ಮಕ್ಕಾ: ಜಿಲ್ಲೆಯ ವಿದ್ವಾಂಸರಿಂದ ದೇಶದ ಶಾಂತಿ ಸಮೃದ್ಧಿಗಾಗಿ ವಿಶೇಷ ಪ್ರಾರ್ಥನೆ ಹಾಗೂ ಹಜ್ಜಾಜುಗಳಿಗೆ ಬೀಳ್ಕೊಡುಗೆ 

Spread the love

ಮಕ್ಕಾ: ಜಿಲ್ಲೆಯ ವಿದ್ವಾಂಸರಿಂದ ದೇಶದ ಶಾಂತಿ ಸಮೃದ್ಧಿಗಾಗಿ ವಿಶೇಷ ಪ್ರಾರ್ಥನೆ ಹಾಗೂ ಹಜ್ಜಾಜುಗಳಿಗೆ ಬೀಳ್ಕೊಡುಗೆ 

ಅ; 29 ದಕ್ಷಿಣ ಕನ್ನಡ ಜಿಲ್ಲೆಯಿಂದ ಹಜ್ಜ್ ಯಾತ್ರೆ ಮುಗಿಸಿ ಊರಿಗೆ ಹಿಂದಿರುಗುತ್ತಿರುವ ಸಮಸ್ತ ವಿದ್ವಾಂಸರಿಂದ ದೇಶದ ಜನತೆಯ ಏಳಿಗೆಗಾಗಿ ವಿಶೇಷ ಪ್ರಾರ್ಥನಾ ಸಂಗಮ ಮತ್ತು ಸನ್ಮಾನ ಹಾಗೂ ಹಜ್ಜಾಜುಗಳಿಗೆ ಬೀಳ್ಕೊಡುಗೆ ಕಾರ್ಯಕ್ರಮ ಮಕ್ಕಾ ಹರಮ್ ಶರೀಫಿನಲ್ಲಿ ನಡೆಯಿತು.ಮಕ್ಕತುಲ್ ಮುಕರ್ರಮ ಎಸ್ ಕೆ ಎಸ್ ಎಸ್ ಎಫ್ ಸಮಿತಿ ಮತ್ತು ದಾರುನ್ನೂರ್ ಎಜುಕೇಶನ್ ಸೆಂಟರ್ ಮಕ್ಕಾ ಸಮಿತಿ ಜಂಟಿಯಾಗಿ ಆಯೋಜಿಸಿದ ಕಾರ್ಯಕ್ರಮವು ಬಹಳ ವಿಜ್ರಂಭನೆಯಿಂದ ಜರಗಿತು.

ಲಕ್ಷಾಂತರ ಜನ ಸೇರಿದ ಹಜ್ಜ್ ಸಂದರ್ಭದಲ್ಲಿ ವಿವಿಧ ದೇಶಗಳಿಂದ ಬಂದ ಎಲ್ಲರಿಗೂ ಅತ್ಯುತ್ತಮ ಸೇವೆಗೈದ ಎಲ್ಲರ ಪ್ರಶಂಶೆಗೆ ಪಾತ್ರರಾದ ಭಾರತೀಯ ಸ್ವಯಂ ಸೇವಕರನ್ನು ಮತ್ತು ಹಜ್ಜ್ ವೇಳೆಯಲ್ಲಿ ಸ್ವಯಂ ಸೇವಕರಾಗಿ ದುಡಿದ ಸುಮಾರು ಆರುನೂರರಷ್ಟು ಬರುವ ಎಸ್ಕೆ ಎಸ್ ಎಸ್ ಎಫ್ ವಿಖಾಯ ಟೀಮಿನ ಕಾರ್ಯ ವೈಖರಿಯನ್ನು ಮುಕ್ತಕಂಠದಿಂದ ಪ್ರಶಂಶಿಸಲಾಯಿತು.

ಕಾರ್ಯಕ್ರಮ ದ ಅಧ್ಯಕ್ಷ ತೆಯನ್ನು ಮಕ್ಕತುಲ್ ಮುಕರ್ರಮ ಎಸ್ಕೆ ಎಸ್ ಎಸ್ ಎಫ್ ಅಧ್ಯಕ್ಷರಾದ ಬಾಯಾರ್ ಉಸ್ಮಾನ್ ಹಾಜಿ ವಹಿಸಿದ್ದರು.ಕಾರ್ಯಕ್ರಮವು ಮಕ್ಕತುಲ್ ಮುಕರ್ರಮ ಎಸ್ಕೆ ಎಸ್ ಎಸ್ ಎಫ್ ಪ್ರಧಾನ ಕಾರ್ಯದರ್ಶಿ ಹಮೀದ್ ಹಾಜಿ ವಿಟ್ಲ ಹಾಗೂ ದಾರುನ್ನೂರ್ ಎಜುಕೇಶನ್ ಸೆಂಟರ್ ಮಕ್ಕಾ ಸಮಿತಿ ಅಧ್ಯಕ್ಷರಾದ ಅಕ್ಬರ್ ಉಪ್ಪಿನಂಗಡಿ ಯವರ ನೇತೃತ್ವ ವದಲ್ಲಿ ಜರಗಿತು.

ಕರ್ನಾಟಕ ಜಂಇಯ್ಯತುಲ್ ಉಲಮಾ ಮುಶಾವರ ಕಾರ್ಯದರ್ಶಿ ಯುಕೆ ಅಝೀಝ್ ದಾರಿಮಿ ಯವರು ದುಅಃ ನೆರವೇರಿಸಿದರು.ಎಸ್ ಕೆ ಎಸ್ ಎಫ್ ಕೇಂದ್ರ ಸಮಿತಿ ಕಾರ್ಯದರ್ಶಿ ಸದಕತುಲ್ಲಾ ಫೈಝೀ ಯವರು ಪ್ರಾಸ್ತಾವಿಕ ವಾಗಿ ಮಾತನಾಡಿ ಕಾರ್ಯಕರ್ತರು ಮುಂದಿನ ಹಜ್ಜ್ ದಿನಗಳಲ್ಲಿ ಇನ್ನಷ್ಟು ಉತ್ತಮ ಗುಣಮಟ್ಟದ ಸೇವೆಯನ್ನು ನೀಡುವ ಬಗ್ಗೆ ಮಾಹಿತಿ ಯನ್ನು ನೀಡಿದರು.ಜಿಲ್ಲೆಯ ಸಮಸ್ತ ಸಂಘಟನೆಯ ನಾಯಕರಾದ ಮಾಹಿನ್ ದಾರಿಮಿ,ರಿಯಾಝ್ ರಹ್ಮಾನಿ,ಅಸ್ಪಾಖ್ ಫೈಝಿ,ಅಬುಸ್ವಾಲಿಹ್ ಫೈಝೀ, ಸಾಂದರ್ಭಿಕ ವಾಗಿ ಮಾತನಾಡಿದರು.

ಹಜ್ಜಾಜಿಗಳಾದ ಯಹ್ಯಾ ದಾರಿಮಿ, ಇಲ್ಯಾಸ್ ಅರ್ಷದಿ,ಕುಕ್ಕಾಜೆ ಅಬೂಬಕ್ಕರ್ ಹಾಜಿ ಉಸ್ತಾದ್, ಅಬ್ದುಲ್ ರಶೀದ್ ಅಝ್ಹರಿ,ಲತೀಫ್ ದರ್ಸೀ,ಮಜೀದ್ ಹುದವಿ,ಅಶ್ರಫ್ ಫೈಝೀ, ಹನೀಫೀ,ಕೌಸರೀ ಮತ್ತು ಮಕ್ಕತುಲ್ ಮುಕರ್ರಮಾ ಸಮಸ್ತ ಸಂಘಟನೆಯ ಕಾರರ್ಯಕರ್ತರಾದ ಶರೀಫ್ ಮಠ,ಖಲೀಲ್ ಬಜ್ಪೆ,ಲುಕ್ಮಾನ್ ಪಾಂಡವರಕಲ್ಲು,ರಫೀಖ್ ಸಾಲೆತ್ತೂರು,ಅಲ್ಲದೇ ಇನ್ನಿತರ ಪ್ರಮುಕರು ಭಾಗವಹಿಸಿದ್ದರು.ಕಾರ್ಯಕ್ರಮ ದಲ್ಲಿ ಇದೇ ಬರುವ ನವಂಬರ್ ಮೂರರಂದು ಉದ್ಘಾಟನೆ ಗೊಳ್ಳಲಿರುವ ಮಂಗಳೂರಿನ ಬಂದರ್ ನಲ್ಲಿ ಕಟ್ಟಲಾದ ಸಮಸ್ತಾಲಯ ಕಟ್ಟಡ ದ ನಿರ್ಮಾಣಕ್ಕೆ ಕಾರಣರಾದ ಮದ್ರಸಾ ಮೇನೇಜ್ಮೆಂಟ್ ಅಧ್ಯಕ್ಷರಾದ ಐ ಮೊಯಿದಿನಬ್ಬ ಹಾಜಿಯನ್ನು ಮಕ್ಕತುಲ್ ಮುಕರ್ರಮ ಎಸ್ಕೆ ಎಸ್ ಎಸ್ ಎಫ್ ಮತ್ತು ದಾರುನ್ನೂರ್ ಎಜುಕೇಶನ್ ಸೆಂಟರ್ ಮಕ್ಕಾ ವತಿಯಿಂದ ಸನ್ಮಾನಿಸಲಾಯಿತು.


Spread the love