ಮತದಾರ ಗುರುತು ಚೀಟಿಗಳನ್ನು ವಿತರಿಸಲು ಸೂಕ್ತ ವ್ಯವಸ್ಥೆಗೆ ಜೆಡಿಎಸ್ ಜಿಲ್ಲಾಧಿಕಾರಿಗೆ ಮನವಿ
ಮಂಗಳೂರು: ಮತದಾರರಿಗೆ ಫೋಟೊ ಮತದಾರ ಗುರುತು ಚೀಟಿ ಗಳನ್ನು ಮನೆ ಮನೆಗಳಿಗೆ ವಿತರಿಸಲು ಮೇ 6 ತನಕ ಬಿಎಲ್ಒ ಗಳಿಗೆ ವ್ಯವಸ್ಥೆಯನ್ನು ಮಾಡಿದ್ದು ಇದೀಗ ಬೂತ್ ಮಟ್ಟದಲ್ಲಿ ಅರ್ಧದಷ್ಟು ಕೆಲಸ ಸಂಪೂರ್ಣಗೊಂಡಿಲ್ಲ.
ಮತದಾರರಿಗೆ ಫೋಟೊ ಗುರುತು ಚೀಟಿ ಗಳು ದೊರಕದೆ ಮತದಾರರು ಗೊಂದಲದಲ್ಲಿದ್ದಾರೆ. ಮೇ.6 ನಂತರ ಮತಗಟ್ಟೆಯಲ್ಲಿ ತೆರಳಿ ಗುರುತು ಚೀ ಟಿ ಪಡೆಯಲು ಜಿಲ್ಲಾದಿಕಾರಿಗಳು ತಿಳಿಸಿರುತ್ತಾರೆ ಆದರೆ ಮತದಾರರು ರಜೆ ಹಾಕಿ ತಮ್ಮ ಹೊಟ್ಟೆಪಾಡಿನ ಕೆಲಸ ಬಿಟ್ಟು ಹೋಗಲು ತಯಾರಿರುವುದಿಲ್ಲ. ಇದರಿಂದ ಮತದಾರರು ಮತದಾನದಿಂದ ವಂಚಿತರಾಗಲು ಚುನಾವಣ ಆಯೋಗ ನೇರ ಹೊಣೆಯಾಗುತ್ತಾರೆ.
ಆದುದರಿಂದ ಮೇ.10ರ ತನಕ ಬಿಎಲ್ಒಗಳು ಮನೆಮನೆಗಳಿಗೆ ತೆರಳಿ ಗುರುತು ಚೀಟ್ ಗಳನ್ನು ವಿತರಣೆ ಮಾಡುವ ವ್ಯವಸ್ಥೆ ಕಲ್ಪಿಸಬೇಕು. ಮಾತ್ರವಲ್ಲ ಮತದಾನ ದಿನವು ಇಂತಹ ಪ್ರತ್ಯೇಕ ವ್ಯವಸ್ಥೆಯನ್ನು ಕಲ್ಪಿಸಬೇಕೆಂದು ಜಿಲ್ಲಾ ಜನತಾದಳ ವಕ್ತಾರ ಸುಶೀಲ್ ನೊರೊನ್ಹ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ