ಮಂಗಳೂರು : ಹಾಲು ಉತ್ಪಾದಕರಿಗೆ ಪ್ರೋತ್ಸಾಹಧನ ಬಿಡುಗಡೆ

Spread the love

ಮಂಗಳೂರು : ಹಾಲು ಉತ್ಪಾದಕರಿಗೆ ಪ್ರೋತ್ಸಾಹಧನ ಬಿಡುಗಡೆ

ಮಂಗಳೂರು : ಕರ್ನಾಟಕ ಸರ್ಕಾರವು ಹಾಲು ಉತ್ಪಾದಕರಿಗೆ ನೀಡುವ ಪ್ರೋತ್ಸಾಹಧನದ ವಿವರಗಳನ್ನು ಡಿಬಿಟಿ ಕ್ಷೀರಸಿರಿ ತಂತ್ರಾಂಶದಲ್ಲಿ ಅಳವಡಿಸಿ ನೇರವಾಗಿ ಖಜಾನೆ-2 ದಿಂದ ಪಾವತಿಸುವ ಪದ್ಧತಿಯನ್ನು ಅನುಸರಿಸುತ್ತಿದ್ದು, ಎಪ್ರಿಲ್ ಮತ್ತು ಮೇ 2019 ರ ಮಾಹೆಯ ಪ್ರೋತ್ಸಾಹಧನವನ್ನು ಬಿಡುಗಡೆ ಮಾಡಲಾಗಿರುತ್ತದೆ. ಇದರಲ್ಲಿ ಶೇ.92 ರಷ್ಟು ಹೈನುಗಾರರ ಆಧಾರ್ ಲಿಂಕ್ಡ್ ಬ್ಯಾಂಕ್ ಖಾತೆಗೆ ನೇರವಾಗಿ ಪಾವತಿಯಾಗಿದ್ದು ಉಳಿದ ಶೇ.8 ರಷ್ಟು ಪ್ರೋತ್ಸಾಹಧನವು ಹೈನುಗಾರರ ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆಯಾಗದೇ, ಆಧಾರ್‍ನಲ್ಲಿರವ ಹೆಸರು ಮತ್ತು ಬ್ಯಾಂಕ್ ಉಳಿತಾಯ ಖಾತೆಯಲ್ಲಿರುವ ಹೆಸರು ಹೊಂದಾಣಿಕೆಯಾಗದೇ ಹಾಗೂ ಬ್ಯಾಂಕ್ ಖಾತೆಗಳು ಊರ್ಜಿತವಾಗಿಲ್ಲದ ಕಾರಣ ಹಣ ಪಾವತಿಯಾಗದೆ ಉಳಿದಿರುತ್ತದೆ.

ಕರ್ನಾಟಕ ಸರ್ಕಾರವು ಸದರಿ ಪ್ರೋತ್ಸಾಹಧನವನ್ನು ಪಶುಪಾಲನಾ ಇಲಾಖೆಯ ಹಾಗೂ ಖಜಾನೆ-2 ಮುಖಾಂತರ ಕ್ಷೀರಸಿರಿ ತಂತ್ರಜ್ಞಾನದಲ್ಲಿ ಸಂಘದವರು ನೀಡಿರುವ ಮಾಹಿತಿಯ ಆಧಾರದಲ್ಲಿ ದಾಖಲಿಸಿದ ಜೂನ್, ಜುಲೈ ಮತ್ತು ಆಗಸ್ಟ್ 2019 ರ ಮಾಹೆಗಳ ಹೈನುಗಾರರ ಹಾಲಿನ ವಿವರಗಳನ್ನು ಈಗಾಗಲೇ ಕಳುಹಿಸಲಾಗಿದ್ದು, ಸದ್ಯದಲ್ಲಿಯೇ ಹಣ ಪಾವತಿಯಾಗಲು ಕ್ರಮಕೈಗೊಳ್ಳಲಾಗುತ್ತಿದೆ.

ಹಾಲಿನ ಪ್ರೋತ್ಸಾಹಧನ ಪಾವತಿಯಾಗದೇ ಉಳಿದಿರುವ ಹೈನುಗಾರರು, ಈ ಬಗ್ಗೆ ಮಾಹಿತಿಯನ್ನು ಸಂಘದ ಕಾರ್ಯದರ್ಶಿಯವರಿಂದ ಪಡೆಯಬಹುದಾಗಿರುತ್ತದೆ. ಮೇಲೆ ತಿಳಿಸಿರುವ ದೋಷಗಳನ್ನು ಹೈನುಗಾರರು ಸರಿಪಡಿಸಿದಲ್ಲಿ ಸದರಿ ಪ್ರೋತ್ಸಾಹಧನವು ಹೈನುಗಾರರ ಖಾತೆಗೆ ಪಾವತಿಯಾಗುತ್ತದೆ ಮತ್ತು ಸರ್ಕಾರವು ನೀಡುತ್ತಿರುವ ಪ್ರೋತ್ಸಾಹಧನವನ್ನು ಹೈನುಗಾರರು ಪಡೆದುಕೊಂಡು ಉತ್ತಮ ಗುಣಮಟ್ಟದ ಹಾಲನ್ನು ಸಂಘಗಳಿಗೆ ನೀಡಲು ದ.ಕ. ಹಾಲು ಒಕ್ಕೂಟದ ಅಧ್ಯಕ್ಷ ರವಿರಾಜ್ ಹೆಗ್ಡೆ ಇವರ ಪ್ರಕಟಣೆ ತಿಳಿಸಿದೆ.


Spread the love