ಮಂಗಳೂರು: ಹೆದ್ದಾರಿ ಸಮಸ್ಯೆಗಳ ನಿರ್ವಹಣೆಗೆ ಕಂಟ್ರೋಲ್ ರೂಮ್

Spread the love

ಮಂಗಳೂರು: ಹೆದ್ದಾರಿ ಸಮಸ್ಯೆಗಳ ನಿರ್ವಹಣೆಗೆ ಕಂಟ್ರೋಲ್ ರೂಮ್

ಮಂಗಳೂರು: ಬೆಳ್ತಂಗಡಿ ತಾಲೂಕು ಪುಂಜಾಲಕಟ್ಟೆಯಿಂದ ಚಾರ್ಮಾಡಿ ವರೆಗಿನ ಎನ್.ಹೆಚ್. 73 ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿ ಪರಿಶೀಲನೆ ಮತ್ತು ಮಳೆಗಾಲದ ಸಮಯ ಉಂಟಾಗುವ ತೊಂದರೆಗಳ ಬಗ್ಗೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ಅವರು ಜೂನ್ 12 ರಂದು ವೀಕ್ಷಣೆ ನಡೆಸಿ, ಕೂಡಲೇ ಸಮಸ್ಯೆಗಳ ಪರಿಹಾರಕ್ಕೆ ಸೂಚಿಸಿದ್ದರು.

ಅದರಂತೆ ವಿವಿಧ 21 ಕಡೆಗಳಲ್ಲಿ ಸೂಕ್ತವಾದ ದುರಸ್ತಿ ಕಾರ್ಯವನ್ನು ರಾಷ್ಟ್ರೀಯ ಹೆದ್ದಾರಿ ಇಲಾಖೆ ನಿವ೯ಹಿಸಿದೆ. ರಸ್ತೆ ಬದಿಯಲ್ಲಿ ಮಳೆ ನೀರು ಸರಾಗವಾಗಿ ಹರಿದು ಹೋಗಲು ಚರಂಡಿಗಳನ್ನು ನಿರ್ಮಿಸಲಾಗಿದ್ದು, ರಸ್ತೆ ಸಂಚಾರ ಸುಗಮವಾಗುವಂತೆ ಹಾಗೂ ಶಾಲಾ ವಠಾರ, ಬಸ್ಸು ನಿಲ್ದಾಣಗಳ ಬಳಿ ಕೆಸರು ನಿಲ್ಲದಂತೆ ಕ್ರಮವಹಿಸಲಾಗಿದೆ.

ಈ ಹೆದ್ದಾರಿ ಕಾಮಗಾರಿಗಳ ನಿರ್ವಹಣೆ ಬಗ್ಗೆ ಸಾರ್ವಜನಿಕರು ಇನ್ನೂ ಯಾವುದೇ ಸಮಸ್ಯೆಗಳು ಎದುರಿಸುತ್ತಿದ್ದರೆ ಅಥವಾ ಸಂಚಾರದಲ್ಲಿ ಸಮಸ್ಯೆ ಉಂಟಾಗುತ್ತಿದ್ದರೆ ಜಿಲ್ಲಾಧಿಕಾರಿಗಳ ಕಚೇರಿ ಕಂಟ್ರೋಲ್ ರೂಂ ಸಂಖ್ಯೆ: 0824-2220588 ಸಂಪರ್ಕಿಸುವಂತೆ ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.


Spread the love