ಮಣಿಪಾಲದ ಡ್ರಗ್ಸ್ ದಂಧೆ ಕಡಿವಾಣಕ್ಕೆ 10 ದಿನದ ಗಡುವು ನೀಡಿದ ಬಿಜೆಪಿ ಜಿಲ್ಲಾ ಯುವ ಮೋರ್ಚಾ
ಮಣಿಪಾಲ ವ್ಯಾಪಕವಾಗಿ ನಡೆಯುತ್ತಿರುವ ಡ್ರಗ್ಸ್ ದಂದೆಗೆ ಕಡಿಮಾಣ ಹಾಕುವಂತೆ ಉಡುಪಿ ಜಿಲ್ಲಾ ಯುವ ಮೋರ್ಚಾ ವತಿಯಿಂದ ಮಣಿಪಾಲ ಪೋಲಿಸ್ ವೃತ್ತ ನಿರೀಕ್ಷಕರಿಗೆ ಮನವಿ ಸಲ್ಲಿಸಲಾಯಿತು
ಮಣಿಪಾಲ ಎನ್ನುವುದು ಅಂತರಾಷ್ಟ್ರೀಯ ಮಟ್ಟದಲ್ಲಿ ಬಹಳ ಖ್ಯಾತಿಯನ್ನ ಶೈಕ್ಷಣಿಕವಾಗಿ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಗಳಿಸಿ ಭಾರತಕ್ಕೆ ಗೌರವ ದೊರಕಿಸಿಕೊಟ್ಟಿದೆ ಮಣಿಪಾಲ ವ್ಯಾಪ್ತಿಯಲ್ಲಿ ದೇಶವಿದೇಶದ ಸಾವಿರಾರು ವಿದ್ಯಾರ್ಥಿಗಳು ಶಿಕ್ಷಣಕ್ಕಾಗಿ ಇಲ್ಲಿ ವಾಸ್ತವ್ಯವಿದ್ದು ಅವರನ್ನು ಗುರಿಯಾಗಿಸಿ ವೀಕೆಂಡ್ ಪಾರ್ಟಿಗಳು ಮೋಜು-ಮಸ್ತಿಗಳ ಹೆಸರಿನಲ್ಲಿ ಡ್ರಗ್ಸ್ ದಂಧೆ ವ್ಯಾಪಕವಾಗಿ ಹಬ್ಬುತ್ತಿರುವುದು ವಿಷಾದನೀಯ ಹಾಗೆ ಸ್ಥಳೀಯ ಹಾಗೂ ಪರಸ್ಥಳದ ವಿದ್ಯಾರ್ಥಿಗಳನ್ನ ಹೋಂ ಸ್ಟೇಗಳಲ್ಲಿ ನಡೆಯುವ ವೀಕೆಂಡ್ ಪಾರ್ಟಿಗಳ ಹೆಸರಿನಲ್ಲಿ ಆಕರ್ಷಿಸಿ ಅಲ್ಲಿ ಡ್ರಗ್ಸ್ ಹಾಗೂ ಅನೈತಿಕ ಚಟುವಟಿಕೆಗಳಿಗೆ ಅವರನ್ನು ಬೀಳಿಸಿ ಅವರನ್ನ ದಾರಿ ತಪ್ಪಿಸುತ್ತಿರುವ ಒಂದು ಬೃಹತ್ ಜಾಲದಲ್ಲಿ ಹಲವಾರು ಕಾಣದ ಕೈಗಳು ಕೈವಾಡ ಇದ್ದು ಈ ಬಗ್ಗೆ ಪೊಲೀಸ್ ಇಲಾಖೆ ಶೀಘ್ರವೇ ಎಚ್ಚೆತ್ತು ಈ ಡ್ರಗ್ಸ್ ದಂಧೆ ಹಾಗೂ ಅನೈತಿಕ ಚಟುವಟಿಕೆಗಳ ವಿರುದ್ಧ ಸೂಕ್ತ ಕಾನೂನು ಕ್ರಮವನ್ನು ತೆಗೆದುಕೊಳ್ಳುವಂತೆ ಮನವಿ ಸಲ್ಲಿಸಿ 10 ದಿನಗಳ ಒಳಗೆ ಸೂಕ್ತ ಕ್ರಮ ಕೈಗೊಳ್ಳಲು ಗಡುವು ನೀಡಲಾಯಿತು. ಇಲ್ಲವಾದಲ್ಲಿ ಉಡುಪಿ ಜಿಲ್ಲಾ ಯುವಮೋರ್ಚಾದ ನೇತೃತ್ವದಲ್ಲಿ ಅಹೋರಾತ್ರಿ ಪ್ರತಿಭಟನೆ ಮಾಡುವುದಾಗಿ ತಿಳಿಸಲಾಯಿತು
ಇದಕ್ಕೆ ಪ್ರತಿಕ್ರಿಯೆ ನೀಡಿದ ಮಣಿಪಾಲ ಪೋಲಿಸ್ ವ್ರತ್ತನಿರೀಕ್ಷಕ ದೇವರಾಜ್ ಈಗಾಗಲೇ ನಾವು ಸಾಕಷ್ಠು ಕ್ರಮಕೈಗೊಂಡಿದ್ದು ಇನ್ನು ಕಠಿಣ ಕ್ರಮ ಕೈಗೊಳ್ಳುವ ಭರವಸೆ ನೀಡಿದರು
ಈ ಸಂದರ್ಭದಲ್ಲಿ ಯುವಮೋರ್ಚಾ ಉಡುಪಿ ಜಿಲ್ಲಾ ಅದ್ಯಕ್ಷರಾದ ಪ್ರಥ್ವೀರಾಜ್ ಶೆಟ್ಟಿ ಬಿಲ್ಲಾಡಿ , ರಾಜ್ಯ ಯುವ ಮೋರ್ಚಾ ಕಾರ್ಯದರ್ಶಿ ವಿಕ್ಯಾತ್ ಶೆಟ್ಟಿ, ಜಿಲ್ಲಾ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶಶಾಂಕ್ ಶಿವತ್ತಾಯ, ಅಭಿರಾಜ್ ಸುವರ್ಣ, ಜಿಲ್ಲಾ ಯುವಮೋರ್ಚಾ ಉಪಾದ್ಯಕ್ಷ ಪ್ರಸಾದ್ ಬಿಲ್ಲವ ,ಜಿಲ್ಲಾ ಕಾರ್ಯದರ್ಶಿ ಪ್ರದೀಪ್ ಕುಂದರ್, ಬಿಜೆಪಿ ಯುವ ಮುಖಂಡ ಅಕ್ಷಿತ್ ಶೆಟ್ಟಿ ಹೆರ್ಗ ,ಜಿಲ್ಲಾ ಕಾರ್ಯಕಾರಿಣಿಯ ಸದಸ್ಯರಾದ ಪೃಥ್ವಿರಾಜ್ ಮಣಿಪಾಲ, ದರ್ಶಿತ್ ಶೆಟ್ಟಿ ಕಾಪು ಮಂಡಲ ಅಧ್ಯಕ್ಷರಾದ ಸೋನು ಪಾಂಗಾಳ ಹಾಗೂ ಇನ್ನಿತರ ಯುವ ಮೋರ್ಚಾದ ಪದಾಧಿಕಾರಿಗಳು ಈ ವೇಳೆ ಉಪಸ್ಥಿತರಿದ್ದರು.