ಮಲ್ಪೆ-ತೀರ್ಥಹಳ್ಳಿ ರಾ.ಹೆದ್ದಾರಿ ದುರಸ್ತಿಗಾಗಿ ಮಣಿಪಾಲದಲ್ಲಿ ಅರೆಬೆತ್ತಲೆ ಉರುಳು ಸೇವೆ!

Spread the love

ಮಲ್ಪೆ-ತೀರ್ಥಹಳ್ಳಿ ರಾ.ಹೆದ್ದಾರಿ ದುರಸ್ತಿಗಾಗಿ ಮಣಿಪಾಲದಲ್ಲಿ ಅರೆಬೆತ್ತಲೆ ಉರುಳು ಸೇವೆ!

ಉಡುಪಿ: ಸಂಪೂರ್ಣ ಹದಗೆಟ್ಟಿರುವ ಮಲ್ಪೆ – ತಿರ್ಥಹಳ್ಳಿ ರಾಷ್ಟ್ರೀಯ ಹೆದ್ದಾರಿ ದುರಸ್ತಿಗೆ ಆಗ್ರಹಿಸಿ ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಒಳಕಾಡು ನೇತೃತ್ವದಲ್ಲಿ ಮಣಿಪಾಲದ ಟೈಗರ್ ಸರ್ಕಲ್  ಬಳಿ ರಸ್ತೆಯಲ್ಲಿ ಶುಕ್ರವಾರ ಅರೆಬೆತ್ತಲೆಯಾಗಿ ಉರುಳು ಸೇವೆ ಮಾಡುವ ಮೂಲಕ ವಿನೂತನವಾಗಿ ಪ್ರತಿಭಟಿಸಿದರು.

ಟೈಗರ್ ಸರ್ಕಲ್ ಬಳಿಯಿಂದ ಸ್ಟ್ರೆಚ್ಚರ್ ನಲ್ಲಿ ಗಂಭೀರ ಸ್ಥಿತಿಯಲ್ಲಿ ರೋಗಿಯೊಬ್ಬರನ್ನು ಮಲಗಿಸಿದ ಸ್ಥಿತಿಯ ಅಣಕು ಪ್ರದರ್ಶನ ಮಾಡಿದರೆ ನಿತ್ಯಾನಂದ ಒಳಕಾಡು ಅವರು ಧೂಳುಮಯ ರಸ್ತೆಯಲ್ಲಿ ಅರೆಬೆತ್ತಲೆಯಾಗಿ ಉರುಳು ಸೇವೆ ಮಾಡಿದರು. ಪ್ರತಿಭಟನೆಗೆ ಸ್ಥಳೀಯ ಕಾಲೇಜಿನ ವಿದ್ಯಾರ್ಥಿಗಳು, ರಿಕ್ಷಾ, ಕಾರು ಚಾಲಕರು ಹಾಗೂ ಸಾರ್ವಜನಿಕರು ಸಾಥ್ ನೀಡಿದರು ಅಲ್ಲದೆ ಕೂಡಲೇ ರಸ್ತೆಯನ್ನು ರೀಪೇರಿ ಮಾಡುವಂತೆ ಸರಕಾರವನ್ನು ಒತ್ತಾಯಿಸಿದರು.

ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಕಳೆದ ಬಾರಿ ರಸ್ತೆ ರೀಪೇರಿಗೆ ಆಗ್ರಹಿಸಿ ಇದೇ ಸ್ಥಳದಲ್ಲಿ ಕೊಳಕು ನೀರಿನಲ್ಲಿ ಈಜಿ ಪ್ರತಿಭಟನೆ ಮಾಡಿದ್ದೇವು ಆ ಪ್ರಯುಕ್ತ ಸರಕಾರ ತೇಫೆ ಹಾಕಿದೆ ಮತ್ತೇ ರಸ್ತೆ ಧೂಳಿನಿಂದ ಕೂಡಿದೆ ಜನರಿಗೆ ಕಾಯಿಲೆಗೆ ಬಿದ್ದಿದ್ದಾರೆ. ಸರಕಾರ ಕಣ್ಣು ಮುಚ್ಚಿ ಕುಳೀತಿದೆ. ಇದೇ ರಸ್ತೆಯಲ್ಲಿ ಮಂತ್ರಿಗಳು ಸಂಸದರು ಅಧಿಕಾರಿಗಳು ತಿರುಗಾಡುತ್ತಿದ್ದಾರೆ. ಆದರೆ ರಸ್ತೆ ರಿಪೇರಿ ಮಾಡುವುದನ್ನು ಮರೆತಿದ್ದಾರೆ. ಮಣಿಪಾಲ ಶೈಕ್ಷಣಿಕವಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದು, ಇಂತಹ ಕೆಟ್ಟ ರಸ್ತೆಯನ್ನು ಹೊಂದಿರುವುದು ನಾಚಿಕೇಗೇಡು. ಮಣಿಪಾಲ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಹದಗೆಟ್ಟಿದ್ದು,  ರಸ್ತೆಯು ವಾಹನ  ಸಂಚಾರಕ್ಕೆ ಅಯೊಗ್ಯವಾಗಿದೆ, ಈ ಬಗ್ಗೆ ಸಾಕಷ್ಟು ಮನವಿಗಳು ಸಾರ್ವಜನಿಕರು ಸಂಬಂಧ ಪಟ್ಟ ಇಲಾಖೆಗಳಿಗೆ ಸಲ್ಲಿಸಿದ್ದಾರೆ. ಯಾವೊಂದು ಗುಣ ಮಟ್ಟದ ದುರಸ್ಥಿ ಕಾರ್ಯಗಳು ನಡೆದಿಲ್ಲ.   ದೇಶ ವಿದೇಶದ ವಿದ್ಯಾರ್ಥಿಗಳು ವ್ಯಾಸಂಗಕ್ಕೆ ಇಲ್ಲಿಗೆ ಬರುತ್ತಾರೆ. ಪ್ರತಿಷ್ಠಿತ ಆಸ್ಪತ್ರೆಯಿದ್ದ ಕಾರಣ ದೇಶದ ಏಲ್ಲಾ ರಾಜ್ಯಗಳಿಂದಲೂ ರೋಗಿಗಳು ಇಲ್ಲಿಗೆ ಚಿಕಿತ್ಸೆಗೆ ಬರುತ್ತಾರೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರದ ಸಂದರ್ಭ ಧೂಳು ಏದ್ದೇಳುತ್ತಿದೆ. ಸಂಪೂರ್ಣ ಕಣ್ಣಿನ ದೃಷ್ಠಿ  ಕಳೆದುಕೊಳ್ಳುವ.. ಶ್ವಾಸ ಕೋಶಕ್ಕೆ ಸಂಭಂಧಿತ ಕಾಯಿಲೆ ಭಾಧಿಸುವ ಭೀತಿ ಸಾರ್ವಜನಿಕರಿಗೆ ಎದುರಾಗಿದೆ. ಮೃತ್ಯುವಿಗೆ ಆಹ್ವಾನ ನೀಡುವ ರಸ್ತೆ ಇದಾಗಿದೆ.  ಇನ್ನಾದರೂ ಸರಕಾರ, ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು ರಸ್ತೆಯನ್ನು ರೀಪೇರಿ ಮಾಡುವಂತೆ ಆಗ್ರಹಿಸಿದರು.

 


Spread the love