ಮನೆ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಪತ್ತೆ ಹಚ್ಚಿದ ಪೊಲೀಸರು

Spread the love

ಮನೆ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಪತ್ತೆ ಹಚ್ಚಿದ ಪೊಲೀಸರು

ಮಂಗಳೂರು: ಬಂಟ್ವಾಳ ಸುಜೀರ್ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಲ್ಯಾಪ್ ಟ್ಯಾಪ್ ಕಳವು ಮಾಡಿದ ಆರೋಪಿಯನ್ನು ಹಾಗೂ ಇತರ ಕಡೆಗಳಲ್ಲಿ ಮನೆಯಲ್ಲಿ ಚಿನ್ನಾಭರಣ ಮತ್ತು ನಗದು ಕಳವು ಆದ ಬಗ್ಗೆ ಪ್ರಕರಣ ದಾಖಲಾಗಿದ್ದು ಪ್ರಕರಣದ ಆರೋಪಿಯನ್ನು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ಸಬ್ ಇನ್ಸ್ ಪೆಕ್ಟರ್ ಮತ್ತು ಸಿಬ್ವಂದಿಯವರು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

ಸಪ್ಟೆಂಬರ್ 7ರಂದು ಪ್ರಸನ್ನ ಪಿ,ಎಸ್,ಐ ಬಂಟ್ವಾಳ ಗ್ರಾಮಾಂತರ ಠಾಣಾ ಸಿಬಂದಿಗಳೊಂದಿಗೆ ಕಡೆಗೋಳಿ ಎಂಬಲ್ಲಿ ವಾಹನ ತಪಾಸಣೆ ನಡೆಸುತ್ತಿರುವ ಸಮಯ ಒಂದು ಮೋಟಾರು ಸೈಕಲಿನಲ್ಲಿ ಬಂದ ಅಸಾಮಿಯನ್ನು ಪರಿಶೀಲಿಸಿದಾಗ ಆತನು ಮೊಹಮ್ಮದ್ ಇಕ್ಬಾಲ್ @ ಇಕ್ಕು ನು ಬಂಟ್ವಾಳ ಗ್ರಾಮಾಂತರ ಠಾಣೆಯ ಕಳವು ಪ್ರಕರಣದ ಆರೋಪಿಯಾಗಿದ್ದು, ಆತನನ್ನು ವಶಕ್ಕೆ ಪಡೆದು ಠಾಣೆಯಲ್ಲಿ ವಿಚಾರಣೆ ನಡೆಸಿದಾಗ ವಿವಿಧ ಠಾಣೆಗಳ ಸುಮಾರು 5 ಕಳ್ಳತನ ಪ್ರಕರಣಗಳು ಪತ್ತೆಯಾಗಿರುತ್ತದೆ. ವಶಕ್ಕೆ ಪಡೆದ ಸೊತ್ತುಗಳ ವಿವರ ಈ ಕೆಳಗಿನಂತಿದೆ.

1] ಸುಮಾರು 14 ಗ್ರಾಂ ತೂಕದ ಚಿನ್ನದ ಬೆಲೆ ರೂ 32,000/

2] ಲ್ಯಾಪ್ ಟ್ಯಾಪ್ ಸುಮಾರು 20,000/

3]ಮೊಬೈಲ್ ಸೆಟ್ಟನ್ನು 5,000/ ನ್ನು

4]ಮೋಟಾರು ಸೈಕಲ್ ಆಗಿದ್ದು ಇದರ ಅಂದಾಜು ಬೆಲೆ ರೂ 40,000/

5]ಕಾಣಿಕೆ ಡಬ್ಬಿ

ಆರೋಪಿ ಮಹಮ್ಮದ್ ಇಕ್ಬಾಲ್ @ ಇಕ್ಕು ನಿಂದ ವಶಪಡಿಸಿಕೊಳ್ಳಲಾಗಿದೆ’ ಆರೋಪಿಯು ಸವಾರಿ ಮಾಡುತ್ತಿದ್ದ ಮೋಟಾರು ಸೈಕಲ್ ಕೇರಳ ಎಂಬಲ್ಲಿಂದ ಕಳವು ಮಾಡಿದ್ದಾಗಿದೆ

ಆರೋಪಿಯು ಈ ಹಿಂದೆ ಕೂಡ ಜಿಲ್ಲೆ ಮತ್ತು ಹೊರಜಿಲ್ಲೆಯಲ್ಲಿ ಕಳ್ಳತನ ನಡೆಸಿ ಹಲವಾರು ಠಾಣೆಗಳಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಈ ಪ್ರಕರಣದಲ್ಲಿ ಪತ್ತೆ ಹಚ್ಚುವರೇ ಮಾನ್ಯ ಪೊಲೀಸು ಅಧೀಕ್ಷಕರ ನಿರ್ದೇಶನ, ಹೆಚ್ಚುವರಿ ಪೊಲೀಸು ಅಧೀಕ್ಷಕರು ದ,ಕ ಜಿಲ್ಲೆ ರವರ ಮಾರ್ಗದರ್ಶನ, ಸಹಾಯಕ ಪೊಲಿಸು ಅಧೀಕ್ಷಕರು ಬಂಟ್ವಾಳ ಉಪ ವಿಭಾಗ ಪೊಲೀಸು ವೃತ್ತ ನಿರೀಕ್ಷಕರು ಬಂಟ್ವಾಳ ಮತ್ತು ಬಂಟ್ವಾಳ ಗ್ರಾಮಂತರ ಪೊಲಿಸು ಠಾಣಾ ಪೊಲೀಸು ಉಪ ನಿರೀಕ್ಷರಾದ ಪ್ರಸನ್ನ ಎಂ,ಎಸ್, ಬಂಟ್ವಾಳ ನಗರ ಠಾಣಾ ಅಪರಾಧ ವಿಭಾಗದ ಪೊಲೀಸು ಉಪ ನಿರೀಕ್ಷಕರಾದ ಹರೀಶ್ ಎಮ್ ,ಆರ್, ಪ್ರೋ ಪಿ.ಎಸ್.ಐ ಅರುಣ್, ಎ,ಎಸ್,ಐ ಸಂಜೀವ್, ಹೆಚ್,ಸಿ ಗಳಾದ ಸುರೇಶ್ ಕುಮಾರ್, ಜನಾರ್ದನ , ರಾಧಾಕೃಷ್ಣ, ಸುರೇಶ್ ಪಡಾರ್ ಪಿ,ಸಿಗಳಾದ ನಜೀರ್, ಮನೋಜ್, ಕುಮಾರ್, ವಿವೇಕ್, ಮತ್ತು ಕಿರಣ್ ರವರು ಈ ಪ್ರಕರಣವನ್ನು ಭೇದಿಸಲು ಯಶಸ್ವಿಯಾಗಿದ್ದಾರೆ


Spread the love