ಮಠಗಳ ಬಗ್ಗೆ ಮಾತನಾಡುವ ವಿಚಾರವಾದಿಗಳು ಮಸೀದಿ ಪ್ರವೇಶ ಮಾಡಲಿ: ಪ್ರಮೋದ್ ಮುತಾಲಿಕ್

Spread the love

ಮಠಗಳ ಬಗ್ಗೆ ಮಾತನಾಡುವ ವಿಚಾರವಾದಿಗಳು ಮಸೀದಿ ಪ್ರವೇಶ ಮಾಡಲಿ: ಪ್ರಮೋದ್ ಮುತಾಲಿಕ್

ಮಂಗಳೂರು: ಮಠಗಳ ಅಶ್ಪಶ್ರ್ಯತೆಯ ಬಗ್ಗೆ ಮಾತನಾಡುವ ಬುದ್ದಿಗೇಡಿ ವಿಚಾರವಾದಿಗಳು ತಾಕತ್ತಿದ್ದರೆ ಮಸೀದಿಯ ಒಳಗಡೆ ಪ್ರವೇಶ ಮಾಡಲಿ ಎಂದು ಶ್ರೀರಾಮ ಸೇನೆಯ ನಾಯಕ ಪ್ರಮೋದ್ ಮುತಾಲಿಕ್ ಸವಾಲು ಹಾಕಿದ್ದಾರೆ.

image005pramod-muthalik-20161019-005 image002pramod-muthalik-20161019-002

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ ಕೆಲವೇ ಕೆಲವು ಬುದ್ದಿಗೇಡಿ, ಲಜ್ಜೆಗೇಡಿ ವಿಚಾರವಾದಿಗಳು ಎನಿಸಿಕೊಂಡವರು ಧಾರ್ಮಿಕ ನೆಲೆಯ ಕರ್ನಾಟಕವನ್ನು ಗೊಂದಲದ ಗೂಡಾಗಿ ಮಾಡಿ ಕೇವಲ ಪ್ರಚಾರಕ್ಕಾಗಿ ಮುಸ್ಲಿಂ ಹಾಗೂ ಕ್ರಿಶ್ಚಿಯನ್ ಸಮುದಾಯದ ಏಜೆಂಟರಂತೆ ವರ್ತಿಸುತ್ತಿದ್ದಾರೆ. ಇವರಿಗೆ ನಿಜವಾದ ಕಳಕಳಿ ಇದ್ದರೆ ಸೆಕ್ಯುಲರ್ ವಾದದಲ್ಲಿ ನಂಬಿಕೆ ಇದ್ದರೆ ಮಸೀದಿಯನ್ನು ಪ್ರವೇಶ ಮಾಡಲಿ. ಏಕೆಂದರೆ ಮಸೀದಿಯಲ್ಲಿ ಇತರ ಧರ್ಮಿಯರಿಗೆ ಪ್ರವೇಶ ಇಲ್ಲ ಮಠದ ಅಶ್ಪಶ್ರ್ಯತೆ ಬಗ್ಗೆ ಮಾತನಾಡುವವರು ಮಸೀದಿಯ ಬಗ್ಗೆ ಏಕೆ ಮೌನವಾಗಿದ್ದಾರೆ. ಇವರುಗಳ ಡೋಂಗಿ ವಿಚಾರವಾದ ಬಯಲಾಗಿದೆ. ಒಂದು ವೇಳೆ ಇವರು ಮಠದ ಒಳಗೆ ಪ್ರವೇಶ ಮಾಡಲು ಪ್ರಯತ್ನಿಸಿದರೆ ಇವರು ವಾಪಾಸು ಮನೆಗೆ ಹೋಗುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಟಿಪ್ಪುಸುಲ್ತಾನ್ ಜಯಂತಿ ಕಳೆದ ಬಾರಿ ಆಚರಣೆ ಮಾಡಿದ ಸರಕಾರ ರಾಜ್ಯದಲ್ಲಿ ಶಾಂತಿ ಸೌಹಾರ್ದ ಬೇಕು ಎಂದಾದರೆ ಈ ಬಾರಿ ನವೆಂಬರ್ 10 ರಂದು ಆಚರಿಸಲು ಉದ್ದೇಶಿಸಿರುವ ಟಿಪ್ಪುಸುಲ್ತಾನ್ ಜಯಂತಿಯನ್ನು ವಾಪಾಸು ಪಡೆಯಲಿ. ರಾಜ್ಯಾದ್ಯಂತ ಅಕ್ರೋಶ ವ್ಯಕ್ತವಾಗಿದೆ. ಕೊಲೆಗಡುಕ ಸರಕಾರ ಟಿಪ್ಪು ಸುಲ್ತಾನ್ ಜಯಂತಿಯನ್ನು ಆಚರಣೆ ಮಾಡುತ್ತಿರುವುದು ಮುಸ್ಲಿಂ ಓಟಿಗೋಸ್ಕರವಾಗಿದೆ. ಕನ್ನಡ ವಿರೋಧಿ ಟಿಪ್ಪುಸುಲ್ತಾನ್ 800 ದೇವಸ್ತಾನಗಳನ್ನು ನಾಶ ಮಾಡಿದ್ದು ಮೋಸದಿಂದ ಮೈಸೂರು ಅರಮನೆಯನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸಿದ ವ್ಯಕ್ತಿಗೆ ಬೆಂಬಲ ನೀಡಿದ ಸರಕಾರ ಮುಂದೊಂದು ದಿನ ಒಸಾಮಾ ಬಿನ್ ಲಾದೇನ್ ಅಥವಾ ಔರಂಗಜೇಬನ ಜಯಂತಿಯನ್ನು ಕೂಡ ಆಚರಿಸಲು ಹಿಂದೆ ಮುಂದೆ ನೋಡುವುದಿಲ್ಲ ಆದ್ದರಿಂದ ರಾಜ್ಯದ ಜನತೆ ಟಿಪ್ಪು ಸುಲ್ತಾನ್ ಜಯಂತಿಯನ್ನು ಬಲವಾಗಿ ವಿರೋಧಿಸಬೇಕು ಎಂದರು.

image006pramod-muthalik-20161019-006 image004pramod-muthalik-20161019-004 image001pramod-muthalik-20161019-001

ಚಲೊ ಉಡುಪಿ ಕಾರ್ಯಕ್ರಮಕ್ಕೆ ವಿರುದ್ದವಾಗಿ ಕೆಲವೊಂದು ಸಂಘಟನೆಗಳು ಆಯೋಜಿಸಿದ ಕನಕ ನಡೆ ಕಾರ್ಯಕ್ರಮಕ್ಕೆ ಶ್ರೀರಾಮ ಸೇನೆ ಸಂಘಟನೆ ಸಂಪೂರ್ಣ ಬೆಂಬಲ ನೀಡುತ್ತದೆ. ಎಲ್ಲಾ ಜಾತಿಯ ಮಠಗಳು ಯಾವುದೇ ಸರಕಾರ ಮಾಡದ ಶೈಕ್ಷಣಿಕ ಹಾಗೂ ಸಾಮಾಜಿಕ ಸೇವೆಯನ್ನು ಮಾಡುತ್ತಾ ಬಂದಿವೆ. ಕೆಲವೇ ಬುದ್ದಿ ಜೀವಿಗಳು ಮಾಡುತ್ತಿರುವ ವಿರೋಧ ಸರಿಯಲ್ಲ. ಉಡುಪಿ ಮಠದಲ್ಲಿ ಯಾವುದೇ ರೀತಿಯ ಪಂಕ್ತಿಬೇಧ ಇಲ್ಲ ಈ ಬಗ್ಗೆ ಸ್ವಾಮೀಜಿಗಳೇ ಸ್ಪಷ್ಟೀಕರಣ ನೀಡಿದ್ದಾರೆ.

ಅಯೋಧ್ಯೆಯಲ್ಲಿ ಕೇಂದ್ರ ಸರಕಾರ ನಿರ್ಮಿಸಲು ಉದ್ದೇಶಿಸಿರುವ ಮ್ಯೂಜಿಯಂ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಮುತಾಲಿಕ್ ಅವರು ನರೇಂದ್ರ ಮೋದಿಯವರಿಗೆ ಗೆಲುವು ನೀಡಿದ್ದು ಹಿಂದೂಗಳು, ಹಿಂದುತ್ವದ ನೆಲೆಯಲ್ಲಿ ರಾಮಮಂದಿರ ನಿರ್ಮಾಣ ಮತ್ತು ಗೋಹತ್ಯ ನಿಷೇಧ ಕಾನೂನು ಹಾಗೂ ಪಾಕಿಸ್ತಾನಕ್ಕೆ ಬೆಂಬಲ ನೀಡಬೇಕು ಎಂಬ ಉದ್ದೇಶದಿಂದ ಅಧಿಕಾರಕ್ಕೆ ತಂದಿದ್ದು ಆದ್ದರಿಂದ ನೂರಕ್ಕೆ ನೂರು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಆಗಬೇಕು ಮತ್ತು ಅದನ್ನು ಅವರು ಮಾಡುತ್ತಾರೆ ಎಂಬ ವಿಶ್ವಾಸವಿದೆ ಎಂದರು.

ಪಾಕಿಸ್ತಾನ ಕುರಿತ ಕರಣ್ ಜೋಹರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು ಕಲೆಯ ದೃಷ್ಟಿಯಿಂದ ಪಾಕಿಸ್ತಾನದಿಂದ ಬರುತ್ತಿರುವ ಸಂಗೀತಗಾರರು ನಟರು ಹಾಗೂ ಕ್ರಿಕೆಟಿಗರನ್ನು ನಾವು ಬಹಿಷ್ಕಾರ ಮಾಡಬೇಕು. ಎಲ್ಲಿಯವರೆಗೆ ಪಾಕಿಸ್ತಾನ ಪ್ರಾಯೋಜಿತ ಉಗ್ರಗಾಮಿ ಚಟುವಟಿಕೆ ನಿಲ್ಲುವುದಿಲ್ಲ ಅಲ್ಲಿಯವರೆಗೆ ಅವರಿಗೆ ಪ್ರವೇಶ ನೀಡಬಾರದು. ಪಾಕಿಸ್ತಾನದ ನಟರ ಯಾವುದೇ ಸಿನಿಮಾ ಕರ್ನಾಟಕದಲ್ಲಿ ಪ್ರದರ್ಶಿಸಲು ಶ್ರೀರಾಮ ಸೇನೆ ಬಿಡುವುದಿಲ್ಲ ಎಂದರು.

ಏಕ ರೂಪಕಾನೂನು ಸಂಹಿತೆಗೆ ವ್ಯತಿರಿಕ್ತವಾಗಿ ಎರಡು ರೀತಿಯ ಕಾನೂನು ಇರುವ ಎಕೈಕ ದೇಶ ಭಾರತ. ಜಗತ್ತಿನಲ್ಲಿ ಎಲ್ಲಿಯೂ ಕೂಡ ಇಂತಹ ಕಾನೂನು ಇಲ್ಲ. ಇನ್ನೂ ಕೂಡ ಇದರ ವಿರುದ್ದ ಚರ್ಚೆ ಮಾಡುತ್ತಿರುವ ಮುಸ್ಲಿಂರು ಈ ದೇಶದಲ್ಲಿ ಇರಲು ಸಾಧ್ಯವಿಲ್ಲ ಅಂತಹವರು ಪಾಕಿಸ್ತಾನಕ್ಕೆ ಹೋಗುವುದು ಉತ್ತಮ ಎಂದರು.


Spread the love