ಮಂಗಳೂರು ಹಿಲ್ ಸೆಂಟರ್ ಕಚೇರಿ ಕಳ್ಳತನ ಇಬ್ಬರ ಬಂಧನ

Spread the love

ಮಂಗಳೂರು ಹಿಲ್ ಸೆಂಟರ್ ಕಚೇರಿ ಕಳ್ಳತನ ಇಬ್ಬರ ಬಂಧನ
ಮಂಗಳೂರು: ಮಂಗಳೂರು ಹಿಲ್ ಸೆಂಟರ್ ಕಚೇರಿಯ ಕಳ್ಳತನಕ್ಕೆ ಸಂಬಂಧೀಸಿ ಕಂಕನಾಡಿ ಪೋಲಿಸರು ಇಬ್ಬರು ವ್ಯಕ್ತಿಗಳನ್ನು ಬಂಧಿಸಿದ್ದಾರೆ.

ಬಂಧಿತರನ್ನು ಅಸ್ಸಾಂ ರಾಜ್ಯದ ರಂಜನ್ ಕಲಿಟಾ ಮತ್ತು ಶಿವಶಂಕರ್ ದಾಸ ಎಂದು ಗುರುತಿಸಲಾಗಿದೆ,

ಬಂಧಿತರಿಂದ ಪೋಲಿಸರು ಕಳವು ಮಾಡಿದ ನಾಲ್ಕು ಲ್ಯಾಪ್ ಟಾಪ್, ಐದು ಐಪ್ಯಾಡ್, ಒಂದು ಕ್ಯಾಮರಾ, ಒಂದು ವಾಚ್ ಸೇರಿದಂತೆ ರೂ 2,87,500 ಮೊತ್ತದ ಸೊತ್ತನ್ನು ವಶಪಡಿಸಿಕೊಂಡಿದ್ದಾರೆ.

ನಗರ ಪೋಲಿಸ್ ಆಯುಕ್ತ ಚಂದ್ರಶೇಖರ್, ಉಪ ಆಯುಕ್ತರಾದ ಶಾಂತರಾಜು, ಸಂಜೀವ ಪಾಟೀಲ್, ಇವರು ಮಾರ್ಗದರ್ಶನದಲ್ಲಿ ಕಂಕನಾಡಿ ನಗರ ಪೋಲಿಸ್ ಆಯುಕ್ತರಾದ ರವಿನಾಯ್ಕ, ಶಂಕರ್ ಪಾಟಾಳಿ, ಗಿಲ್ಬರ್ಟ್, ಹಾಗೂ ಇತರರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದಾರೆ.

ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಿದ್ದು, ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ತನಿಖೆಯ ಹಂತದಲ್ಲಿದೆ.


Spread the love