ಮನೆಯಲ್ಲಿ ಇಸ್ಪೀಟ್ ನಿರತರ ಮೇಲೆ ಕಾಪು ಪೊಲೀಸ್ ದಾಳಿ – 7 ಮಂದಿಯ ಬಂಧನ

Spread the love

ಮನೆಯಲ್ಲಿ ಇಸ್ಪೀಟ್ ನಿರತರ ಮೇಲೆ ಕಾಪು ಪೊಲೀಸ್ ದಾಳಿ – 7 ಮಂದಿಯ ಬಂಧನ

ಕಾಪು: ಕೋವಿಡ್-19 ಕೊರೋನಾ ವೈರಸ್ ತಡೆಗಟ್ಟುವ ಹಿನ್ನೆಲೆ ಲಾಕ್ ಡೌನ್ ಆದೇಶವಿದ್ದರೂ ಕೂಡ ಅದನ್ನು ಉಲ್ಲಂಘಿಸಿ ಸಾರ್ವಜನಿಕ ಸ್ಥಳದಲ್ಲಿ ಇಸ್ಪಿಟ್ ಜುಗಾರಿಯಲ್ಲಿ ನಿರತರಾಗಿದ್ದ 7 ಮಂದಿಯನ್ನು ಕಾಪು ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಪಾಂಗಾಳ ಮೇಲ್ಮನೆ ನಿವಾಸಿ ರಾಜೇಶ್ ಶೆಟ್ಟಿ , ಶಂಕರಪುರ ನಿವಾಸಿ ವಿನ್ಸೆಂಟ್, ಮೂಡಬೆಟ್ಟು ನಿವಾಸಿ ರಮೇಶ್, ಉಳಿಯಾರಗೋಳಿ ನಿವಾಸಿ ದಾವೂದ್ ಬ್ಯಾರಿ, ವಿಶ್ವರಾಜ್, ಪಾಂಗಾಳ ನಿವಾಸಿ ಮುತ್ತಯ್ಯ, ಇನ್ನಂಜೆ ನಿವಾಸಿ ಸುರೇಶ್ ಎಂದು ಗುರುತಿಸಲಾಗಿದೆ.

ಏಪ್ರಿಲ್ 20ರಂದು ಕಾಪು ಪೊಲೀಸ್ ಉಪನಿರೀಕ್ಷಕರಾದ ಐ ಆರ್ ಗಡ್ಡೇಕರ್ ಅವರಿಗೆ ಪಾಂಗಾಳ ಗ್ರಾಮದ ಪಾಂಗಾಳ ಮೇಲ್ಮನೆ ರಾಜೇಶ್ ಶೆಟ್ಟಿ ಎಂಬುವವರ ಮನೆಯ ಒಳಗಡೆ ಇಸ್ಪೀಟ್ ಜುಗಾರಿ ಆಟ ಆಡುತ್ತಿರುವ ಬಗ್ಗೆ ಮಾಹಿತಿ ಬಂದಿದ್ದು, ಮನೆಯ ಹಾಲ್ ನ ಬಲ ಬದಿಯ ಕೋಣೆಗೆ ದಾಳಿ ನಡೆಸಿ ನೋಡುವಾಗ 07 ಜನರು ಕುಳಿತುಕೊಂಡಿದ್ದು ಅದರಲ್ಲಿ ಒಬ್ಬ ಅಂದರ್ ಬಾಹರ್ ಎಂದು ಕೂಗುತ್ತಾ ಇಸ್ಪೀಟ್ ಎಲೆಗಳನ್ನು ಹಾಕುತ್ತಿದ್ದು ಉಳಿದವರು ಹಣವನ್ನು ಪಣವಾಗಿಟ್ಟು ಇಸ್ಪೀಟ್ ಜುಗಾರಿ ಆಡುತ್ತಿದ್ದು 7 ಮಂದಿಯನ್ನು ವಶಕ್ಕೆ ಪಡೆದು ನಂತರ ಆರೋಪಿಗಳು ಮತ್ತು ಸ್ಥಳವನ್ನು ಪರಿಶೀಲಿಸಿದಲ್ಲಿ ಆರೋಪಿಗಳ ಬಳಿ ಇಸ್ಪೀಟ್ ಜೂಜಾಟಕ್ಕೆ ಬಳಸಿದ ನಗದು ರೂಪಾಯಿ 12,130/-, ಅಂದರ್ ಬಾಹರ್ ಆಟಕ್ಕೆ ಬಳಸಲಾದ 52 ಇಸ್ಪೀಟ್ ಎಲೆಗಳು, ನೆಲಕ್ಕೆ ಹಾಸಿದ ಹಳೇ ದಿನ ಪತ್ರಿಕೆಗಳಿದ್ದು ಸೊತ್ತುಗಳನ್ನು ಸ್ವಾಧೀನಪಡಿಸಿಕೊಂಡಿದ್ದಾರೆ

ಈ ಬಗ್ಗೆ ಕಾಪು ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿರುತ್ತದೆ.


Spread the love