ಮಣಿಪಾಲದಲ್ಲಿ ಡಿವೈಡರಿಗೆ ಡಿಕ್ಕಿ ಹೊಡೆದ ಕಾರು – ವಿದ್ಯಾರ್ಥಿ ಸಾವು

Spread the love

ಮಣಿಪಾಲದಲ್ಲಿ ಡಿವೈಡರಿಗೆ ಡಿಕ್ಕಿ ಹೊಡೆದ ಕಾರು – ವಿದ್ಯಾರ್ಥಿ ಸಾವು

ಮಣಿಪಾಲ: ಕಾರೊಂದು ರಸ್ತೆಯ ಡಿವೈಡರಿಗೆ ಡಿಕ್ಕಿ ಹೊಡೆದ ಪರಿಣಾಮ ವಿದ್ಯಾರ್ಥಿಯೋರ್ವ ಮೃತಪಟ್ಟು ಮೂವರು ತೀವ್ರ ಗಾಯಗೊಂಡ ಘಟನೆ ಮಣಿಪಾಲದ ಹಾಟ್ ಸ್ಪೈಸ್ ಹೊಟೇಲ್ ಬಳಿ ಶನಿವಾರ ಮಧ್ಯರಾತ್ರಿ ನಡೆದಿದೆ.

ಮೃತ ವಿದ್ಯಾರ್ಥಿಯನ್ನು ಕಾರು ಚಲಾಯಿಸುತ್ತಿದ್ದ ದೇರಳಕಟ್ಟೆ ನಿಟ್ಟೆ ಇನ್ಸಿಟ್ಯೂಟ್ ವಿದ್ಯಾರ್ಥಿ ಕೇರಳ ಮೂಲದ ಕಣ್ನೂರು ನಿವಾಸಿ ಐವನ್ ಅನಿಲ್ ಕುಮಾರ್ (20) ಎಂದು ಗುರುತಿಸಲಾಗಿದೆ.

ಕಾರಿನಲ್ಲಿದ್ದ ಮೃತ ವಿದ್ಯಾರ್ಥಿಯ ಸ್ನೇಹಿತರಾದ ಮಣಿಪಾಲದ ವಿದ್ಯಾರ್ಥಿಗಳಾದ ವರುಣ್ ವಿಜಿತ್ ಮತ್ತು ದೇರಳಕಟ್ಟೆಯ ವಿದ್ಯಾರ್ಥಿಗಳಾದ ಐರಿನ್, ದೀಪಿಕಾ ಗಾಯಗೊಂಡು ಮಣಿಪಾಲದ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

ಕಾರಿನಲ್ಲಿದ್ದವರು ರಾತ್ರಿ ಹೋಟೆಲಿನಲ್ಲಿ ಊಟ ಮುಗಿಸಿ ಮಣಪಾಲದ ಮಾಂಡವಿ ಪ್ಯಾರಡೈಸ್ ನಲ್ಲಿರುವ ವರುಣ್ ವಿಜಿತ್ ಅವರ ರೂಮಿಗೆ ವಾಪಾಸಾಗುತ್ತಿದ್ದ ವೇಳೆ ಕಾರು ನಿಯಂತ್ರಣ ತಪ್ಪಿ ರಸ್ತೆಯ ಡಿವೈಡರಿಗೆ ಡಿಕ್ಕಿ ಹೊಡೆದಿದ್ದು, ಇದರಿಂದ ಕಾರು ಪಲ್ಟಿಯಾಗಿ ಕಾರು ಚಲಾಯಿಸುತ್ತಿದ್ದ ಐವನ್ ರಸ್ತೆಗೆ ಎಸೆಯಲ್ಪಟು ಕಾರು ಮೈಮೇಲೆ ಬಿದ್ದ ಪರಿಣಾಮ ಗಂಭೀರ ಗಾಯಗೊಂಡು ಆಸ್ಪತ್ರೆ ಸಾಗಿಸುವ ದಾರಿ ಮಧ್ಯದಲ್ಲಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love