ಮಂಗಳೂರು: ಹಾಲು ಕರೆಯುವ ಸ್ಪರ್ಧೆ: ಅರ್ಜಿ ಆಹ್ವಾನ
ಮಂಗಳೂರು: 2024-25ನೇ ಸಾಲಿನಲ್ಲಿ ಮಂಗಳೂರು ತಾಲೂಕಿನ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಹಾಗೂ ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಜಂಟಿ ಆಶ್ರಯದಲ್ಲಿ ನಡೆಯುವ ಜಾನುವಾರುಗಳಲ್ಲಿ ಹಾಲು ಕರೆಯುವ ಸ್ಪರ್ಧೆಗೆ ಅರ್ಜಿ ಆಹ್ವಾನಿಸಲಾಗಿದೆ.
ತಾಲ್ಲೂಕಿನ ಆಸಕ್ತ ರೈತ ಭಾಂದವರು ಅತಿ ಹೆಚ್ಚು ಹಾಲು ಹಿಂಡುವ (ಪ್ರತಿ ದಿನಕ್ಕೆ 15 ಲೀ ಹಾಲು ಮತ್ತು ಮೇಲ್ಪಟ್ಟ) ಹಸುಗಳನ್ನು ಜನವರಿ 26 ರ ಒಳಗೆ ನೋಂದಾಯಿಸಬೇಕು. ಇಲಾಖೆಯಿಂದ ನಿಯೋಜಿಸಿದ ಆಯ್ಕೆ ಸಮಿತಿಯ ಮುಂದೆ ಹಸುವಿನ ಹಾಲನ್ನು ಕರೆದು, ಅಳತೆ ಮಾಡಿಸಲು ಒಪ್ಪಿಗೆ ನೀಡಬೇಕು. ಸ್ಪರ್ಧೆಯಲ್ಲಿ ಬಹುಮಾನ ಪಡೆದರೆ, ಕಾರ್ಯಕ್ರಮಕ್ಕೆ ಹಸುವನ್ನು ಸ್ವತಃ ಕರೆದುಕೊಂಡು ಬರಲು ಒಪ್ಪಿಗೆ ನೀಡಬೇಕಾಗಿ ರೈತ ಭಾಂದವರಲ್ಲಿ ತಿಳಿಸಿದೆ.
ನೋಂದಣಿ ಹಾಗೂ ಹೆಚ್ಚಿನ ಮಾಹಿತಿಗೆ ಡಾ.ವೆಂಕಟೇಶ್ ಎಸ್.ಎಂ ದೂ.ಸಂ: 9632550628, ಡಾ. ಅಶೋಕ್ ಕೆ.ಆರ್ ದೂ.ಸಂ 9243306956, ಡಾ. ರೇಖಾ ಎಂ.ಟಿ ದೂ.ಸಂ 9243306957 ಸಂಪರ್ಕಿಸಬಹುದು ಎಂದು ಮಂಗಳೂರು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಮುಖ್ಯ ಪಶುವೈದ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.