುಂತಾದ ಕಸಗಳನ್ನು ಸಹ ಶುಚಿಗೊಳಿಸಿ ನಮ್ಮೆಲ್ಲರ ಮನಗಳನ್ನು ಶುಭ್ರವಾಗಿರಿಸಿದರೆ, ಪೂರ್ಣ ಸಮಾಜವೇ ಶುಭ್ರವಾಗಿ ಶಾಂತಿಯ ನೆಲೆವೀಡಾಗುವುದು ಎಂದರು.

ಕ್ಯಾಪ್ಟನ್ ಗಣೇಶ್ ಕಾರ್ಣಿಕ್‍ರವರು ಕಾರ್ಯಕ್ರಮದ ನಾಯಕತ್ವ ವಹಿಸಿ ಸ್ವತ:ಹ ಶುಚಿತ್ವ ಕಾರ್ಯಕ್ರಮದಲ್ಲಿ ತೊಡಗಿ ಯುವಕರಿಗೆ ಸ್ಪೂರ್ತಿಯನ್ನು ಒದಗಿಸಿದರು.


Spread the love