ಮನೆಗೆ ಅಕ್ರಮ ಪ್ರವೇಶ ಮಾಡಿ ಮಹಿಳೆಯರ ಮೇಲೆ ದೌರ್ಜನ್ಯವೆಸಗಿದ ಪೋಲಿಸರ ಮೇಲೆ ಕ್ರಮಕ್ಕೆ ಎಸ್ ಡಿಪಿಐ ಒತ್ತಾಯ

Spread the love

ಮನೆಗೆ ಅಕ್ರಮ ಪ್ರವೇಶ ಮಾಡಿ ಮಹಿಳೆಯರ ಮೇಲೆ ದೌರ್ಜನ್ಯವೆಸಗಿದ ಪೋಲಿಸರ ಮೇಲೆ ಕ್ರಮಕ್ಕೆ ಎಸ್ ಡಿಪಿಐ ಒತ್ತಾಯ

ಮಂಗಳೂರು: ಮನೆಗಳಿಗೆ ಅಕ್ರಮ ಪ್ರವೇಶ ಮಾಡಿ ಮಹಿಳೆಯರಿಗೆ ದೌರ್ಜನ್ಯವೆಸಗಿ ಅಗೌರವ ತೋರಿಸಿದ ಪೊಲೀಸರ ಮೇಲೆ ಕ್ರಮ ಜರುಗಿಸುವಂತೆ ಎಸ್,ಡಿ.ಪಿ.ಐ ಒತ್ತಾಯ ಮಾಡಿದೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಇಕ್ಬಾಲ್ ಬೆಳ್ಳಾರೆ ಮೇ 26 ಶುಕ್ರವಾರದಂದು ಜುಮಾ ನಮಾಝ್ ಮುಗಿಸಿಕೊಂಡು ಮನೆಗೆ ಹಿಂತಿರುಗುತ್ತಿದ್ದ ಮುಸ್ಲಿಂ ಯುವಕರಿಗೆ ಸಂಘಪರಿವಾರದ ಗೂಂಡಾಗಳಾದ ಮಿಥುನ್ ಮತ್ತುತಂಡ ಚೂರಿಯಿಂದ ಇರಿದು ಕೊಲೆಗೆ ಯತ್ನಿಸಿ ಕೋಮು ಗಲಭೆಗೆ ಪ್ರಯತ್ನಿಸಿ 20 ದಿನಗಳು ಕಳೆದರೂ ಪೊಲೀಸರು ನೈಜ ಆರೋಪಿಗಳನ್ನು ಬಂಧಿಸಲು ವಿಫಲರಾಗಿದ್ದಾರೆ. ಇದರ ಮುಂದುವರಿದ ಭಾಗವಾಗಿ ಇನ್ನೂ ನಿಷೇಧಾಜ್ಞೆ ಜಾರಿಯಲ್ಲಿರುವಾಗಲೇ ಜೂನ್ 13ರಂದು ಸಂಜೆ ಹೊತ್ತಿಗೆ ಖಲೀಲ್ ಎಂಬ ಮುಸ್ಲಿಂ ಯುವಕನಿಗೆ ಹಿಂ.ಜಾ.ವೇ ಜಿಲ್ಲಾಧ್ಯಕ್ಷನಾದ ರತ್ನಾಕರ ಶೆಟ್ಟಿ ಮತ್ತುತಂಡದವರು ಚೂರಿಯಿಂದ ಇರಿದು ದಾಂಧಲೆ ನಡೆಸಿ ಮತ್ತೆ ಕೋಮು ಗಲಭೆಗೆ ಯತ್ನಿಸಿದ್ದು, ಇದು ಸಂಘಪರಿವಾರದ ಒಂದು ಪೂರ್ವಯೋಜಿತ ಕೃತ್ಯವಾಗಿದ್ದು ಇವರ ವಿರುಧ್ಧ ಕ್ರಮ ಕೈಗೊಳ್ಳಬೇಕಾದ ಪೊಲೀಸರುಕೂಡ ಮುಸ್ಲಿಮರ ಮೇಲೆ ಕ್ರೌರ್ಯ ಮೆರೆಯುತ್ತಿದ್ದಾರೆ.

ಪೊಲೀಸರಾದ ಬಂಟ್ವಾಳ ನಗರ ಠಾಣ ಉಪ ನಿರೀಕ್ಷಕ ರಕ್ಷಿತ್ ಗೌಡ , ಪೊಲೀಸ್ ಸಿಬ್ಬಂದ್ದಿಗಳಾದ ಲಕ್ಷಣ್ ,ವಿಜಯ ಕೃಷ್ಣ , ಉದಯ ಕುಮಾರ್ ಭಟ್, ಮತ್ತು ರಾಜೇಶ ಹಾಗೂ ಇನ್ನಿತರರು ಆರೋಪಿಗಳ ಹುಡುಕಾಟದ ನೆಪದಲ್ಲಿಅಮಾಯಕ ಮುಸ್ಲಿಮರ ಮನೆಗೆ ದಾಳಿ ನಡೆಸಿದ್ದು ಪೊಲೀಸರ ದೌರ್ಜನ್ಯದಿಂದ ಹಲವಾರು ಮಹಿಳೆಯರು ಗಾಯಗೊಂಡಿದ್ದು ಮನೆಗಳ ಕಿಟಕಿ ಬಾಗಿಲುಗಳು ಮುರಿದಿದ್ದು ಮನೆಯ ಪೀಠೋಪಕರಣಗಳು ಮನೆ ಸಾಮಗ್ರಿಗಳು ಹಾನಿಗೊಂಡಿರುತ್ತದೆ. ಕಲ್ಲಡ್ಕದ ಕೆ ಸಿ ರೋಡ್ ನಿವಾಸಿ ನಪೀಸ (52) ರವರ ಮನೆಗೆ ರಾತ್ರಿ 2 ಘಂಟೆ ಹೊತ್ತಿಗೆ ದಾಳಿ ನಡೆಸಿದ ಪೊಲೀಸರು ಮನೆಯ ಬಾಗಿಲು ಬಡಿದು ಬಾಗಿಲು ತೆರೆಯುತ್ತಿದ್ದಂತೆ ಪೊಲೀಸರ ಪೈಕಿ ಹಲವು ಮಂದಿ ಮನೆಯೊಳಗೆ ಪ್ರವೇಶಿಸಿ ಮಗ ಇಕ್ಬಾಲ್ ಎಲ್ಲಿ ಎಂದು ಕೇಳಿದರು – ಇಲ್ಲ ಎಂದು ಹೇಳಿದಾಗ ಅವರು ನೆಪೀಸರವರನ್ನು ದೂಡಿ ಹಾಕಿ ಮತ್ತೊಬ್ಬ ಮಗನಾದ ಮುಸ್ತಾಪರ ಕುತ್ತಿಗೆ ಹಿಡಿದು ಬಿಗಿದು ಎಳೆದಾಡಿದ್ದಾರೆ. ಮನೆಯಲ್ಲಿರುನ ಹೆಣ್ಣು ಮಕ್ಕಳು ಗೊಗರೆದರೂ ಪೊಲೀಸರು ಕೌರ್ಯ ನಿಲ್ಲಿಸದೆ ಬೂಟ್ ಕಾಲಿನಲ್ಲಿ ಹೊಡೆದು ತಾಯಿ ಮತ್ತು ಮಗನ ಮೇಲೆ ಹಲ್ಲೆ ನಡೆಸಿ ನಂತರ ಹಿರಿಯ ಮಗನಾದ ಸೌದಿ ಅರೇಬಿಯಕ್ಕೆ ಇನ್ನೇನು ಕೆಲವು ದಿನಗಳಲ್ಲಿ ಹೋಗಬೇಕಾಗಿದ್ದ ಅಹ್ಮದ್ ಬಾವರನ್ನು ನಿಂದಿಸಿ , ಅವರ ಪಾಸ್ ಪೋರ್ಟ್ ಮತ್ತು ಮನೆಯ ಪಡಿತರ ಚೀಟಿಯನ್ನು ಕೂಡ ಕಬಳಿಸಿಕೊಂಡು ಹೋಗಿರುತ್ತಾರೆ.

ರಾತ್ರಿ ಸುಮಾರು 01:30 ಘಂಟಗೆ ಕಲ್ಲಡ್ಕದ ಮಾಣಿಮಜಲು ನಿವಾಸಿಯಾದ ಮರಿಯಮ್ಮರವರ ಮನೆಗೆ ದಾಳಿ ನಡೆಸಿದ ಪೊಲೀಸರು ಮನೆಯೊಳಗೆ ಪ್ರವೇಶಿಸಿ ಮಗನಾದ ರಶೀದ್‍ನನ್ನು ಕೇಳಿ ಮನೆಯೋಳಗೆ ರಾದ್ದಾಂತವೇ ಮಾಡಿದರು ಅವನು ಕೂಲಿ ಕೆಲಸ ಮಾಡುವವ ಯಾವುದೇ ಕೇಸುಗಳಲ್ಲಿ ಅವನಿಲ್ಲ ಎಂದಾಗ ತಂದೆ ತಾಯಿಯನ್ನು ಉಚ್ಚ ಸ್ವರದಿಂದ ಬೈದು ಹಲ್ಲೆಗೆ ಮುಂದಾಗಿದ್ದಾರೆ .ಮೊದಲೇ ಹೃದಯ ರೋಗ , ಬಿಪಿ, ಮುಂತಾದ ಅನಾರೋಗ್ಯದಿಂದ ಬಳಲುತ್ತಿದ್ದ ಮರಿಯಮ್ಮ ಇದೀಗ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅದೇ ರೀತಿ ಕಲ್ಲಡ್ಕದ ಮಾನಿಮಜಲು ನಿವಾಸಿ ರುಖಿಯ್ಯರವರ ಮನೆಗೂ ರಾತ್ರಿ ಹೊತ್ತು ದಾಳಿ ನಡೆಸಿ ಪೀಠೋಪಕರಣಗಳನ್ನು ಧ್ವಂಸಗೊಳಿಸಿದ್ದಾರೆ.

ಕಲ್ಲಡ್ಕದ ಮೈಮೂನ ಎಂಬವರ ಮನೆಗೂ ದಾಳಿ ನಡೆಸಿದ ಪೊಲೀಸರ ತಂಡ ಮಹಿಳೆಯನ್ನು ಏಕ ವಚನದಲ್ಲಿ ನೀಚವಾಗಿ ಬೈದು ಕಳಿಯುತ್ತಿರುವ ಹೆಣ್ಣು ಮಕ್ಕಳಿಗೆ ಮತ್ತು ತಾಯಿಗೆ ಅಗೌರವವನ್ನು ತೋರಿಸಿ ಮಹಿಳಾ ಪೊಲೀಸರಿಲ್ಲದೆ ಮನೆಯೊಳಗೆ ಅಕ್ರಮ ಪ್ರವೇಶಿಸಿ ದರ್ಪವ ತೋರಿದ್ದಾರೆ. ಹಾಗು ಕೆಲವು ಮನೆಗಳಲ್ಲಿ ಮಹಿಳೆಯರು ಮಾತ್ರವಿದ್ದು ಬಂಟ್ವಾಳ ಉಪ ನಿರೀಕ್ಷಕರಾದ ರಕ್ಷಿತ್‍ಗೌಡ ಮತ್ತುತಂಡವು ಮಹಿಳೆಯರಿಗೆ ಹಲ್ಲೆ ನಡೆಸಿದ್ದಲ್ಲದೆ ಮನೆಯಲ್ಲಿರುವ ಮಹಿಳೆಯರು ‘ಮಹಿಳಾ ಪೊಲೀಸರಿಲ್ಲದೆ ಮನೆಯೊಳಗಡೆ ಹೇಗೆ ತನಿಖೆ ನಡೆಸುತ್ತೀರಿ ಎಂದು ಎಸ್.ಐರಕ್ಷಿತ್‍ರನ್ನು ಕೇಳಿದಾಗ “ನಿನ್ನನ್ನು ಬಂಧಿಸಿ ಠಾಣೆಗೆ ಕೊಂಡೊಯ್ಯಲು ಮಹಿಳಾ ಪೊಲೀಸರ ಅವಶ್ಯವಿಲ್ಲ ನಾವೇ ಸಾಕು” ಎಂದು ಮಹಿಳೆಯರೊಂದಿಗೆ ಕಠೋರವಾಗಿ ವರ್ತಿಸಿ ಮಹಿಳೆಯರನ್ನು ನಿಂಧಿಸಿ ಅಗೌರವ ತೋರಿಸಿದ್ದಾರೆ. ಅದಲ್ಲದೆ ಅದರೊಲ್ಲೊಬ್ಬ ಪೊಲೀಸ್ ಇನ್ನು ಮುಂದಿನ ದಿನಗಳಲ್ಲಿ ನಿನ್ನನ್ನು ಬಂಧಿಸುತ್ತೇನೆಂದು ಮಹಿಳೆಗೆ ಬೆದರಿಕೆ ಒಡ್ಡಿರುತ್ತಾರೆ. ಇದು ಬಹಳ ಅಪಾಯಕಾರಿ ಬೆಳವಣಿಗೆ ಮತ್ತು ಪೊಲೀಸ್ ಇಲಾಖೆಯ ಮೇಲೆ ಜನರಿಗಿರುವ ನಂಬಿಕೆಯನ್ನು ಕಳೆದುಕೊಳ್ಳುವಂತಹಾ ಅಮಾನವೀಯ ಕೃತ್ಯವಾಗಿದೆ.ಆದುದರಿಂದ ಈ ಬಗ್ಗೆ ಮಾನ್ಯ ರಾಜ್ಯ ಪೊಲೀಸ್ ಮಹಾ ನಿರ್ದೇಶಕರು ಮತ್ತು ಗೃಹ ಮಂತ್ರಿಯವರು ಮಧ್ಯ ಪ್ರವೇಶಿಸಿ ತನಿಖೆಯನ್ನು ನಡೆಸಿ ತಪ್ಪಿತಸ್ಥ ಪೊಲೀಸರ ವಿರುಧ್ಧ ಸೂಕ್ತ ಕ್ರಮ ಕೈಗೊಳ್ಳಬೇಕಾಗಿ ಎಸ್.ಡಿ.ಪಿ.ಐ ದ.ಕ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ ಎಮ್ ಅಥಾವುಲ್ಲ ಈ ಮೂಲಕ ಆಗ್ರಹಿಸಿದ್ದಾರೆ.


Spread the love