ಮರಿಯ ಮಾತೆಯ ಸೊಡೆಲಿಟಿ ವತಿಯಿಂದ ಬಡ ಮಕ್ಕಳಿಗೆ ರೂ. 8 ಲಕ್ಷ ಆರ್ಥಿಕ ಸಹಾಯ ಧನ ವಿತರಣೆ

Spread the love

ಮರಿಯ ಮಾತೆಯ ಸೊಡೆಲಿಟಿ ವತಿಯಿಂದ ಬಡ ಮಕ್ಕಳಿಗೆ ರೂ. 8 ಲಕ್ಷ ಆರ್ಥಿಕ ಸಹಾಯ ಧನ ವಿತರಣೆ

ಮಂಗಳೂರು: ಮರಿಯ ಮಾತೆಯ ಸೊಡೆಲಿಟಿ ಕಥೊಲಿಕ್ ಸೆಂಟರ್ ಹಂಪನಕಟ್ಟಾ ಇವರ ಆಶ್ರಯದಲ್ಲಿ ದ.ಕನ್ನಡ ಜಿಲ್ಲೆಯ ಆಯ್ದ ಹೈಸ್ಕೂಲ್, ಪಿಯುಸಿ, ಪದವಿ ಶಿಕ್ಷಣ ಪಡೆಯುತ್ತಿರುವ ಅರ್ಥಿಕ ವಾಗಿ ಹಿಂದುಳಿದ 125 ವಿದ್ಯಾರ್ಥಿಗಳಿಗೆ ಸುಮಾರು ರೂ. 8 ಲಕ್ಷ ಅರ್ಥಿಕ ಸಹಾಯವನ್ನು ವಿತರಿಸಲಾಯಿತು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಸಾರ್ವಜನಿಕ್ ಪೌಢ ಶಿಕ್ಷಣ ಇಲಾಖೆಯ ಮಾಜಿ ನಿರ್ಧೆಶಕಿ ಫಿಲೋಮಿನಾ ಲೋಬೊರವರು ಮಾತನಾಡಿ ವಿಧ್ಯಾರ್ಥಿಗಳು ತಮ್ಮಲ್ಲಿ ನಿರ್ಧಿಷ್ಟ ಗುರಿ ಜೀವನದಲ್ಲಿ ಆಳವಡಿಸಬೇಕು. ಇನ್ನೊಬ್ಬರು ಪರೀಕ್ಷೆಗಳಲ್ಲಿ ಹೆಚ್ಚಿನ ಅಂಕಗಳನ್ನು ಪಡೆಯುವಾಗ ಅಸೂಯೆ ಪಡದೆ ತನ್ನಲ್ಲಿ ತಾನು ಹೆಜ್ಜೆ ಹೆಜ್ಜೆಗೂ ಹೆಚ್ಚಿನ ಪ್ರಯತ್ನ ಪಡೆದು ಹಚ್ಚು ಅಂಕಗಳನ್ನು ಪಡೆಯಬೇಕು. ಸರಕಾರಿ ಸೇವೆಯಲ್ಲಿ ಹೆಚ್ಚಿನ ಆಸಕ್ತಿ ವಹಿಸಿ ಉನ್ನತ ಹುದ್ದೆಗಳನ್ನು ಅಲಂಕರಿಸಿ ಸಮಾಜಮುಖಿಯಾಗಿ ಸೇವೆ ಮಾಡಬೇಕೆಂದು ಹೇಳಿದರು.

ಎಲೋಷಿಯಸ್ ಕಾಲೇಜಿನ ರೆಕ್ಟರ್ ಹಾಗೂ ಸಂಸ್ಥೆಯ ಅಧ್ಯಾತ್ಮಿಕ ನಿರ್ಧೆಶಕರಾದ ವಂದನೀಯ ಡೈನೀಶಿಯಸ್ ವಾಸ್ರವರು ಮಾತನಾಡಿ ವಿಧ್ಯಾರ್ಥಿಗಳಿಗೆ ಶಿಕ್ಷಣ ಪಡೆಯಲು ಇಂದು ಹಲವು ಸೇವಾ ಸಂಸ್ಥೆಗಳು ಸಹಾಯ ಹಸ್ತವನ್ನು ನೀಡುತ್ತಾ ಬಂದಿದೆ. ಆದರೆ ತಾವು ತಮ್ಮ ಜೀವನದಲ್ಲಿ ತ್ಯಾಗ ಶಿಸ್ತುಗಳೊಂದಿಗೆ ಮುಂದಿನ ಜೀವನದಲ್ಲಿ ಒಳ್ಳೆಯ ಕನಸು ಕಾಣುವ ಮನಸ್ಸು ಹೊಂದಿರಬೇಕು. ಮಾತ್ರವಲ್ಲ ಜೀವನದಲ್ಲಿ ಒಳ್ಳೆಯ ನಾಯಕರಾಗಿ ಪ್ರಜ್ವಲಿಸಬೇಕೆಂದು ಕರೆಕೊಟ್ಟರು.

ಸಂಸ್ಥೆಯ ಅಧ್ಯಕ್ಷರಾದ ವಿವಿಯನ್ ಸಿಕ್ವೇರ ಮಾತನಾಡಿ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಂ ಮನೆ ಮನೆಗೆ ದಿನ ನಿತ್ಯ ವಾರ್ತಾ ಪತ್ರಿಕೆಗಳನ್ನು ವಿತರಿಸಿ ಕಷ್ಟ ಪಟ್ಟು ಹಣ ಸಂಗ್ರಹಿಸಿ ಉನ್ನತ ಶಿಕ್ಷಣವನ್ನು ಪಡೆದರು. ಅವರ ಜೀವನದಲ್ಲಿ ಅವರಿಗೆ ಸಹಾಯ ಮಾಡಿದ ಎಲ್ಲಾ ಸಂಸ್ಥೆಗಳಿಗೆ ಮತ್ತು ದಾನಿಗಳನ್ನು ಅವರು ಸ್ಮರಿಸುತ್ತಿದ್ದರು. ಇಂತಹ ಉತ್ತಮ ಗುಣಗಳನ್ನು ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಲು ಕರೆ ಕೊಟ್ಟರು.

ಕಾರ್ಯದರ್ಶಿ ಲಿಗೋರಿ ಫೆರ್ನಾಂಡಿಸ್ರವರು ಸ್ವಾಗತಿಸಿ, ಕಾರ್ಯಕ್ರಮದ ಸಂಚಾಲಕರಾದ ಸ್ಟೇನ್ಲಿ ಆರ್. ಡಿ`ಕೋಸ್ತ ರವರು ವಂದಿಸಿದರು


Spread the love